ವಿಧಾನಮಂಡಲದಲ್ಲಿ ರಾಜ್ಯಪಾಲರು ಪೂರ್ತಿ ಭಾಷಣ ಮಾಡದೆ ಹೊರಟಿರುವುದು ಇದು ಸಂವಿಧಾನಕ್ಕೆ ತೋರಿದ ಅಗೌರವ ಎಂದು ಉಸ್ತುವಾರಿ ಸಚಿವ ಭೋಸರಾಜು ಹೇಳಿದ್ದಾರೆ.
ಕನ್ನಡಪ್ರಭ ವಾರ್ತೆ ಮಡಿಕೇರಿ
ವಿಧಾನಮಂಡಲದಲ್ಲಿ ರಾಜ್ಯಪಾಲರು ಪೂರ್ತಿ ಭಾಷಣ ಮಾಡದೆ ಹೊರಟಿರುವುದು ಇದು ಸಂವಿಧಾನಕ್ಕೆ ತೋರಿದ ಅಗೌರವ ಎಂದು ಉಸ್ತುವಾರಿ ಸಚಿವ ಭೋಸರಾಜು ಹೇಳಿದ್ದಾರೆ.ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಉಭಯ ಸದನ ಗಳಲ್ಲಿ ರಾಷ್ಟ್ರಗೀತೆ ಹಾಡಲಾಗುತ್ತಿತ್ತು. ಈ ವೇಳೆ ರಾಜ್ಯಪಾಲರು ನಿಲ್ಲದೆ ಹೊರಟು ಹೋದರು. ಇದರ ವಿರುದ್ಧ ಕಾನೂನು ಹೋರಾಟಕ್ಕೆ ಸಿದ್ಧತೆ ನಡೆಯುತ್ತಿದೆ ಎಂದು ತಿಳಿಸಿದರು. ಪ್ರಧಾನಿ ಮೋದಿಯವರು ಯಾವುದೇ ರಾಜ್ಯಗಳೊಂದಿಗೆ ಚರ್ಚಿಸಲಿಲ್ಲ. ಎನ್ ಡಿ ಎ ಭಾಗವಾಗಿರುವ ರಾಜ್ಯಗಳೊಂದಿಗೂ ಚರ್ಚೆ ಮಾಡಿಲ್ಲ. ಹೀಗಾಗಿಯೇ ಚಂದ್ರಬಾಬು ನಾಯ್ಡು ಅವರು ಕೂಡ ಪತ್ರ ಬರೆದಿದ್ದಾರೆ. ಪ್ರಧಾನಿ ಮೋದಿ ತಮ್ಮ ಡಿಕ್ಟೇಟರ್ ಶಿಪ್ ಮುಂದುವರಿಸಿದ್ದಾರೆ.
2005 ರಲ್ಲಿ ಮನಮೋಹನ್ ಸಿಂಗ್ ಅವರು ಪ್ರಧಾನಿಯಾಗಿದ್ದರು. ಕಾಯ್ದೆ ಜಾರಿಗೆ ತರುವಾಗ ಎಲ್ಲಾ ರಾಜ್ಯಗಳೊಂದಿಗೆ ಚರ್ಚಿಸಿದ್ದರು. 6 ತಿಂಗಳ ಕಾರ ವಿಸ್ತೃತ ಚರ್ಚೆ ಬಳಿಕ ಕಾಯ್ದೆ ಜಾರಿಗೆ ತಂದರು. ಆದರೆ ಪ್ರಧಾನಿ ಮೋದಿ ಅವರು ಹಾಗೆ ಮಾಡುತ್ತಿಲ್ಲ.ರಾಜ್ಯಗಳು 40 ರಷ್ಟು ಅನುದಾನ ಕೊಡಬೇಕಾದರೆ ಚರ್ಚಿಸಬೇಕಾಗಿತ್ತು. ಇಂತಹ ವಿಷಯಗಳನ್ನು ರಾಜ್ಯಪಾಲರ ಭಾಷಣದಲ್ಲಿ ಬರೆಯಲಾಗಿತ್ತು. ಆದರೆ ರಾಜ್ಯಪಾಲರು ಕೇಂದ್ರದ ಕೈಗೊಂಬೆಯಾಗಿ ನಡೆದುಕೊಂಡರು.
163 ಮತ್ತು 176 ನಿಯಮಗಳ ಪ್ರಕಾರ ರಾಜ್ಯಪಾಲರು ಭಾಷಣ ಓದಬೇಕಾಗಿತ್ತು. ಅದನ್ನು ಅವರು ಉಲ್ಲಂಘನೆ ಮಾಡಿದರು. ಇದಕ್ಕೆ ಉತ್ತರಿಸುವಂತೆ ಆಗ್ರಹಿಸಿದ್ದೇವೆ. ಆದರೆ ಇದುವರೆಗೆ ಉತ್ತರಿಸಿಲ್ಲ ಎಂದರು.ಟ್ರಕ್ ಸಹಿತ ಹೈಜಾಕ್ ಆಗಿರುವ 400 ಕೋಟಿ ಕಾಂಗ್ರೆಸಿನದು ಎಂದು ಮಹಾರಾಷ್ಟ್ರ ಸಿಎಂ ಹೇಳಿಕೆಗೆ ಪ್ರತಿಕ್ರಿಯಿಸಿದ ಅವರು, ಬಿಜೆಪಿಯವರು ಸುಳ್ಳು ಹೇಳುವುದರಲ್ಲಿ ನಿಸ್ಸೀಮರು. ಸುಳ್ಳು ಹೇಳಿ ಜನರ ದಾರಿ ತಪ್ಪಿಸುವ ಕೆಲಸ ಮಾಡುತ್ತಿದ್ದಾರೆ.
