ಸಂಪುಟದಿಂದ ಸಚಿವ ತಂಗಡಗಿ ವಜಾಗೊಳಿಸಿ: ಬಿಜೆಪಿ ಒತ್ತಾಯ

| Published : Mar 28 2024, 12:51 AM IST

ಸಂಪುಟದಿಂದ ಸಚಿವ ತಂಗಡಗಿ ವಜಾಗೊಳಿಸಿ: ಬಿಜೆಪಿ ಒತ್ತಾಯ
Share this Article
  • FB
  • TW
  • Linkdin
  • Email

ಸಾರಾಂಶ

ನರೇಂದ್ರ ಮೋದಿ ಅವರಿಗೆ ಬೆಂಬಲಿಸುವ ಯುವಕರ ಕಪಾಳಕ್ಕೆ ಹೊಡೆಯಬೇಕೆಂಬ ಹೇಳಿಕೆ ನೀಡಿರುವ ಶಿವರಾಜ ತಂಗಡಗಿ ಸಂಸ್ಕೃತಿಯೇ ಇಲ್ಲದ ಸಚಿವರೆನಿಸಿದ್ದಾರೆ. ಕನ್ನಡ ಮತ್ತು ಸಂಸ್ಕೃತಿ ಖಾತೆಯ ಈ ಸಚಿವರನ್ನು ಸಂಪುಟದಿಂದ ವಜಾ ಮಾಡಬೇಕು ಎಂದು ಬಿಜೆಪಿ ಜಿಲ್ಲಾ ವಕ್ತಾರ ಬಿ.ಎಂ.ಸತೀಶ ಕೊಳೇನಹಳ್ಳಿ ದಾವಣಗೆರೆಯಲ್ಲಿ ಆಗ್ರಹಿಸಿದ್ದಾರೆ.

- ಪ್ರಧಾನಿ ಬೆಂಬಲಿಸೋರ ಕಪಾಳಕ್ಕೆ ಹೊಡೆಯಬೇಕೆಂಬ ಹೇಳಿಕೆ ಖಂಡನೀಯ: ಸತೀಶ್‌

- - -

ಕನ್ನಡಪ್ರಭ ವಾರ್ತೆ, ದಾವಣಗೆರೆ ನರೇಂದ್ರ ಮೋದಿ ಅವರಿಗೆ ಬೆಂಬಲಿಸುವ ಯುವಕರ ಕಪಾಳಕ್ಕೆ ಹೊಡೆಯಬೇಕೆಂಬ ಹೇಳಿಕೆ ನೀಡಿರುವ ಶಿವರಾಜ ತಂಗಡಗಿ ಸಂಸ್ಕೃತಿಯೇ ಇಲ್ಲದ ಸಚಿವರೆನಿಸಿದ್ದಾರೆ. ಕನ್ನಡ ಮತ್ತು ಸಂಸ್ಕೃತಿ ಖಾತೆಯ ಈ ಸಚಿವರನ್ನು ಸಂಪುಟದಿಂದ ವಜಾ ಮಾಡಬೇಕು ಎಂದು ಬಿಜೆಪಿ ಜಿಲ್ಲಾ ವಕ್ತಾರ ಬಿ.ಎಂ.ಸತೀಶ ಕೊಳೇನಹಳ್ಳಿ ಆಗ್ರಹಿಸಿದರು.

ನಗರದಲ್ಲಿ ಬುಧ‍ವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಕಾಂಗ್ರೆಸ್ಸಿನ ಸೋನಿಯಾ ಗಾಂಧಿ ಈ ಹಿಂದೆ ಮೋದಿ ಅವರನ್ನು ಸಾವಿನ ವ್ಯಾಪಾರಿ ಅಂದಿದ್ದರು. ಇನ್ನು ಮಲ್ಲಿಕಾರ್ಜುನ ಖರ್ಗೆ ಅವರು ವಿಷಸರ್ಪ ಎಂದಿದ್ದರು. ಅದರ ಮುಂದುವರಿದ ಭಾಗವಾಗಿ ಮೋದಿಗೆ ಬೆಂಬಲಿಸುವ ಯುವಕರ ಕಪಾಳಕ್ಕೆ ಹೊಡೆಯುವಂತೆ ಶಿವರಾಜ ತಂಗಡಗಿ ಹೇಳಿಕೆ ನೀಡಿದ್ದಾರೆ. ಇದು ಖಂಡನೀಯ ಎಂದರು.

