ಸೊಳ್ಳೆ ನಿಯಂತ್ರಣದಿಂದ ರೋಗ ತಡೆ ಸಾಧ್ಯ

| Published : Jul 11 2024, 01:38 AM IST / Updated: Jul 11 2024, 12:57 PM IST

ಸಾರಾಂಶ

ಮಲೇರಿಯಾ, ಡೆಂಘೀ, ಚಿಕುನ್‌ಗುನ್ಯಾ, ಮೆದುಳು ಜ್ವರ ಮತ್ತು ಆನೆಕಾಲು ರೋಗಗಳು ಸೋಂಕಿತ ಹೆಣ್ಣು ಸೊಳ್ಳೆ ಕಚ್ಚುವಿಕೆಯಿಂದ ಒಬ್ಬರಿಂದ ಒಬ್ಬರಿಗೆ ಹರಡುತ್ತದೆ

ನರಗುಂದ: ಮಳೆಗಾಲದಲ್ಲಿ ಸೊಳ್ಳೆಗಳು ಉತ್ಪತ್ತಿಯಾಗದಂತೆ ಜಾಗೃತಿ ವಹಿಸುವದರಿಂದ ಡೆಂಘೀ,ಮಲೇರಿಯಾ, ಚಿಕುನ್‌ ಗುನ್ಯಾದಂತಹ ರೋಗ ನಿಯಂತ್ರಣ ಮಾಡಲು ಸಾಧ್ಯ ಎಂದು ಆರೋಗ್ಯ ಶಿಕ್ಷಣಾಧಿಕಾರಿ ಜಿ.ವಿ.ಕೊಣ್ಣೂರ ಹೇಳಿದರು.

ಅವರು ಮಂಗಳವಾರ ತಾಲೂಕಿನ ಜಗಾಪುರ ಗ್ರಾಮದ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ಮಲೇರಿಯಾ ವಿರೋಧಿ ಮಾಸಾಚರಣೆ ಕಾರ್ಯಕ್ರಮದಲ್ಲಿ ಮಾತನಾಡಿದರು.

ಮಲೇರಿಯಾ, ಡೆಂಘೀ, ಚಿಕುನ್‌ಗುನ್ಯಾ, ಮೆದುಳು ಜ್ವರ ಮತ್ತು ಆನೆಕಾಲು ರೋಗಗಳು ಸೋಂಕಿತ ಹೆಣ್ಣು ಸೊಳ್ಳೆ ಕಚ್ಚುವಿಕೆಯಿಂದ ಒಬ್ಬರಿಂದ ಒಬ್ಬರಿಗೆ ಹರಡುತ್ತದೆ. ಸೊಳ್ಳೆ ನಿಯಂತ್ರಣ ಮಾಡುವಲ್ಲಿ ಸಾರ್ವಜನಿಕರ ಪಾತ್ರ ಮಹತ್ವದ್ದಾಗಿದೆ. ಮನೆಗಳಲ್ಲಿರುವ ಎಲ್ಲ ನೀರಿನ ಪರಿಕರಗಳನ್ನು ನಾಲ್ಕೈದು ದಿನಗಳಿಗೊಮ್ಮೆ ಚೆನ್ನಾಗಿ ತೊಳೆದು, ಒಣಗಿಸಿ ಹೊಸ ನೀರನ್ನು ತುಂಬಿಸಿ ಭದ್ರವಾಗಿ ಮುಚ್ಚಿಡಬೇಕು. ಮನೆಯ ಸುತ್ತ-ಮುತ್ತ ಮತ್ತು ಚರಂಡಿಗಳಲ್ಲಿ ನೀರು ನಿಲ್ಲದಂತೆ ನೋಡಿಕೊಳ್ಳಬೇಕು. ಮಲೇರಿಯಾ ಪತ್ತೆ ಹಚ್ಚಲು ಯಾವುದೇ ಜ್ವರವಿದ್ದಲ್ಲಿ ಕಡ್ಡಾಯವಾಗಿ ರಕ್ತ ಪರೀಕ್ಷೆಯನ್ನು ಸರ್ಕಾರಿ ಆಸ್ಪತ್ರೆ ಮತ್ತು ಆಶಾ ಮತ್ತು ಕ್ಷೇತ್ರ ಸಿಬ್ಬಂದಿಗಳಿಂದ ರಕ್ತ ಸಂಗ್ರಹಿಸಿ ಪರೀಕ್ಷಿಸಿ ಮಲೇರಿಯಾ ಕಂಡು ಬಂದಲ್ಲಿ ಉಚಿತವಾಗಿ ಸೂಕ್ತ ಚಿಕಿತ್ಸೆ ನೀಡಲಾಗುತ್ತದೆ ಎಂದು ಹೇಳಿದರು.