ಲೋಕಲ್ ಬಾಡಿ ಎಲೆಕ್ಷನ್ ಗಾಗಿ ದುಡ್ಡನ್ನು ಈ ರೀತಿ ಸಾಗಿಸುತ್ತಿದ್ದರು ಎನ್ನಲಾಗುತ್ತಿದೆ. ಆದರೆ ಬಿಜೆಪಿಯವರು ಆಪಾದನೆ ಮಾಡುತ್ತಿದ್ದಾರೆ ಅಷ್ಟೇ. ಮಹಾರಾಷ್ಟ್ರದಲ್ಲಿ ಈಗ ಕೇಸ್ ಆಗಿದೆ. ಕಂಪ್ಲೈಂಟ್ ಮಾಡಿದವರು, ಹೈಜಾಕ್ ಮಾಡಿದವರು ಎಲ್ಲರೂ ಮಹಾರಾಷ್ಟ್ರದವರೇ. ಸದ್ಯ ತನಿಖೆ ನಡೆಯುತ್ತಿದ್ದು ಏನೇ ಆದರು ಕಾನೂನು ಕ್ರಮ ಆಗಲಿದೆ ಎಂದರು.ನಮ್ಮನ್ನು ರಾಜ್ಯ ಸರ್ಕಾರ ಕಣ್ಣೀರು ಹಾಕಿಸಿದೆ. ಮುಂದೆ ನಮಗೂ ಒಳ್ಳೆಯ ಕಾಲ ಬರುತ್ತದೆ. ಆಗ ನಾವು ಹೀಗೆ ಮಾಡುತ್ತೇವೆಂದು ಎಚ್ ಡಿಕೆ, ಎಚ್ ಡಿ ಡಿ ಹೇಳಿಕೆಗೆ ಪ್ರತಿಕ್ರಿಯಿಸಿದ ಸಚಿವರು, ಖಂಡಿತ ಅವರ ಕಾಲ ಎಂದಿಗೂ ಬರಲು ಸಾಧ್ಯವಿಲ್ಲ. ಜೆಡಿಎಸ್ ನವರದು ಸರ್ವೈವಲ್ ಕಾಲ. ಹೀಗಾಗಿ ಹಿರಿಯರಾದ ಶ್ರೀಮಾನ್ ದೇವೇಗೌಡರು
ಹಾಗೂ ಕುಮಾರಸ್ವಾಮಿ ಅವರ ನಾಟಕ ಎಲ್ಲರಿಗೂ ಗೊತ್ತಿರುವಂತಹದ್ದೆ. ಹಾಗಾಗಿ ಕೆಲವು ದಿವಸ ಅವರ ನಾಟಕ ನಡೆಯುತ್ತದೆ. ಸುಮ್ಮನೆ ಹೀಗೆ ಹೇಳಬೇಕು ಹೇಳುತ್ತಾರೆ ಅಷ್ಟೇ. ಯಾವ ಕಾಲಕ್ಕೂ ಅವರಿಗೆ ಒಳ್ಳೆಯ ಕಾಲ ಬರುವುದಕ್ಕೆ ಸಾಧ್ಯವಿಲ್ಲ. ಅವರು ಮಾಡಿರುವಂತಹ ತಪ್ಪುಗಳಿಗೆ ಒಳ್ಳೆಯ ಕಾಲ ಬರುವುದಿಲ್ಲ. ಕಾಂಗ್ರೆಸ್ ನಿಂದ ಪ್ರಧಾನ ಮಂತ್ರಿಯಾಗಿ ಕಾಂಗ್ರೆಸನ್ನೇ ತುಳಿಯುವುದಕ್ಕೆ ನೋಡಿದರು. ಹಾಗಾಗಿ ಅವರನ್ನು ಹಿಂದಕ್ಕೆ ಕಳುಹಿಸಿದ್ದು , ಕುಮಾರಸ್ವಾಮಿ ಅವರಿಗೂ ಕಾಂಗ್ರೆಸ್ ನವರು ಸಪೋರ್ಟ್ ಮಾಡಿದ್ರು. ಸಿಎಂ ಆದ ಮೇಲೆ ಅವರು ಕೂಡ ಅದೇ ರೀತಿ ನಡೆದುಕೊಂಡಿದ್ರು. ಹಾಗಾಗಿಯೇ ಅವರಿಂದ ವಿತ್ ಡ್ರಾ ಮಾಡಿ ಮನೆಗೆ ಕಳುಹಿಸಬೇಕಾಯಿತು.2028 ಕ್ಕೆ ನೂರಕ್ಕೆ ನೂರು ನಮ್ಮ ಸರ್ಕಾರ ಬರುತ್ತೆ. ಈಗ 140 ಇದ್ದೇವೆ ಮುಂದಿನ ಚುನಾವಣೆಯಲ್ಲಿ 148 ಪಡೆಯಲಿದ್ದೇವೆ. ಇದು ನಮ್ಮ ಸಮೀಕ್ಷೆ ಎಂದರು.