ಭರಮಸಾಗರ ಪಿಡಿಓ ಅಮಾನತಿಗೆ ಮನವಿ

| Published : Jul 26 2024, 01:33 AM IST

ಸಾರಾಂಶ

dismis pdo: karunada sayne protest in Bharamasagar,

-ಕರುನಾಡ ವಿಜಯಸೇನೆಯಿಂದ ಡಿಸಿ ಕಚೇರಿ ಬಳಿ ಪ್ರತಿಭಟನೆ

------

ಕನ್ನಡಪ್ರಭ ವಾರ್ತೆ, ಚಿತ್ರದುರ್ಗ

ಭರಮಸಾಗರ ಗ್ರಾಪಂ ಪಿಡಿಓ ಅವರನ್ನು ಅಮಾನುತು ಪಡಿಸುವಂತೆ ಒತ್ತಾಯಿಸಿ ಕರುನಾಡ ವಿಜಯಸೇನೆ ಕಾರ್ಯಕರ್ತರು ಪ್ರತಿಭಟನೆ ನಡೆಸಿ ಮನವಿ ಸಲ್ಲಿಸಿದರು.

ಪಿಡಿಓ ಕೆ.ಎಸ್.ಶ್ರೀದೇವಿ, ಪಂಚಾಯಿತಿಯ ಹಣ ದುರುಪಯೋಗ, ಕರ್ತವ್ಯಲೋಪ, ಕಾನೂನುಬಾಹಿರ ಮತ್ತು ಸಾರ್ವಜನಿಕರ ವಿರೋಧಿಯಾಗಿ ಸರ್ಕಾರದ ಹಣವನ್ನು ಬೋಗಸ್ ಬಿಲ್ಲುಗಳನ್ನು ಹಾಕಿ ಲೂಟಿ ಮಾಡಿದ ಆರೋಪಗಳಿವೆ. ಇ-ಸೊತ್ತುಗಳಿಗೆ ರಶೀದಿ ಹಾಕದೇ ಹಣವನ್ನು ಗುಳುಂ ಮಾಡಿದ್ದು, ಸರ್ಕಾರದ ಬೊಕ್ಕಸಕ್ಕೆ ನಷ್ಟ ಉಂಟು ಮಾಡಿದ್ದಾರೆಂದು ಪ್ರತಿಭಟನಾಕಾರರು ದೂರಿದರು.

ಪಿಡಿಓ ಉಮಾದೇವಿ ಈ ಹಿಂದೆ ಕರ್ತವ್ಯ ನಿರ್ವಹಿಸಿದ ಪಂಚಾಯಿತಿಗಳಲ್ಲಿಯೂ ಇದೇ ರೀತಿ ಹಣ ದುರುಪಯೋಗ, ಕರ್ತವ್ಯ ಲೋಪವೆಸಗಿರುತ್ತಾರೆ. ಪಂಚಾಯಿತಿ ಆಡಳಿತ ಮಂಡಳಿಯ ಅಧ್ಯಕ್ಷರು, ಉಪಾಧ್ಯಕ್ಷರು ಹಾಗೂ ಚುನಾಯಿತ ಪ್ರತಿನಿಧಿಗಳಿಗೆ ಬೆಲೆಕೊಡದೇ ಏಕವಚನದಲ್ಲಿ ಮಾತನಾಡುವುದಲ್ಲದೇ ಅಗೌರವದಿಂದ ನಡೆದುಕೊಂಡು, ಕಛೇರಿಯ ನೌಕರರು, ಸಿಬ್ಬಂದಿ ಬಾಯಿಗೆ ಬಂದಂತೆ ಮಾತನಾಡುತ್ತಾರೆ. ಏಕಪಕ್ಷೀಯ ನಿರ್ಧಾರ ತೆಗೆದುಕೊಂಡು ಆಡಳಿತದಲ್ಲಿ ಬಾರಿ ಅಕ್ರಮ ನಡೆಸುತ್ತಿದ್ದಾರೆ. ಈ ಬಗ್ಗೆ ಈಗಾಗಲೇ ಜಿಲ್ಲಾ ಪಂಚಾಯಿತಿಯ ಮುಖ್ಯ ಲೆಕ್ಕಾಧಿಕಾರಿಗಳು ಇವರ ಮೇಲೆ ಸೂಕ್ತ ಕ್ರಮಜರುಗಿಸುವ ಬಗ್ಗೆ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿಗಳು, ತಾಪಂ ಕಾರ್ಯನಿರ್ವಾಹಕ ಅಧಿಕಾರಿಗಳು, ಲೆಕ್ಕಅಧೀಕ್ಷಕರಿಗೆ ವರದಿ ನೀಡಿರುತ್ತಾರೆ. ಇದುವರೆಗೂ ಯಾವುದೇ ಕ್ರಮ ಕೈಗೊಂಡಿಲ್ಲವೆಂದು ಆರೋಪಿಸಿದರು.

