ಒಂದೆಡೆ ಮಳೆ-ಬೆಳೆ ಎರಡೂ ಕೈಕೊಟ್ಟಿದ್ದರಿಂದ ಸಂಕಷ್ಟದಲ್ಲಿರುವ ರೈತರಿಗೆ 2025-26ನೇ ಸಾಲಿನ ಬೆಳೆವಿಮೆ ಪರಿಹಾರ ಬಿಡುಗಡೆಯಾಗಿದೆ. ಆದರೆ ಪರಿಹಾರದಲ್ಲಿ ತಾರತಮ್ಯ ಎಸಗಲಾಗಿದೆ ಎಂಬ ಆರೋಪ ತಾಲೂಕಿನ ರೈತ ಸಮುದಾಯದಲ್ಲಿ ಕೇಳಿಬಂದಿದೆ.
ಸಂಕಷ್ಟದಲ್ಲಿರುವ ರೈತರಿಗೆ ಬೆಳೆವಿಮೆ ಪರಿಹಾರ ಬಿಡುಗಡೆ
ಎಸ್.ಜಿ. ತೆಗ್ಗಿನಮನಿಕನ್ನಡಪ್ರಭ ವಾರ್ತೆ ನರಗುಂದ
ಒಂದೆಡೆ ಮಳೆ-ಬೆಳೆ ಎರಡೂ ಕೈಕೊಟ್ಟಿದ್ದರಿಂದ ಸಂಕಷ್ಟದಲ್ಲಿರುವ ರೈತರಿಗೆ 2025-26ನೇ ಸಾಲಿನ ಬೆಳೆವಿಮೆ ಪರಿಹಾರ ಬಿಡುಗಡೆಯಾಗಿದೆ. ಆದರೆ ಪರಿಹಾರದಲ್ಲಿ ತಾರತಮ್ಯ ಎಸಗಲಾಗಿದೆ ಎಂಬ ಆರೋಪ ತಾಲೂಕಿನ ರೈತ ಸಮುದಾಯದಲ್ಲಿ ಕೇಳಿಬಂದಿದೆ.ನರಗುಂದ ಮತ್ತು ಕೊಣ್ಣೂರ ಹೋಬಳಿಯಲ್ಲಿ ಬೆಳೆ ವಿಮೆ ತುಂಬಿದ ಎಲ್ಲ ರೈತರಿಗೆ ಸರಿ ಸಮಾನವಾಗಿ ಬೆಳೆ ವಿಮೆ ಪರಿಹಾರ ಬಿಡುಗಡೆ ಮಾಡಬೇಕಾಗಿತ್ತು. ಆದರೆ ಒಬ್ಬ ರೈತರಿಗೆ ಹೆಚ್ಚಿಗೆ ವಿಮೆ ಪರಿಹಾರ ನೀಡಿದರೆ, ಮತ್ತೊಬ್ಬ ರೈತರಿಗೆ ಅತೀ ಕಡಿಮೆ ಬೆಳೆ ವಿಮೆ ಪರಿಹಾರ ನೀಡಲಾಗಿದೆ ಎಂದು ರೈತರು ಆರೋಪಿಸಿದ್ದಾರೆ.
ನಮ್ಮ ಪಕ್ಕದ ಜಮೀನಗೆ ಕಡಲೆ ಪರಿಹಾರ ಹೆಚ್ಚಿಗೆ ಬಂದಿದೆ, ಆದರೆ ನಮ್ಮ ಜಮೀನಿಗೆ ಕಡಲೆ ಪರಿಹಾರ ಅಲ್ಪ ಬಂದಿದೆ ಎಂದು ರಡ್ಡೇರನಾಗನೂರ ಗ್ರಾಮದ ರೈತ ನಾಗಪ್ಪ ಹಾದಿಮನಿ ಆಕ್ರೋಶ ವ್ಯಕ್ತಪಡಿಸಿದ್ದಾರೆ.ಹಿಂದಿನ ವರ್ಷ ತಾಲೂಕಿನಲ್ಲಿ ಹಿಂಗಾರು ಹಂಗಾಮಿನಲ್ಲಿ ಬಿಳಿಜೋಳ 4300 ಹೆಕ್ಟೇರ್, ಗೋಧಿ 3500ಹೆಕ್ಟೇರ್, ಕಡಲೆ 20700 ಹೆಕ್ಟೇರ್, ಕುಸುಬೆ 100 ಹೆಕ್ಟೇರ್, ಸೂರ್ಯಕಾಂತಿ 8645 ಹೆಕ್ಟೇರ್ ಬಿತ್ತನೆಯಾಗಿತ್ತು. ಬೆಳೆ ವಿಮೆ ತುಂಬಿದ ರೈತರ ಬ್ಯಾಂಕ್ ಖಾತೆಗೆ ಬೆಳೆ ವಿಮೆ ಪರಿಹಾರ ಕಳೆದ ಹಲವು ದಿನಗಳಿಂದ ಜಮಾ ಆಗುತ್ತಿರುವುದು ತುಸು ನೆಮ್ಮದಿ ತಂದಿದೆ.
2025-26ನೇ ಸಾಲಿನಲ್ಲಿ ಹಿಂಗಾರು ಹಂಗಾಮಿನಲ್ಲಿ ಬಿತ್ತನೆ ಮಾಡಿದ ವಾಣಿಜ್ಯ ಬೆಳೆಗಳಾದ ಕಡಲೆ, ಜೋಳ, ಸೂರ್ಯಕಾಂತಿ ಬಿತ್ತನೆ ಮಾಡಿದ 9468 ರೈತರ 11232 ಹೆಕ್ಟರ್ ಪ್ರದೇಶಗಳಗೆ ಮಾತ್ರ 13 ಕೋಟಿ 54 ಲಕ್ಷದ 86,300 ರೂ.ಗಳನ್ನು ಈ ತಾಲೂಕಿಗೆ ಜಮಾ ಆಗಿದೆ ಎಂದು ಕೃಷಿ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.ಹಿಂಗಾರು ಬೆಳೆ ವಿಮೆ ಪರಿಹಾರ ಬಿಡುಗಡೆಯಾಗಿದೆ, ಆದರೆ ತಾಲೂಕಿನ ವಿಮೆ ತುಂಬಿದ ಎಲ್ಲಾ ರೈತರಿಗೆ ಸರಿಯಾಗಿ ಪರಿಹಾರ ಬಂದಿಲ್ಲ. ಆದ್ದರಿಂದ ವಿಮೆ ಕಂಪನಿಯವರು ತಾರತಮ್ಯ ಆಗಿರುವುದನ್ನು ಸರಿಪಡಿಸಬೇಕು.ವೀರಣ್ಣ ಸೋಪ್ಪಿನ ಕರ್ನಾಟಕ ರೈತ ಸೇನೆ ತಾಲೂಕಾ ಅಧ್ಯಕ್ಷ