ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಮಂಡ್ಯ ಜಿಲ್ಲೆಯಲ್ಲಿ ಅಭಿವೃದ್ಧಿ ವಿಚಾರವಾಗಿ ಶಾಸಕರ ಸಭೆ ಕರೆಯುವಾಗ ಜಿಲ್ಲೆಯ ಎಲ್ಲಾ ಶಾಸಕರನ್ನು ಕರೆಯುತ್ತಾರೆ. ಆದರೆ, ಜೆಡಿಎಸ್ ಶಾಸಕ ಎಂಬ ಕಾರಣಕ್ಕೆ ನನ್ನನ್ನು ಮಾತ್ರ ಸಭೆಗೆ ಕರೆಯದೆ ಮಲತಾಯಿ ಧೋರಣೆ ಮಾಡುತ್ತಿದ್ದಾರೆ ಎಂದು ದೂರಿದರು.
ಕನ್ನಡಪ್ರಭ ವಾರ್ತೆ ಆರ್.ಪೇಟೆ
ಜೆಡಿಎಸ್ ಶಾಸಕನಾಗಿರುವ ಕಾರಣಕ್ಕೆ ಕ್ಷೇತ್ರದ ಅಭಿವೃದ್ಧಿ ವಿಚಾರದಲ್ಲಿ ಸರ್ಕಾರ ನನಗೆ ಅನುದಾನ ನೀಡಿ ಸಹಕಾರ ಕೊಡದೇ ತಾರತಮ್ಯ ಮಾಡುತ್ತಿದೆ ಎಂದು ಶಾಸಕ ಎಚ್.ಟಿ.ಮಂಜು ಆರೋಪಿಸಿದರು.ತಾಲೂಕಿನ ಮತ್ತೀಕೆರೆ ಗ್ರಾಮದಲ್ಲಿ ಕಾವೇರಿ ನೀರಾವರಿ ನಿಗಮದ ವಿಶೇಷ ಅನುದಾನದಲ್ಲಿ ಸುಮಾರು 85 ಲಕ್ಷ ರು. ವೆಚ್ಚದಲ್ಲಿ ನಿರ್ಮಿಸಲಾಗುತ್ತಿರುವ ಸಿಸಿ ಮತ್ತು ಡಾಂಬರ್ ರಸ್ತೆ ಹಾಗೂ ಬಾಕ್ಸ್ ಡ್ರೈನೇಜ್ ನಿರ್ಮಾಣ ಅಭಿವೃದ್ಧಿ ಕಾಮಗಾರಿಗೆ ಭೂಮಿ ಪೂಜೆ ನೆರವೇರಿಸಿ ಮಾತನಾಡಿದರು.
ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಮಂಡ್ಯ ಜಿಲ್ಲೆಯಲ್ಲಿ ಅಭಿವೃದ್ಧಿ ವಿಚಾರವಾಗಿ ಶಾಸಕರ ಸಭೆ ಕರೆಯುವಾಗ ಜಿಲ್ಲೆಯ ಎಲ್ಲಾ ಶಾಸಕರನ್ನು ಕರೆಯುತ್ತಾರೆ. ಆದರೆ, ಜೆಡಿಎಸ್ ಶಾಸಕ ಎಂಬ ಕಾರಣಕ್ಕೆ ನನ್ನನ್ನು ಮಾತ್ರ ಸಭೆಗೆ ಕರೆಯದೆ ಮಲತಾಯಿ ಧೋರಣೆ ಮಾಡುತ್ತಿದ್ದಾರೆ ಎಂದು ದೂರಿದರು.ಮುಖ್ಯಮಂತ್ರಿಗಳು ಮತ್ತು ಸರ್ಕಾರ ಜೆಡಿಎಸ್- ಬಿಜೆಪಿ ಶಾಸಕರನ್ನೂ ಸಮಾನವಾಗಿ ನೋಡಬೇಕು. ಕ್ಷೇತ್ರದ ಅಭಿವೃದ್ಧಿಗೆ ನೀಡುವ ಅನುದಾನವನ್ನು ಎಲ್ಲಾ ಶಾಸಕರಿಗೂ ಸಮಾನವಾಗಿ ಹಂಚಿಕೆ ಮಾಡಬೇಕು ಎಂದು ಆಗ್ರಹಿಸಿದರು.
