ಯೋಗದಿಂದ ರೋಗ-ರುಜಿನಗಳು ದೂರ

| Published : Dec 10 2024, 12:31 AM IST

ಸಾರಾಂಶ

ಕನ್ನಡಪ್ರಭ ವಾರ್ತೆ ಬಸವನಬಾಗೇವಾಡಿ ನಿತ್ಯ ಜೀವನದಲ್ಲಿ ಯೋಗ ರೂಢಿಸಿಕೊಂಡರೆ ರೋಗ-ರುಜಿನದಿಂದ ದೂರ ಉಳಿಯಬಹದು. ರೇವಣಸಿದ್ದೇಶ್ವರ ಜಾತ್ರಾ ಮಹೋತ್ಸವದಂಗವಾಗಿ ಹಮ್ಮಿಕೊಂಡಿರುವ ಯೋಗ ಶಿಬಿರದ ಸದುಪಯೋಗವನ್ನು ಜನತೆ ಪಡೆದುಕೊಳ್ಳಬೇಕೆಂದು ಹಿರೇಮಠದ ಬೃಂಗೀಶ್ವರ ಶಿವಾಚಾರ್ಯರು ಹೇಳಿದರು.

ಕನ್ನಡಪ್ರಭ ವಾರ್ತೆ ಬಸವನಬಾಗೇವಾಡಿ

ನಿತ್ಯ ಜೀವನದಲ್ಲಿ ಯೋಗ ರೂಢಿಸಿಕೊಂಡರೆ ರೋಗ-ರುಜಿನದಿಂದ ದೂರ ಉಳಿಯಬಹದು. ರೇವಣಸಿದ್ದೇಶ್ವರ ಜಾತ್ರಾ ಮಹೋತ್ಸವದಂಗವಾಗಿ ಹಮ್ಮಿಕೊಂಡಿರುವ ಯೋಗ ಶಿಬಿರದ ಸದುಪಯೋಗವನ್ನು ಜನತೆ ಪಡೆದುಕೊಳ್ಳಬೇಕೆಂದು ಹಿರೇಮಠದ ಬೃಂಗೀಶ್ವರ ಶಿವಾಚಾರ್ಯರು ಹೇಳಿದರು.ತಾಲೂಕಿನ ಇಂಗಳೇಶ್ವರ ಗ್ರಾಮದ ರೇವಣಸಿದ್ದೇಶ್ವರ ಜಾತ್ರಾ ಮಹೋತ್ಸವದಂಗವಾಗಿ ಗ್ರಾಮದ ರೇಣುಕಾಚಾರ್ಯ ಪ್ರೌಢ ಶಾಲೆ ಆವರಣದಲ್ಲಿ ಡಿ.೧೫ ರವರೆಗೆ ಪ್ರೌಢ ಶಾಲೆಯ ೧೯೯೬ ನೇ ಸಾಲಿನ ವಿದ್ಯಾರ್ಥಿಗಳ ಬಳಗ ಹಮ್ಮಿಕೊಂಡಿರುವ ಯೋಗ ಶಿಬಿರವನ್ನು ಸೋಮವಾರ ಉದ್ಘಾಟಿಸಿ ಅವರು ಮಾತನಾಡಿದರು. ಯೋಗದಿಂದ ಸುಂದರ, ಸದೃಢ ಸಮಾಜ ನಿರ್ಮಾಣವಾಗುತ್ತದೆ. ಇಡೀ ಜಗತ್ತಿಗೆ ಭಾರತ ದೇಶ ಯೋಗವನ್ನು ನೀಡಿದೆ. ಇಂದು ಜಗತ್ತಿನ ಎಲ್ಲ ದೇಶಗಳು ಯೋಗದ ಮಹತ್ವ ಅರಿತು ಅದನ್ನು ಅಳವಡಿಸಿಕೊಳ್ಳುತ್ತಿವೆ. ಯೋಗದ ಮಹತ್ವ ಅರಿತು ನೀವು ನಿರೋಗಿಗಳಾಗಬೇಕೆಂದರು.ಪತಂಜಲಿ ಯೋಗ ಸಮಿತಿಯ ತಾಲೂಕು ಪ್ರಭಾರಿ ಕಾಶೀನಾಥ ಅವಟಿ ವಿವಿಧ ಯೋಗಾಸನಗಳನ್ನು ಹಾಕುವ ಮೂಲಕ ಯೋಗಾಸನಗಳ ಮಹತ್ವ ತಿಳಿಸಿಕೊಟ್ಟರು.

ತಾಲೂಕು ಪತಂಜಲಿ ಸಮಿತಿ ಕಾರ್ಯದರ್ಶಿ ಪ್ರಭಾಕರ ಖೇಡದ ಮಾತನಾಡಿ, ವಿದ್ಯಾರ್ಥಿ ಬಳಗ ಯೋಗ ಶಿಬಿರ ಹಮ್ಮಿಕೊಂಡಿರುವದು ಸಂತಸ ನೀಡಿದೆ. ಈ ಶಿಬಿರದಲ್ಲಿ ಮಕ್ಕಳಿಗೆ ಯೋಗದ ಕುರಿತು ಪ್ರಬಂಧ ಸ್ಪರ್ಧೆ ಹಮ್ಮಿಕೊಳ್ಳುವ ಮೂಲಕ ಮಕ್ಕಳಲ್ಲಿ ಯೋಗದ ಜಾಗೃತಿ ಮೂಡಿಸಬೇಕೆಂದು ಅಭಿಪ್ರಾಯ ವ್ಯಕ್ತಪಡಿಸಿದರು.ಶಿಬಿರದಲ್ಲಿ ಪ್ರೌಢಶಾಲೆಯ ವಿದ್ಯಾರ್ಥಿ ಬಳಗದ ರೇವಣಸಿದ್ದ ಡಿಗ್ಗಾವಿ, ಬಸವರಾಜ ತಳವಾರ, ಸೋಮಶೇಖರ ಚಾಂದಕವಟೆ, ಮಹೇಶ ಕಾಳಗಿ, ಭೀಮು ಮನಹಳ್ಳಿ, ಅಶೋಕ ಅವಟಿ, ವೀರಣ್ಣ ಸಜ್ಜನ, ಸಮೀರ ಶೇಖರ, ಅಶೋಕ ಉಂಡಿ, ಗ್ರಾಮದ ಸಂಗನಬಸು ಬಾಗೇವಾಡಿ, ಮಲ್ಲು ಉಕ್ಕಲಿ, ಶರಣು ಯಂಭತ್ನಾಳ, ಕಾಶೀನಾಥ ಹಳ್ಳಿ, ಈಶ್ವರ ಹಳ್ಳಿ, ನಾಗಣ್ಣ ಚಿಗರಿ, ಸಿದ್ದು ಗರನ, ಸಿದ್ದಪ್ಪ ನಡಕಟ್ಟಿ, ಸಿದ್ಲಿಂಗಪ್ಪ ಡಿಗ್ಗಾವಿ, ಜಗದೀಶ ದೇವೂರ, ರಮೇಶ ಹಡಪದ, ಶಾಲಾ ಮಕ್ಕಳು ಭಾಗವಹಿಸಿದ್ದರು. ರೇವಣಸಿದ್ದ ದಳವಾಯಿ ಪ್ರಾರ್ಥಿಸಿದರು. ಶಂಕರ ಹದಿಮೂರ ನಿರೂಪಿಸಿದರು. ಬಸವರಾಜ ಬಾಗೇವಾಡಿ ವಂದಿಸಿದರು.