ನದಿ ತೀರದ ಗ್ರಾಮಸ್ಥರ ಸ್ಥಳಾಂತರ

| Published : Jul 26 2024, 01:34 AM IST

ಸಾರಾಂಶ

ಚಿಕ್ಕೋಡಿ ತಾಲೂಕಿನ ಯಕ್ಸಂಬಾ, ಯಡೂರ, ಕಲ್ಲೋಳ, ಚಂದೂರ ಸೇರಿದಂತೆ ನದಿ ತೀರದ ಗ್ರಾಮಗಳ ಜನರರನ್ನು ದನ, ಕರುಗಳೊಂದಿಗೆ ಮನೆಯ ಎಲ್ಲ ಸರಂಜಾಮುಗಳಿಂದ ಗ್ರಾಮದಲ್ಲಿರುವ ಮನೆಗೆ ಸುರಕ್ಷಿತ ಸ್ಥಳಗಳಿಗೆ ಸ್ಥಳಾಂತರಿಸಲಾಗುತ್ತಿದೆ.

ಕನ್ನಡಪ್ರಭ ವಾರ್ತೆ ಚಿಕ್ಕೋಡಿ

ಚಿಕ್ಕೋಡಿ ತಾಲೂಕಿನ ಕಲ್ಲೋಳ ಬಳಿ ಕೃಷ್ಣಾ ನದಿಗೆ 1,88,742 ಕ್ಯುಸೆಕ್ ನೀರು ಹರಿದು ಬರುತ್ತಿದ್ದು, ಚಿಕ್ಕೋಡಿ ತಾಲೂಕಿನ ಯಕ್ಸಂಬಾ, ಯಡೂರ, ಕಲ್ಲೋಳ, ಚಂದೂರ ಸೇರಿದಂತೆ ನದಿ ತೀರದ ಗ್ರಾಮಗಳ ಜನರರನ್ನು ದನ, ಕರುಗಳೊಂದಿಗೆ ಮನೆಯ ಎಲ್ಲ ಸರಂಜಾಮುಗಳಿಂದ ಗ್ರಾಮದಲ್ಲಿರುವ ಮನೆಗೆ ಸುರಕ್ಷಿತ ಸ್ಥಳಗಳಿಗೆ ಸ್ಥಳಾಂತರಿಸಲಾಗುತ್ತಿದೆ.

ದೂಧಗಂಗಾ ನದಿಗೆ 35200 ಕ್ಯುಸೆಕ್ ಮತ್ತು ಕೃಷ್ಣಾ ನದಿಗೆ 1,53,542 ಕ್ಯುಸೆಕ್ ಹೀಗೆ ಒಟ್ಟು 1,88,742 ಕ್ಯುಸೆಕ್ ನೀರು ಚಿಕ್ಕೋಡಿ ತಾಲೂಕಿನ ಕಲ್ಲೋಳ ಬಳಿ ಕೃಷ್ಣೆಗೆ ಹರಿದು ಬರುತ್ತಿದೆ.

ಭೋಜವಾಡಿ-ಶಿವಾಪುರವಾಡಿ, ಬಾರವಾಡ-ಕುನ್ನೂರ, ಸಿದ್ನಾಳ-ಅಕ್ಕೋಳ ಮತ್ತು ಜತ್ರಾಟ-ಭಿವಸಿ ದೂದಗಂಗಾ ನದಿಯ ಕಾರದಗಾ-ಭೋಜ ಮತ್ತು ಮಲಿಕವಾಡ-ದತವಾಡ ಮತ್ತು ಕೃಷ್ಣಾ ನದಿಯ ಮಾಂಜರಿ-ಸವದತ್ತಿ ಬ್ಯಾರೇಜ್‌ಗಳು ಜಾಲಾವೃತಗೊಂಡು ಸಂಚಾರ ಸ್ಥಗಿತಗೊಂಡಿದ್ದು, ಪ್ರಯಾಣಿಕರು ಸುತ್ತುಬಳಸಿ ಪ್ರಯಾಣಿಸುವಂತಾಗಿದೆ. ಬೇಡಕಿಹಾಳ-ಬೋರಗಾಂವ ಮತ್ತು ಯಕ್ಸಂಬಾ-ದಾನವಾಡ ಸೇತುವೆಗಳಿಂದ ಸಂಚಾರ ಎಂದಿನಂತೆ ಪ್ರಾರಂಭವಿದ್ದು, ಮುಳುಗಡೆಯಾಗಲು ಕೆಲ ಅಡಿಗಳಷ್ಟು ಬಾಕಿ ಉಳಿದಿದೆ.

ಮಳೆಯ ವಿವಿರ (ಮಿಮೀಗಳಲ್ಲಿ): ಕೊಯ್ನಾ-163, ವಾರಣಾ-172, ಕಾಳಮ್ಮಾವಾಡಿ-142, ಮಹಾಬಳೇಶ್ವರ-307, ನವಜಾ-237 ರಾಧಾನಗರಿ-202, ಕೊಲ್ಲಾಪುರ-45 ಮತ್ತು ಸಾಂಗಲಿ-18 ಮಿಮಿ ಮಳೆಯಾಗಿರುವ ಕುರಿತು ವರದಿಯಾಗಿದೆ.