ಸರ್ಕಾರವು ಎಲ್ಲಾ 224 ಶಾಸಕರನ್ನು ಒಂದೇ ರೀತಿ ನೋಡುತ್ತಿಲ್ಲ. ಕಾಂಗ್ರೆಸ್ ಶಾಸಕರ ಪ್ರತಿ ವಿಧಾನಸಭಾ ಕ್ಷೇತ್ರಕ್ಕೆ ತಲಾ 50 ಕೋಟಿ ರು. ಅನುದಾನ ನೀಡಿದೆ. ಜೆಡಿಎಸ್ ಮತ್ತು ಬಿಜೆಪಿ ಶಾಸಕರ ಕ್ಷೇತ್ರಗಳಿಗೆ ತಲಾ 25 ಕೋಟಿ ರು. ನೀಡುತ್ತಿದೆ. ಕಳೆದ ವರ್ಷ ಕಾಂಗ್ರೆಸ್ ಶಾಸಕರಿಗೆ 25 ಕೋಟಿ ರು., ವಿರೋಧಿ ಶಾಸಕರಿಗೆ ಕೇವಲ 10 ಕೋಟಿ ರು. ಅನುದಾನ ನೀಡಿತ್ತು ಎಂದರು.ಸರ್ಕಾರ ಈ ತಾರತಮ್ಯವನ್ನು ಕೂಡಲೇ ನಿಲ್ಲಿಸಿ ಎಲ್ಲಾ 224 ಶಾಸಕರಿಗೂ ಒಂದೇ ರೀತಿಯ ಅನುದಾನವನ್ನು, ಜೊತೆಗೆ ಎಲ್ಲಾ ಕ್ಷೇತ್ರಗಳ ರಸ್ತೆ ಅಭಿವೃದ್ಧಿಗೆ ವಿಶೇಷ ಪ್ಯಾಕೇಜ್ ನೀಡಬೇಕು ಎಂದು ಶಾಸಕ ಎಚ್.ಟಿ.ಮಂಜು ಸಿಎಂ ಮತ್ತು ಡಿಸಿಎಂ ಅವರನ್ನು ಆಗ್ರಹಿಸಿದರು.
ಈ ವೇಳೆ ಹೇಮಾವತಿ ಜಲಾಶಯ ಯೋಜನೆ ನಂ.03 ರ ಎಕ್ಸಿಕ್ಯೂಟೀವ್ ಇಂಜಿನಿಯರ್ ಜಯರಾಂ, ತಾಪಂ ಮಾಜಿ ಸದಸ್ಯ ಹೆಳವೇಗೌಡ(ಹುಲ್ಲೇಗೌಡ), ಗ್ರಾಪಂ ಅಧ್ಯಕ್ಷ ಮುದುಗೆರೆ ಪರಮೇಶ್, ರಾಜ್ಯ ಯುವ ಜೆಡಿಎಸ್ ಪ್ರಧಾನ ಕಾರ್ಯದರ್ಶಿ ಕುರುಬಹಳ್ಳಿ ಕೆ.ಬಿ.ನಾಗೇಶ್, ಗಂಜಿಗೆರೆ ಸೊಸೈಟಿ ಮಾಜಿ ಅಧ್ಯಕ್ಷ ರಾಮಕೃಷ್ಣೇಗೌಡ, ಬೂಕನಕೆರೆ ಹೋಬಳಿ ಜೆಡಿಎಸ್ ಅಧ್ಯಕ್ಷ ನಂದೀಶ್, ಗ್ರಾಪಂ ಮಾಜಿ ಅಧ್ಯಕ್ಷೆ ಚೇತನಾ ಬೋರೇಗೌಡ, ಗ್ರಾಪಂ ಸದಸ್ಯರಾದ ಎಂ.ಕೆ.ಮನು, ಮಾಜಿ ಸದಸ್ಯ ಮಂಜು, ವೈದ್ಯಾಧಿಕಾರಿ ಡಾ.ದೇವೇಂದ್ರಕುಮಾರ್, ಮುಖಂಡರಾದ ಬೋರೇಗೌಡ, ಎಂ.ಸಿ.ಚೇತನ್, ಎಂ.ಆರ್.ಜಗದೀಶ್, ಎಂ.ಆರ್.ಪ್ರಕಾಶ್, ಎಂ.ಕೆ.ಜಗನ್ನಾಥ್, ಸ್ವಾಮೀಗೌಡ, ಎಂ.ಎಲ್.ಶೇಖರ್, ಎಂ.ಎಸ್.ರಾಮಚಂದ್ರೇಗೌಡ, ಎಂ.ಎಸ್.ಲಕ್ಕೇಗೌಡ, ಬಾಲಚಂದ್ರು, ಎಂ.ಎಸ್.ಸಾಗರ್, ಇಟ್ಟಿಗೆ ಮಂಜುನಾಥ್, ಡೇರಿ ಅಧ್ಯಕ್ಷ ಎಂ.ಕೆ.ಸುರೇಶ್, ಎಸ್.ಡಿ.ಎಂ.ಸಿ ಅಧ್ಯಕ್ಷ ಸತೀಶ್, ಎಂ.ಆರ್.ಕುಮಾರ್, ಎಂ.ಕೆ.ನಾಗೇಗೌಡ, ಎಂ.ಎನ್.ಸುರೇಶ್, ಪ್ರಥಮ ದರ್ಜೆ ಗುತ್ತಿಗೆದಾರ ಬಿ.ಈ.ಮಂಜುನಾಥ್, ಶಾಸಕರ ಆಪ್ತ ಸಹಾಯಕ ಧ್ರುವಕುಮಾರ್ ಸೇರಿದಂತೆ ನೂರಾರು ಮುಖಂಡರು ಉಪಸ್ಥಿತರಿದ್ದರು.