ಪ್ರಯೋಗ ಶಾಲಾ ತಂತ್ರಜ್ಞ ಐ.ಎಸ್.ಚಿಲ್ಮ ಮಾತನಾಡಿ, ಕೀಟ ಜನ್ಯ ರೋಗಗಳ ನಿಯಂತ್ರಣದಲ್ಲಿ ವಿವಿಧ ಇಲಾಖೆ ಮತ್ತು ಸಾರ್ವಜನಿಕರ ಪಾತ್ರ ಬಹುಮುಖ್ಯವಾಗಿದೆ. ಗ್ರಾಪಂಯವರು ಸಮಯಕ್ಕೆ ಸರಿಯಾಗಿ ನಲ್ಲಿಗಳಿಗೆ ನೀರು ಪೂರೈಕೆ ಮಾಡಬೇಕು, ಗ್ರಾಮಸ್ಥರು ಎಲ್ಲ ನೀರಿನ ಪರಿಕರಗಳನ್ನು ತೊಳೆದು ಒಣಗಿಸಿ ಇಟ್ಟುಕೊಳ್ಳಲು ಅನುಕೂಲವಾಗುತ್ತದೆ ಎಂದರು.

ಎಂ.ಬಿ. ಕಡಕೋಳ ಮಾತನಾಡಿ, ಮಲೇರಿಯಾ ಅತ್ಯಂತ ಹಳೆಯ ಕಾಯಿಲೆಯಾಗಿದ್ದು. 2025ರ ಹೊತ್ತಿಗೆ ಶೂನ್ಯ ಮಲೇರಿಯಾ ತರುವುದು ನಮ್ಮ ಗುರಿಯಾಗಿದೆ ಎಂದರು.

ಡಾ.ನಿಖಿಲ್ ಪಾಟೀಲ್ ಮಾತನಾಡಿ, ಜ್ವರ,ವಿಪರೀತ ಚಳಿ ಮತ್ತು ಬೆವರುವಿಕೆಗಳು ಮಲೇರಿಯಾ ರೋಗದ ಮುಖ್ಯ ಲಕ್ಷಣಗಳಾಗಿವೆ. ಇದರಲ್ಲಿ 4 ಪ್ರಕಾರಗಳು ಇದ್ದು ಅವುಗಳಲ್ಲಿ ಪ್ಲಾಜ್ಮೋಡಿಯಮ್‌ವೈವಾಕ್ಷ್, ಮತ್ತು ಪ್ಲಾಜ್ಮೋಡಿಯ್ಮ್ ಫಾಲ್ಸಿಫಾರ್ಮಗಳು ಪ್ರಚಲಿತವಾಗಿವೆ. ಯಾವುದೇ ಜ್ವರವಿರಲಿ ರಕ್ತ ಪರೀಕ್ಷೆ ಮಾಡಿಸುವುದು ಕಡ್ಡಾಯ ಎಂದರು.

ಡಾ.ಎನ್.ಟಿ. ಪಾಟೀಲ, ಗ್ರಾಪಂ ಅಧ್ಯಕ್ಷೆ ಶೋಭಾ ಮುಳ್ಳೂರು, ಸದಸ್ಯರಾದ ಭಗವಂತಪ್ಪ ಜಲಗೇರಿ, ಬಸವರಡ್ಡಿ ಕಾಮರಡ್ಡಿ, ಬಸನಗೌಡ ದೂಡ್ಡಗೌಡ್ರ, ನಿರ್ಮಲಾ ಸತರಡ್ಡಿ, ಲಕ್ಮೀ ಕುರ್ಲಗೇರಿ, ನಿರ್ಮಲಾ ಕುರಬರ, ಸಿ.ಎಫ್.ಕುಂಬಾರ, ಕಣಕಿಕೊಪ್ಪ ಮತ್ತು ಬನಹಟ್ಟಿ ಗ್ರಾಪಂ ಜನಪ್ರತಿನಿದಿಗಳು ಸಾರ್ವಜನಿಕರು, ಆರೋಗ್ಯ ಇಲಾಖೆಯ ಎ.ಎಂ.ಕಾಡದೇವರಮಠ, ಶಂಕ್ರಮ್ಮ ಹೂಲಿ, ಎಸ್.ವೈ.ಕಾಣಿಕರ, ದಾವಲಬಿ ಖಾಲೆಖಾನ್, ರಫೀಕ್ ಮಸೂತಿಮನಿ, ಆಶಾ ಕಾರ್ಯಕರ್ತೆಯರು ಇದ್ದರು.

ಪ್ರವೀಣ ಕುಲಕರ್ಣಿ ಸ್ವಾಗತಿಸಿದರು. ರವಿ ವಾಲ್ಮೀಕಿ ನಿರೂಪಿಸಿ ವಂದಿಸಿದರು.