ಸಾರಾಂಶ
ಆಧುನಿಕ ತಂತ್ರಜ್ಞಾನ ಬಳಸಿಕೊಂಡರೆ ಹೈನುಗಾರಿಕೆಯಲ್ಲಿ ಲಾಭ ಕಾಣಬಹುದು.
ಆಲದಕಟ್ಟಿ ಗ್ರಾಮದಲ್ಲಿ ಮಿಶ್ರತಳಿ ಹಾಗೂ ದೇಶಿ ಹಸುಗಳ ಪ್ರದರ್ಶನ ಉದ್ಘಾಟನೆ
ಕನ್ನಡಪ್ರಭ ವಾರ್ತೆ ರಾಣಿಬೆನ್ನೂರುದೇಸಿ ತಳಿಯ ಜಾನುವಾರುಗಳಲ್ಲಿ ರೋಗ ನಿರೋಧಕ ಶಕ್ತಿ ಹೆಚ್ಚು. ಅವುಗಳ ಹೈನು ಆರೋಗ್ಯಕ್ಕೆ ಉತ್ತಮವಾಗಿದ್ದು, ಆಧುನಿಕ ತಂತ್ರಜ್ಞಾನ ಬಳಸಿಕೊಂಡರೆ ಹೈನುಗಾರಿಕೆಯಲ್ಲಿ ಲಾಭ ಕಾಣಬಹುದು ಎಂದು ಶಾಸಕ ಪ್ರಕಾಶ ಕೋಳಿವಾಡ ಹೇಳಿದರು.
ತಾಲೂಕಿನ ಆಲದಕಟ್ಟಿ ಗ್ರಾಮದಲ್ಲಿ ಪಶು ಸಂಗೋಪನಾ ಇಲಾಖೆ ಹಾಗೂ ಹಾಲು ಉತ್ಪಾದಕರ ಸಹಕಾರಿ ಸಂಘದ ಸಂಯುಕ್ತ ಆಶ್ರಯದಲ್ಲಿ ನಡೆದ ಮಿಶ್ರತಳಿ ಹಾಗೂ ದೇಶಿ ಹಸುಗಳ ಪ್ರದರ್ಶನ ಉದ್ಘಾಟಿಸಿ ಅವರು ಮಾತನಾಡಿದರು. ಸರ್ಕಾರ ರೈತರಿಗೆ ಸಾಕಷ್ಟು ಸವಲತ್ತುಗಳನ್ನು ನೀಡುತ್ತಿದೆ. ಹೈನುಗಾರಿಕೆಯಿಂದ ರೈತರು ಬದುಕು ಸುಧಾರಿಸುತ್ತಿದ್ದು, ಹೈನುಗಾರಿಕೆ ದೊಡ್ಡ ಉದ್ಯಮವಾಗಿ ಬೆಳೆಯುತ್ತಿದೆ. ವೈಜ್ಞಾನಿಕ ರೀತಿಯಲ್ಲಿ ಹೈನುಗಾರಿಕೆ ಮಾಡುವುದರಿಂದ ರೈತರು ಇನ್ನಷ್ಟು ಆರ್ಥಿಕ ಅಭಿವೃದ್ಧಿ ಹೊಂದಬಹುದು ಎಂದು ಹೇಳಿದರು.ಸಹಾಯಕ ನಿರ್ದೇಶಕ ಡಾ. ನೀಲಕಂಠ ಅಂಗಡಿ ಮಾತನಾಡಿ, ರೈತರಲ್ಲಿ ಸ್ಪರ್ಧಾತ್ಮಕ ಮನೋಭಾವ ಬೆಳೆಸಲು, ಉತ್ತಮ ರಾಸುಗಳಿಗೆ ಪ್ರಶಸ್ತಿ ನೀಡುವ ಮೂಲಕ ಹೈನುಗಾರರನ್ನು ಪ್ರೋತ್ಸಾಹಿಸಲು ಈ ಪ್ರದರ್ಶನ ಏರ್ಪಡಿಸಲಾಗಿದೆ ಎಂದರು.
ಮುಖ್ಯ ಪಶುವೈದ್ಯಾಧಿಕಾರಿ ಡಾ. ಎಚ್.ಸಿ. ಪಾಟೀಲ ಹಾಗೂ ಪ್ರಮುಖರಾದ ಶಕುಂತಲಾ ಶಿವಕ್ಕನವರ, ನಾಗರೆಡ್ಡಿ ಮತ್ತೂರ, ಸೋಮಪ್ಪ ಅಣ್ಣಪ್ಪಳವರ, ಡಾ. ಬಾಲಾಜಿ, ಡಾ. ನಾಗರಾಜ ಕೂನಬೇವು, ಡಾ. ರಾಘವೇಂದ್ರ ಕಿತ್ತೂರು, ಡಾ. ರಂಗನಾಥ ಗುಡಿಸಾಗರ, ಡಾ. ಪವನ ಬೆಳಕೇರಿ, ಡಾ. ಯುವರಾಜ ಚವ್ಹಾಣ, ಡಾ. ಪವನ್ ಬಿ.ಎಲ್., ಡಾ. ಉಮೇಶ ಕವಲಿ, ಡಾ. ರವಿ ದಾಸರ, ಡಾ. ಉಮೇಶ ಹೊನ್ನತ್ತಿ, ಡಾ. ಪ್ರವೀಣ ಮರಿಗೌಡ್ರ, ಡಾ. ರಾಘವೇಂದ್ರ ಎಲಿವಾಳ, ಡಾ. ಮಹೇಶ ಕುಂಬಾರಿ, ಡಾ. ನವೀನ ಕರ್ಜಗಿಮಠ, ಹಾಲೇಶ ನಾಯಕ, ಪವಿತ್ರಾ ಬಡಿಗೇರ ಸೇರಿದಂತೆ ಮತ್ತಿತರರಿದ್ದರು.;Resize=(128,128))
;Resize=(128,128))
;Resize=(128,128))
;Resize=(128,128))