ರೋಗಮುಕ್ತ ಜೀವನ ಶೈಲಿಯಿಂದ ಮನುಷ್ಯನ ಜೀವಿತಾವಧಿ ವೃದ್ಧಿ: ಡಾ. ಕಾವ್ಯಾ

| Published : May 22 2024, 12:45 AM IST

ರೋಗಮುಕ್ತ ಜೀವನ ಶೈಲಿಯಿಂದ ಮನುಷ್ಯನ ಜೀವಿತಾವಧಿ ವೃದ್ಧಿ: ಡಾ. ಕಾವ್ಯಾ
Share this Article
  • FB
  • TW
  • Linkdin
  • Email

ಸಾರಾಂಶ

ರೋಗಮುಕ್ತ ಜೀವನ ಶೈಲಿಯನ್ನು ರೂಢಿಸಿಕೊಂಡಲ್ಲಿ ಮನುಷ್ಯನ ಜೀವಿತಾವಧಿ ವೃದ್ಧಿಸುತ್ತದೆ ಎಂದು ವೈದ್ಯಾಧಿಕಾರಿ ಡಾ. ಕಾವ್ಯಾ ಹೇಳಿದರು.

ರಾಣಿಬೆನ್ನೂರು: ರೋಗಮುಕ್ತ ಜೀವನ ಶೈಲಿಯನ್ನು ರೂಢಿಸಿಕೊಂಡಲ್ಲಿ ಮನುಷ್ಯನ ಜೀವಿತಾವಧಿ ವೃದ್ಧಿಸುತ್ತದೆ ಎಂದು ವೈದ್ಯಾಧಿಕಾರಿ ಡಾ. ಕಾವ್ಯಾ ಹೇಳಿದರು. ತಾಲೂಕಿನ ವೆಂಕಟಾಪುರ ಗ್ರಾಮದಲ್ಲಿ ಆಯೋಜಿಸಿರುವ ರಾಣಿಬೆನ್ನೂರಿನ ಬಿಎಜೆಎಸ್‌ಎಸ್ ಬಿಎಡ್ ಕಾಲೇಜಿನ ಎನ್ನೆಸ್ಸೆಸ್ ಘಟಕದ ವಿಶೇಷ ವಾರ್ಷಿಕ ಶಿಬಿರದ ಅಂಗವಾಗಿ ಬಾಪೂಜಿ ದಂತ ವೈದ್ಯಕೀಯ ಕಾಲೇಜಿನಿಂದ ನಡೆದ ಉಚಿತ ದಂತ ತಪಾಸಣೆ ಹಾಗೂ ಆರೋಗ್ಯ ಶಿಬಿರದಲ್ಲಿ ಅವರು ಮಾತನಾಡಿದರು. ಆಹಾರ ನೈರ್ಮಲ್ಯ ಹಾಗೂ ಆರೊಗ್ಯದ ಬಗ್ಗೆ ಜಾಗೃತಿ ಅತ್ಯವಶ್ಯಕ. ಸದೃಢ ದೇಹದಲ್ಲಿ ಸದೃಢ ಮನಸ್ಸಿನ ನಿರ್ಮಾಣವೇ ನಿಜವಾದ ಶಿಕ್ಷಣ. ಆರೋಗ್ಯವಂತ ಸಮಾಜದ ನಿರ್ಮಾಣ ಪ್ರತಿಯೊಬ್ಬರ ಕರ್ತವ್ಯವಾಗಿದೆ ಎಂದರು. ತಪೋವನ ಆಯುರ್ವೇದ ಕಾಲೇಜಿನ ಸಂಪನ್ಮೂಲ ವ್ಯಕ್ತಿ ಬಿ. ಜಯರಾಂ ಮಾತನಾಡಿ, ನಿಸ್ವಾರ್ಥ ಸೇವೆ ನಮ್ಮೆಲ್ಲರ ಗುರಿಯಾಗಬೇಕು. ಭಾರತದ ನೂರಾರು ಕೋಟಿ ಜನಸಂಖ್ಯೆಯಲ್ಲಿ ಒಂದು ಕೋಟಿ ಜನ ಸಮಾಜಸೇವೆ ಕೈಗೊಂಡರೆ ಭಾರತ ಸ್ವರ್ಗವಾಗುತ್ತದೆ. ನವ ಸಮಾಜದ ನಿರ್ಮಾಣಕ್ಕೆ ವಿದ್ಯಾರ್ಥಿಗಳು ಸಿದ್ಧರಾಗಬೇಕು ಎಂದರು. ಕಾಲೇಜಿನ ಪ್ರಾ. ಡಾ.ಎಂ.ಎ. ಮೃತ್ಯುಂಜಯ ಅಧ್ಯಕ್ಷತೆ ವಹಿಸಿದ್ದರು. ಉಪ ಪ್ರಾಚಾರ್ಯ ಪ್ರೊ. ಶಿವಕುಮಾರ ಬಿಸಲಳ್ಳಿ, ಪ್ರೊ. ಪರಶುರಾಮ ಪವಾರ, ಡಾ. ಎಚ್.ಐ. ಬ್ಯಾಡಗಿ, ಪ್ರೊ. ಶ್ರೀಕಾಂತ ಗೌಡಶಿವಣ್ಣನವರ, ಪ್ರೊ. ಎ.ಶಂಕರನಾಯ್ಕ, ಪ್ರೊ. ವಂದನಾ ಪಿ.ಎನ್., ವೀಣಾ ಭಂಗಿ, ಮುತ್ತುರಾಜ ಸಿದ್ಧಣ್ಣನವರ, ಭಾಗ್ಯ ದೇವಗಿರಿಮಠ, ಮೇಘಾ ವಿಭೂತಿ, ಚನ್ನವೀರಸ್ವಾಮಿ, ಮೇಘನಾ ಮಾಕನೂರ ಉಪಸ್ಥಿತರಿದ್ದರು.