ಎನ್ಆರ್ ಇಜಿ ಯೋಜನೆಯಡಿ ನೇರಗುಂಟೆ ಗ್ರಾ.ಪಂ. ಮತ್ತು ಭರಮಸಾಗರ ಗ್ರಾಮ ಪಂಚಾಯಿತಿಯಲ್ಲಿ ಅಕ್ರಮವೆಸಗಿ ಅಮಾನತ್ತುಗೊಂಡಿದ್ದು, ಈ ಪ್ರಕರಣಗಳು ಇನ್ನು ತನಿಖೆಯಲ್ಲಿರುತ್ತವೆ. ಕೆ.ಎಸ್.ಶ್ರೀದೇವಿ ಅವರನ್ನು ಕೂಡಲೇ ಅಮಾನತ್ತು ಮಾಡಿ, ಸೂಕ್ತ ತನಿಖೆ ಕೈಗೊಂಡು ಅಕ್ರಮವಾಗಿ ಸರ್ಕಾರಕ್ಕೆ ನಷ್ಟ ಉಂಟು ಮಾಡಿರುವ ಹಣವನ್ನು ವಾಪಸ್‌ ಪಡೆದುಕೊಳ್ಳಲು ಆದೇಶಿಸಬೇಕೆಂದು ಜಿಲ್ಲಾಧಿಕಾರಿಗೆ ಸಲ್ಲಿಸಲಾದ ಮನವಿಯಲ್ಲಿ ಆಗ್ರಹಿಸಲಾಗಿದೆ.

ಸಂಘಟನೆಯ ಜಿಲ್ಲಾಧ್ಯಕ್ಷ ಕೆ.ಟಿ.ಶಿವಕುಮಾರ್, ಮಹಿಳಾ ಜಿಲ್ಲಾ ಅಧ್ಯಕ್ಷೆ ವೀಣಾಗೌರಣ್ಣ, ಜಿಲ್ಲಾ ಪ್ರಧಾನ ಕಾರ್ಯದರ್ಶಿ ಗೋಪಿನಾಥ.ಎಸ್. ಜಿಲ್ಲಾ ಉಪಾಧ್ಯಕ್ಷ ರತ್ನಮ್ಮ, ನಗರ ಅಧ್ಯಕ್ಷ ಅವಿನಾಶ್, ರಾಜ್ಯ ಸಮಿತಿಯ ನಿಸಾರ್ ಅಹಮದ್ ಜಿಲ್ಲಾ ಸಮಿತಿ ಸುರೇಶ್ ಜಿಲ್ಲಾ ಸಂಚಾಲಕ ಹರೀಶ್ ಕುಮಾರ್,ಪಿ.ಆರ್ ಜಗದೀಶ್ ಪ್ರತಿಭಟನೆ ನೇತೃತ್ವ ವಹಿಸಿದ್ದರು.

-------------

ಪೋಟೋ ಕ್ಯಾಪ್ಸನ್

ಭರಮಸಾಗರ ಪಿಡಿಓ ಅಮಾನತಿಗೆ ಆಗ್ರಹಿಸಿ ಕರುನಾಡ ಸೇನೆ ಕಾರ್ಯಕರ್ತರು ಪ್ರತಿಭಟನೆ ನಡೆಸಿದರು.

------

ಪೋಟೋ: 25 ಸಿಟಿಡಿ 3