ಕಾಲಮಿತಿಯಲ್ಲಿ ಸಕಾಲ ಅರ್ಜಿ ವಿಲೇವಾರಿ ಮಾಡಿ

| Published : Sep 17 2025, 01:06 AM IST

ಸಾರಾಂಶ

ಸಕಾಲ ಮತ್ತು ಐಪಿಜಿಆರ್‌ಎಸ್ ಬಗ್ಗೆ ಯಾವುದೇ ಸಮಸ್ಯೆಗಳಿದ್ದರೆ ಪ್ರತಿ ಇಲಾಖೆಯ ತಮ್ಮ ಕೇಂದ್ರ ಕಚೇರಿಯಲ್ಲಿ ಇದಕ್ಕೆ ಒಬ್ಬ ಕನ್ಸಲಟೆಂಟ್ ಇರುತ್ತಾರೆ. ಅವರಿಂದ ತಿಳಿದುಕೊಂಡು ಸಮಸ್ಯೆ ಬಗೆಹರಿಸಿಕೊಳ್ಳಬೇಕು. ಯಾವುದೇ ಕಾರಣಕ್ಕೆ ಅರ್ಜಿ ಬಾಕಿ ಇರಬಾರದು ಹಾಗೂ ತಿರಸ್ಕರಿಸಬಾರದು.

ಕೊಪ್ಪಳ:

ಸಕಾಲ ಮತ್ತು ಐಪಿಜಿಆರ್‌ಎಸ್ ಅರ್ಜಿಗಳನ್ನು ಕಾಲಮಿತಿಯಲ್ಲಿ ವಿಲೇವಾರಿ ಮಾಡಲು ಸಂಬಂಧಿಸಿದ ಇಲಾಖೆ ಅಧಿಕಾರಿ ಮತ್ತು ಕೇಸ್‌ ವರ್ಕರ್‌ ಕ್ರಮವಹಿಸಬೇಕು. ಇಲ್ಲದಿದ್ದರೆ ತಮಗೆ ದಂಡ ಹಾಕಬೇಕಾಗುತ್ತದೆ ಎಂದು ಅಪರ ಜಿಲ್ಲಾಧಿಕಾರಿ ಸಿದ್ರಾಮೇಶ್ವರ ಎಚ್ಚರಿಸಿದರು.

ಮಂಗಳವಾರ ಜಿಲ್ಲಾಧಿಕಾರಿ ಕಚೇರಿಯಲ್ಲಿ ನಡೆದ ಸಕಾಲ ಸಮನ್ವಯ ಸಮಿತಿ ಹಾಗೂ ಐಪಿಜಿಆರ್‌ಎಸ್‌ ಸಮಿತಿಯ ಪ್ರಗತಿ ಪರಿಶೀಲನಾ ಸಭೆ ನಡೆಸಿ ಮಾತನಾಡಿದರು.

ಸಕಾಲ ಮತ್ತು ಐಪಿಜಿಆರ್‌ಎಸ್ ಬಗ್ಗೆ ಯಾವುದೇ ಸಮಸ್ಯೆಗಳಿದ್ದರೆ ಪ್ರತಿ ಇಲಾಖೆಯ ತಮ್ಮ ಕೇಂದ್ರ ಕಚೇರಿಯಲ್ಲಿ ಇದಕ್ಕೆ ಒಬ್ಬ ಕನ್ಸಲಟೆಂಟ್ ಇರುತ್ತಾರೆ. ಅವರಿಂದ ತಿಳಿದುಕೊಂಡು ಸಮಸ್ಯೆ ಬಗೆಹರಿಸಿಕೊಳ್ಳಬೇಕು. ಯಾವುದೇ ಕಾರಣಕ್ಕೆ ಅರ್ಜಿ ಬಾಕಿ ಇರಬಾರದು ಹಾಗೂ ತಿರಸ್ಕರಿಸಬಾರದು ಎಂದ ಅವರು, ಅನ್ಯ ಜಿಲ್ಲೆಯಲ್ಲಿ ಅರ್ಜಿಗಳು ತಿರಸ್ಕೃತವಾಗುವುದಿಲ್ಲ. ನಮ್ಮಲ್ಲಿ ಮಾತ್ರ ಏಕೆ ಆಗುತ್ತಿವೆ ಎಂದು ಪ್ರಶ್ನಿಸಿದರು.

ಸಕಾಲದಲ್ಲಿ ಬರುವ ಅರ್ಜಿಗಳನ್ನು 21 ದಿನಗಳಲ್ಲಿ ಇತ್ಯರ್ಥಪಡಿಸಬೇಕೆಂದು ಸೂಚಿಸಿದರು.

ಸಭೆಯಲ್ಲಿ ಡಿಡಿಪಿಯು ಜಗದೀಶ್, ಮೀನುಗಾರಿಕೆ ಇಲಾಖೆಯ ಉಪನಿರ್ದೇಶಕ ಡಾ. ಶ್ರೀನಿವಾಸ ಕುಲಕರ್ಣಿ, ಜಿಲ್ಲಾ ಹಿಂದುಳಿದ ವರ್ಗಗಳ ಕಲ್ಯಾಣ ಅಧಿಕಾರಿ ನಾಗಮಣಿ, ಪಶು ಪಾಲನಾ ಮತ್ತು ಪಶು ವೈದ್ಯಕೀಯ ಸೇವಾ ಇಲಾಖೆ ಉಪನಿರ್ದೇಶಕ ಡಾ. ಪಿ.ಎಂ. ಮಲ್ಲಯ್ಯ, ಗಣಿ ಮತ್ತು ಭೂವಿಜ್ಞಾನ ಇಲಾಖೆಯ ಹಿರಿಯ ಭೂವಿಜ್ಞಾನಿ ಪುಷ್ಪಲತಾ ಕವಲೂರು, ಭೂ ದಾಖಲೆ ಇಲಾಖೆಯ ಉಪನಿರ್ದೇಶಕಿ ಭಾಗ್ಯಮ್ಮ ಬಿ., ಸಕಾಲ ಕನ್ಸಲ್ಟಂಟ್ ವಿಶ್ವನಾಥ, ಐಪಿಜಿಆರ್‌ಎಸ್ ಕನ್ಸಲ್ಟಂಟ್ ಜಾಫರ್ ಭಾಗವಾನ್ ಸೇರಿದಂತೆ ವಿವಿಧ ಇಲಾಖೆಗಳ ಅಧಿಕಾರಿಗಳು ಹಾಗೂ ಮತ್ತಿತರರು ಉಪಸ್ಥಿತರಿದ್ದರು.