ಕಬ್ಬು ಬಾಕಿ ಬಿಲ್‌ ಪಾವತಿಸುವಲ್ಲಿ ತಾರತಮ್ಯ, ಕ್ರಮ ಕೈಗೊಳ್ಳಲು ರೈತರಿಂದ ಜಿಲ್ಲಾಧಿಕಾರಿಗೆ ಮನವಿ

| Published : Jul 26 2025, 12:30 AM IST

ಕಬ್ಬು ಬಾಕಿ ಬಿಲ್‌ ಪಾವತಿಸುವಲ್ಲಿ ತಾರತಮ್ಯ, ಕ್ರಮ ಕೈಗೊಳ್ಳಲು ರೈತರಿಂದ ಜಿಲ್ಲಾಧಿಕಾರಿಗೆ ಮನವಿ
Share this Article
  • FB
  • TW
  • Linkdin
  • Email

ಸಾರಾಂಶ

ಕಬ್ಬು ಪೂರೈಸಿದ ನಾಲ್ಕು ತಿಂಗಳ ನಂತರ ಬಾಕಿ ಬಿಲ್ ಪಾವತಿ ಮಾಡಿದ್ದು, ಅಲ್ಲದೆ ಶೇ. 8ರಷ್ಟು ಕಟಿಂಗ್ ಮಾಡಿ ರೈತರಿಗೆ ಮೋಸ ಮಾಡಿದ್ದಾರೆ ಎಂದು ಆರೋಪಿಸಲಾಗಿದೆ.

ಹಾವೇರಿ: ಮೈಲಾರ ಶುಗರ್ಸ್ ಲಿಮಿಟೆಡ್ ಸಕ್ಕರೆ ಕಾರ್ಖಾನೆಯವರು 2024- 25ನೇ ಸಾಲಿನಲ್ಲಿ ರೈತರಿಗೆ ಬಾಕಿ ಬಿಲ್ ಪಾವತಿಸುವುದರಲ್ಲಿ ವ್ಯತ್ಯಾಸ ಹಾಗೂ ಕಬ್ಬಿನ ವೇಸ್ಟೇಜ್ ಕಟಿಂಗ್‌ನಲ್ಲಿ ರೈತರಿಗೆ ಮೋಸ ಮಾಡಿದ್ದು, ರೈತರಿಗೆ ನ್ಯಾಯ ಒದಗಿಸಿಕೊಡಬೇಕು ಎಂದು ಒತ್ತಾಯಿಸಿ ಹೊಸರಿತ್ತಿ ಭಾಗದ ಕಬ್ಬು ಬೆಳೆಗಾರರು ಜಿಲ್ಲಾಧಿಕಾರಿಗಳಿಗೆ ಮನವಿ ಸಲ್ಲಿಸಿದರು.ತಾಲೂಕಿನ ಸುತ್ತಮುತ್ತಲಿನ ಕಬ್ಬು ಬೆಳೆಯುವ ಹೊಸರಿತ್ತಿ, ಕೊರಡೂರು ಚನ್ನೂರು, ಮಣ್ಣೂರು, ಕೆಸರಹಳ್ಳಿ, ಕಿತ್ತೂರು ಗ್ರಾಮ ಸೇರಿದಂತೆ ಈ ಭಾಗದಲ್ಲಿ ಬೆಳೆದ ಕಬ್ಬು ಹೆಚ್ಚಿನ ಪಾಲು ಮೈಲಾರ ಶುಗರ್ಸ್ ಕಾರ್ಖಾನೆಗೆ ಪೂರೈಸಲಾಗಿದೆ.

ಕಬ್ಬು ಪೂರೈಸಿದ ನಾಲ್ಕು ತಿಂಗಳ ನಂತರ ಬಾಕಿ ಬಿಲ್ ಪಾವತಿ ಮಾಡಿದ್ದು, ಅಲ್ಲದೆ ಶೇ. 8ರಷ್ಟು ಕಟಿಂಗ್ ಮಾಡಿ ರೈತರಿಗೆ ಮೋಸ ಮಾಡಿದ್ದಾರೆ. ಇದೇ ಕಾರ್ಖಾನೆಯವರು ಬೇರೆ ಜಿಲ್ಲೆಗಳಿಗೆ ಹೋಗಿ ಅಲ್ಲಿ ₹3100 ಕೊಟ್ಟು ಕಬ್ಬು ಖರೀದಿಸಿ ಅವರಿಗೆ ಸ್ಥಳದಲ್ಲೇ ಪೇಮೆಂಟ್ ಮಾಡಿದ್ದು, ಇವರಿಗೆ ಶೇ. 4ರಷ್ಟು ಕಟಿಂಗ್ ಮಾಡಿದ್ದಾರೆ.

ಮಿಷನ್ ಕಟಿಂಗ್‌ಗೆ ಯಾವುದೇ ಕಬ್ಬು ವೆಸ್ಟೆಜ್ ಕಟಿಂಗ್ ಮಾಡಬಾರದು ಎಂದು ಸರ್ಕಾರದ ಆದೇಶವಿದ್ದರೂ ಶೇ. 8ರಷ್ಟು ನೇಸ್ಟೇಜ್ ಮುರಿದು ರೈತರಿಗೆ ಮೋಸ ಮಾಡುತ್ತಿದ್ದಾರೆ. ರಾಜ್ಯದ ಇನ್ನುಳಿದ ಫ್ಯಾಕ್ಟರಿಗಳಲ್ಲಿ ಶೇ. 4ರಷ್ಟು ವೇಸ್ಟೇಜ್ ಮುರಿಯುತ್ತಿದ್ದಾರೆ. ಅದು ಲೇಬರ್ ಕಟಿಂಗ್‌ಗೆ ಮಾತ್ರ.

ಹೊಸರಿತ್ತಿ ಭಾಗದಲ್ಲಿ 12000 ಟನ್ ಕಬ್ಬು ಇದ್ದು, ಇದರದಲ್ಲಿ 6000 ಟನ್ ಮೈಲಾರ ಶುಗರ್ಸ್ ಕಾರ್ಖಾನೆ ಒದಗಿಸಿದ್ದು, ರೈತರಿಗೆ ಮೋಸ ಮಾಡುವ ಸಲುವಾಗಿ ಈ ಷಡ್ಯಂತ್ರ ಮಾಡುತ್ತಿದ್ದಾರೆ. ಅಲ್ಲದೆ ಪ್ರತಿ ಕಬ್ಬಿಗೆ ಹೆಚ್ಚುವರಿ ಟನ್‌ಗೆ ₹100 ಕೊಡುತ್ತೇವೆ ಎಂದು ಇಲ್ಲಿ ದಿನಾಂಕ ನಿಗದಿ ಮಾಡಿ ಕಬ್ಬನ್ನು ಪೂರೈಸುವಾಗ ರೈತರಿಗೆ ಬೇರೆ ಕಾರ್ಖಾನೆ ಅವರು ಏನು ಸಂದಾಯ ಮಾಡುತ್ತಾರೆ, ಅದನ್ನೇ ಕೊಡುತ್ತೇವೆ ಎಂದು ಹೇಳಿ ಈಗ ಕಾರ್ಖಾನೆಗೆ ಅನುಕೂಲವಾಗುವ ರೀತಿ ಡಿ. 11ರಿಂದ ರೈತರ ಸಂಖ್ಯೆ ಕಡಿಮೆ ಇದ್ದು, ಈಗ ಮನೆ ಮನೆಗೆ ಹಣ ಸಂದಾಯ ಮಾಡುತ್ತಿದ್ದಾರೆ.

ಕಾರ್ಖಾನೆಯವರು ಆರ್ಥಿಕ ಇಲಾಖೆಗೆ, ಸರ್ಕಾರದ ಬೊಕ್ಕಸಕ್ಕೆ ಮೋಸಗೊಳಿಸುವ ಜತೆಗೆ ರೈತರಿಗೂ ಮೋಸ ಮಾಡುತ್ತಿದ್ದಾರೆ. ಉಳಿದ ಫ್ಯಾಕ್ಟರಿಯವರು ಡಿ. 1ರಿಂದ ಹೆಚ್ಚುವರಿ ₹100 ಪಾವತಿ ಮಾಡಿ ಸುಮಾರು ಎರಡರಿಂದ ಮೂರು ತಿಂಗಳಾಗಿವೆ. ನಮ್ಮ ಭಾಗದಲ್ಲಿ ಏಳು ತಿಂಗಳ ನಂತರ ₹100 ಪಾವತಿ ಮಾಡಲು ಬಂದು ಕೆಲವು ರೈತರಿಗೆ ಕೊಟ್ಟು ಮೋಸ ಮಾಡುತ್ತಿದ್ದಾರೆ. ಕೂಡಲೇ ಸೂಕ್ತ ಕ್ರಮ ಕೈಗೊಂಡು ರೈತರಿಗೆ ಆಗುತ್ತಿರುವ ಅನ್ಯಾಯ ಸರಿಪಡಿಸಬೇಕು ಎಂದು ಒತ್ತಾಯಸಿ ಮನವಿ ಸಲ್ಲಿಸಲಾಯಿತು.ಈ ವೇಳೆ ಸಿದ್ದರಾಜ ಕಲಕೋಟಿ, ಪ್ರಭು ಗೌರಿಮನಿ, ಸಿದ್ದಲಿಂಗಪ್ಪ ಕಲಕೋಟಿ, ವಿರುಪಾಕ್ಷಪ್ಪ ಕಲಕೋಟಿ, ಮಂಜುನಾಥ ಗಾಣಗೇರ, ನಿಂಗಪ್ಪ ಕಂಟೆಣ್ಣನವರ, ವೆಂಕಟೇಶ ಆವಿನ್, ಮೌನೇಶ ಕಮ್ಮಾರ, ಶಿವಕುಮಾರ ತೊರಗಲ್ಲ, ಎಂ.ಎಂ. ಅಂಗಡಿ, ಸಿದ್ದಲಿಂಗಪ್ಪ ಗೌರಿಮನಿ, ಸುರೇಶ ಕಲ್ಲೆದೇವರ, ರವಿಕುಮಾರ ಸವಣೂರ ಇತರರು ಇದ್ದರು.