ಬಿಜೆಪಿ ಯುವ ಮೋರ್ಚಾ ರಾಜ್ಯ ಉಪಾಧ್ಯಕ್ಷ ಮಾಯಕೊಂಡ ಜಿ.ಎಸ್. ಶ್ಯಾಮ್ ಮಾತನಾಡಿ, ಭಾರತ್ ಮಾತಾ ಕೀ ಜೈ, ನರೇಂದ್ರ ಮೋದಿಗೂ ಜೈ ಎನ್ನುತ್ತೇನೆ. ಸಂಸ್ಕೃತಿ ಇಲ್ಲದ ಸಚಿವ ಶಿವರಾಜ ತಂಗಡಗಿಗೆ ತಾಕತ್ತಿದ್ದರೆ ನನ್ನ ಕಪಾಳಕ್ಕೆ ಹೊಡೆಯಲಿ ನೋಡೋಣ. ಸಂಸ್ಕೃತಿಯೇ ಇಲ್ಲದ ವ್ಯಕ್ತಿಗೆ ಕಾಂಗ್ರೆಸ್ ಪಕ್ಷ ಕನ್ನಡ ಮತ್ತು ಸಂಸ್ಕೃತಿ ಖಾತೆ ನೀಡಿದೆ ಎಂದು ವ್ಯಂಗ್ಯವಾಡಿದರು.

ಪಾಲಿಕೆ ಸದಸ್ಯ ಆರ್.ಶಿವಾನಂದ ಮಾತನಾಡಿದರು. ಜಿಲ್ಲಾ ಪ್ರಧಾನ ಕಾರ್ಯದರ್ಶಿ ಅನಿಲಕುಮಾರ ನಾಯ್ಕ, ಮಾಜಿ ಮೇಯರ್ ಎಚ್.ಎನ್.ಗುರುನಾಥ, ಎಚ್.ಪಿ.ವಿಶ್ವಾಸ ಇತರರು ಇದ್ದರು.

- - -

ಟಾಪ್‌ ಕೋಟ್‌

ರಾಜ್ಯದ ಯುವಜನತೆ ಕಾಂಗ್ರೆಸ್‌ಗೆ ಲೋಕಸಭೆ ಚುನಾವಣೆಯಲ್ಲಿ ತಕ್ಕಪಾಠ ಕಲಿಸುತ್ತೇವೆ. ಮೋದಿ ಹೆಸರನ್ನು ಯುವಜನರು ಯಾವುದೇ ಆಸೆ, ಆಮಿಷಕ್ಕಾಗಿ ಹೇಳುತ್ತಿಲ್ಲ. ದೇಶದ ಭವಿಷ್ಯ, ವಿದ್ಯಾರ್ಥಿ, ಯುವಜನರ ಹಿತಕ್ಕಾಗಿ, ಬಲಿಷ್ಠ ಭಾರತಕ್ಕಾಗಿ ಮನಃಪೂರ್ವಕವಾಗಿ ನರೇಂದ್ರ ಮೋದಿ ಹೆಸರು ಹೇಳುತ್ತಾರೆ. ಇದು ಕಾಂಗ್ರೆಸ್ಸಿಗೆ ಸಹಿಸಲಾಗುತ್ತಿಲ್ಲ

- ಜಿ.ಎಸ್.ಶ್ಯಾಮ್ ಮಾಯಕೊಂಡ,

ರಾಜ್ಯ ಉಪಾಧ್ಯಕ್ಷ, ಬಿಜೆಪಿ ಯುವ ಮೋರ್ಚಾ

- - -

-27ಕೆಡಿವಿಜಿ1: