ಧರ್ಮ ಆಧರಿತ ಭೇದ ಭಾವ ಸಲ್ಲದು: ಪೊನ್ನಣ್ಣ

| Published : Feb 25 2025, 12:46 AM IST

ಸಾರಾಂಶ

ಎಮ್ಮೆಮಾಡು ಮಖಾಂ ಉರೂಸ್ ಪ್ರಯುಕ್ತ ಸಾರ್ವಜನಿಕ ಸಮ್ಮೇಳನ ನಡೆಯಿತು. ಸಮ್ಮೇಳನದಲ್ಲಿ ವಿರಾಜಪೇಟೆ ಶಾಸಕ ಎ.ಎಸ್. ಪೊನ್ನಣ್ಣ ಮಾತನಾಡಿದರು.

ಎಮ್ಮೆಮಾಡು ಮಖಾಂ ಉರೂಸ್ ಸಾರ್ವಜನಿಕ ಸಮ್ಮೇಳನ

ಕನ್ನಡಪ್ರಭ ವಾರ್ತೆ ನಾಪೋಕ್ಲು

ದೇಶದಲ್ಲಿ ಧರ್ಮ ಆಧರಿತ ಭೇದ ಭಾವನೆ ಸಲ್ಲದು. ನಾವೆಲ್ಲರೂ ನಮ್ಮ ನಮ್ಮ ಧರ್ಮವನ್ನು ಪಾಲಿಸಲು ಸ್ವತಂತ್ರರು ಎಂದು ವಿರಾಜಪೇಟೆ ಶಾಸಕ ಎ.ಎಸ್. ಪೊನ್ನಣ್ಣ ಹೇಳಿದರು.ಎಮ್ಮೆಮಾಡು ಮಖಾಂ ಉರೂಸ್ ಪ್ರಯುಕ್ತ ಸೋಮವಾರ ಆಯೋಜಿಸಲಾಗಿದ್ದ ಸಾರ್ವಜನಿಕ ಸಮ್ಮೇಳನದಲ್ಲಿ ಪಾಲ್ಗೊಂಡು ಅವರು ಮಾತನಾಡಿದರು.ಎಮ್ಮೆಮಾಡು ಸರ್ವಧರ್ಮ ಸೌಹಾರ್ದತೆಯ ಸಂಕೇತವಾಗಿದ್ದು, ಇಲ್ಲಿ ನಡೆಯುವ ವಾರ್ಷಿಕ ಉರೂಸ್ ಕಾರ‍್ಯಕ್ರಮದಲ್ಲಿ ಎಲ್ಲ ಜನಾಂಗದವರು ಪಾಲ್ಗೊಳ್ಳುತ್ತಿರುವುದು ಸಂತಸದ ವಿಷಯ. ಯಾವುದೇ ಭಯ, ಆತಂಕ ಇಲ್ಲದೆ ನಮ್ಮ ನಮ್ಮ ಧರ್ಮವನ್ನು ಪಾಲಿಸುವಂತಾಗಬೇಕು. ನಾವೆಲ್ಲರೂ ಭಾರತೀಯರು ಎಂಬ ಮನೋಭಾವನೆಯಿಂದ ಕಾರ‍್ಯಕ್ರಮಗಳನ್ನು ಆಯೋಜಿಸುವಂತಾಗಬೇಕು ಎಂದರು.

ದೇಶದಲ್ಲಿ ಸಂವಿಧಾನವನ್ನು ಅಳವಡಿಸಿ ಪ್ರಜಾಪ್ರಭುತ್ವವನ್ನು ಸ್ವೀಕರಿಸಿ ೭೨ ವರ್ಷಗಳು ಸಂದಿವೆ. ರಾಜ್ಯದಲ್ಲಿ ನೂತನ ಸರ್ಕಾರ ಅಧಿಕಾರಕ್ಕೆ ಬಂದ ಬಳಿಕ ಹಲವು ಅಭಿವೃದ್ಧಿ ಕಾರ‍್ಯಗಳನ್ನು ಕೈಗೆತ್ತಿಕೊಳ್ಳಲಾಗಿದೆ. ವಿದ್ಯುತ್ ಸೌಕರ‍್ಯ ಕಲ್ಪಿಸಲು ೨೨೦ ಕೋಟಿ ರು. ವ್ಯಯಿಸಲಾಗಿದೆ. ಗ್ರಾಮೀಣ ರಸ್ತೆಗಳ ಅಭಿವೃದ್ಧಿಗಾಗಿ ವಿಶೇಷ ಅನುದಾನ ನೀಡಲಾಗಿದೆ. ವಿರಾಜಪೇಟೆ ಕ್ಷೇತ್ರದಲ್ಲಿ ಯಾವುದೇ ಭೇದಭಾವ ಇಲ್ಲದೆ ಅಭಿವೃದ್ಧಿ ಕಾರ‍್ಯಗಳನ್ನು ಕೈಗೆತ್ತಿಕೊಳ್ಳಲಾಗಿದೆ ಎಂದರು.

ಎಮ್ಮೆಮಾಡು ತಾಜುಲ್ ಇಸ್ಲಾಂ ಮುಸ್ಲಿಂ ಜಮಾಯತ್ ಅಧ್ಯಕ್ಷ ಅಬೂಬಕರ್ ಸಖಾಫಿ ಅಧ್ಯಕ್ಷತೆ ವಹಿಸಿದ್ದರು. ಸೈಯ್ಯಿದ್ ಶಿಹಾಬುದ್ದಿನ್ ಹಲ್ ಹೈದ್ರೂಸಿ ಉದ್ಘಾಟಿಸಿ ಶುಭ ಹಾರೈಸಿದರು.ವೇದಿಕೆಯಲ್ಲಿ ಕರ್ನಾಟಕ ಗ್ಯಾರಂಟಿ ಅನುಷ್ಠಾನ ಅಧಿಕಾರಿ ಸಮಿತಿ ಉಪಾಧ್ಯಕ್ಷ ಎಸ್.ಆರ್. ಮೆಹರೋಝ್, ಕೊಡಗು ಜಿಲ್ಲಾ ವಕ್ಫ್‌ ಅಧ್ಯಕ್ಷ ಅಬ್ದುಲ್ ಹಕೀಂ, ಕೊಡಗು ಜಿಲ್ಲಾ ಕೆಪಿಸಿಸಿ ಅಧ್ಯಕ್ಷ ಧರ್ಮಜ ಉತ್ತಪ್ಪ, ಕೆ.ಎಂ. ಉಸೈನ್ ಸಖಾಫಿ ಎಮ್ಮೆ ಮಾಡು, ಅಸೈನಾರ್ ಕನ್ನಡಿಯಂಡ, ಮಹಮ್ಮದ್ ಹಾಜಿ ಕುಂಜಿಲ, ಕೊಟ್ಟಮುಡಿ ಜಮಾಯತ್ ಅಧ್ಯಕ್ಷ ಹಂಸ, ನಾಪೋಕ್ಲು ಜಮಾಯತ್ ಅಧ್ಯಕ್ಷ ಎಂ.ಎಚ್. ಅಬ್ದುಲ್ ರಹ್ಮಾನ್, ಸೌಕತ್ ಆಲಿ ಕುಂಜಿಲ, ನಾಪೋಕ್ಲು ಮಾಜಿ ಗ್ರಾಮ ಪಂಚಾಯಿತಿ ಅಧ್ಯಕ್ಷ ಕೊಂಬಂಡ ಗಣೇಶ್, ಉದ್ಯಮಿ ಮಂಡಿರ ಜಯ ದೇವಯ್ಯ, ಚಂಬಾರಂಡ ಎಂ. ಮಹಿನ್, ಉದ್ಯಮಿ ಎಂ.ಎ. ಮನ್ಸೂರ್ ಆಲಿ, ಕೆ.ಎ. ಇಸ್ಮಾಯಿಲ್ ನಾಪೋಕ್ಲು, ಹಮೀದ್ ಕಬಡಕೇರಿ, ಹಂಸ ನರೋಟ್, ಆಲಿರ ಎ. ಎರ್ಮು ಹಾಜಿ ಹಾಗೂ ಧರ್ಮಗುರುಗಳು, ಚುನಾಯಿತ ಪ್ರತಿನಿಧಿಗಳು, ಸಂಘ ಸಂಸ್ಥೆಗಳ ಪದಾಧಿಕಾರಿಗಳು ಇನ್ನಿತರ ಉಪಸ್ಥಿತರಿದ್ದರು. ವಿವಿಧ ಮುಖಂಡರಿಂದ ಪ್ರಭಾಷಣಗಳು ನೆರವೇರಿದವು.ಸೋಮವಾರ ಸಂಜೆ ಆಯೋಜಿಸಲಾಗಿದ್ದ ಅನ್ನ ಸಂತರ್ಪಣೆ ಕಾರ‍್ಯಕ್ರಮದಲ್ಲಿ ಸಹಸ್ರಾರು ಮಂದಿ ಪಾಲ್ಗೊಂಡಿದ್ದರು. ಜನಸಂಚಾರ ಮತ್ತು ವಾಹನ ದಟ್ಟಣೆಯನ್ನು ನಿಯಂತ್ರಿಸಲು ಪೊಲೀಸ್ ಇಲಾಖೆ ವತಿಯಿಂದ ಸೂಕ್ತ ಬಂದೋಬಸ್ತ್ ಕಲ್ಪಿಸಲಾಗಿತ್ತು.