ಸಾರಾಂಶ
ಕನ್ನಡಪ್ರಭ ವಾರ್ತೆ ಮಂಗಳೂರು ಮಂಗಳೂರು ನಗರ ಪೊಲೀಸ್ ವತಿಯಿಂದ ‘ಡ್ರಗ್ಸ್ ಮುಕ್ತ ಕರ್ನಾಟಕ’ ಸಂಬಂಧ ಮಾದಕ ದ್ರವ್ಯ ವಿರೋಧಿ ಜಾಗೃತಿ ಅಭಿಯಾನ ಹಿನ್ನಲೆಯಲ್ಲಿ ಡೆಕಲ್ಲೋನ್, ಮಂಗಳೂರು ರನ್ನರ್ಸ್ ಕ್ಲಬ್, ಝೀಯುಸ್ ಫಿಟೈಸ್ ಕ್ಲಬ್, ವಿ ಆರ್ ಸೈಕ್ಲಿಂಗ್, ವೆರಿಟೊ ಮೀಡಿಯಾ ಮತ್ತು ವಿವಿಧ ಸಂಸ್ಥೆಗಳ ಸಹಕಾರದಲ್ಲಿ ಶನಿವಾರ ಮಂಗಳೂರು ನಗರದ ಟೌನ್‌ಹಾಲ್‌ನಿಂದ ಟಿ.ಎಂ.ಎ. ಪೈ ಕನ್ವೆನ್ನನ್ ಹಾಲ್‌ವರೆಗೆ ವಿದ್ಯಾರ್ಥಿಗಳು ಮತ್ತು ಸಾರ್ವಜನಿಕರ ‘ವಾಕ್ ರನ್ ಸೈಕ್ಲೋಥಾನ್’ ನಡೆಯಿತು. ಈ ಕಾರ್ಯಕ್ರಮದಲ್ಲಿ ನಗರದ 24 ಕಾಲೇಜ್‌ಗಳ ವಿದ್ಯಾರ್ಥಿಗಳು ಮತ್ತು ವಿವಿಧ ಸಂಸ್ಥೆಗಳ ಸದಸ್ಯರು ಸೇರಿದಂತೆ 1,896 ಮಂದಿ ಭಾಗವಹಿಸಿದ್ದರು. ಸಾರ್ವಜನಿಕರಲ್ಲಿ ಜಾಗೃತಿ ಮೂಡಿಸುವ ಸಂಬಂಧ ಕಾಲೇಜು ವಿದ್ಯಾರ್ಥಿಗಳು ದಾರಿಯುದ್ದಕ್ಕೂ ಮಾದಕ ದ್ರವ್ಯ ವಿರೋಧಿ ಪ್ಲೇ ಕಾರ್ಡ್‌ಗಳನ್ನು ಪ್ರದರ್ಶಿಸಿ ಘೋಷಣೆಗಳನ್ನು ಕೂಗುತ್ತಾ ಸಾಗಿದರು. ಸೈಕ್ಲೋಥಾನ್ ಟೌನ್‌ಹಾಲ್‌ನಿಂದ ಹೊರಟು-ಕ್ಲಾಕ್ ಟವರ್- ಹಂಪನಕಟ್ಟೆ-ಎಲ್‌ಎಚ್‌ಎಚ್-ಮಿಲಾಗ್ರಿಸ್-ಫಳ್ನೀರ್-ಕಂಕನಾಡಿ- ಬೆಂದೂರ್‌ವೆಲ್-ಅಂಬೇಡ್ಕರ್ ವೃತ್ತ-ಬಂಟ್ಸ್ ಹಾಸ್ಟೆಲ್-ಪಿವಿಎಸ್ ವೃತ್ತ- ಟಿಎಂಎಪೈ ಕನ್ವೆನ್ಶನ್ ಹಾಲ್ ವರೆಗೆ (5 ಕಿ.ಮೀ) ಮತ್ತು ನಡಿಗೆ ಮತ್ತು ಓಟ ಟೌನ್‌ಹಾಲ್‌ನಿಂದ ಹೊರಟು ಕ್ಲಾಕ್‌ಟವರ್-ಹಂಪನಕಟ್ಟೆ-ನವಭಾರತ ವೃತ್ತ-ಪಿವಿಎಸ್-ಟಿ.ಎಂ.ಎ ಪೈ ಕನ್ವೆನ್ಶನ್ ಹಾಲ್‌ವರೆಗೆ (2ಕಿ.ಮೀ) ಸಾಗಿತು.