ಪಂಚಮುಖಿ ಕಲ್ಯಾಣಿಯಲ್ಲಿ ಗೌರಿ ಮೂರ್ತಿ ವಿಸರ್ಜನೆ

| Published : Aug 30 2025, 01:00 AM IST

ಸಾರಾಂಶ

ಸ್ವರ್ಣ ಗೌರಿ ಹಬ್ಬದಂದು ಗ್ರಾಮದ ಪುರವರ್ಗ ಹಿರೇಮಠದ ಡಾ. ಮಹೇಶ್ವರ ಶಿವಾಚಾರ್ಯ ಸ್ವಾಮೀಜಿಯವರ ಸಾನ್ನಿಧ್ಯದಲ್ಲಿ ವೀರಶೈವ ಸಮಾಜದ ಮುತ್ತೈದೆಯರು ಪಂಚಮುಖಿ ಕಲ್ಯಾಣಿಯಿಂದ ಗಂಗೆ ಪೂಜೆಯೊಂದಿಗೆ ಸ್ವರ್ಣ ಗೌರಿಯನ್ನು ಕರೆ ತರುವ ಮೂಲಕ ಗ್ರಾಮದ ಪೇಟೆ ಬೀದಿಯಲ್ಲಿರುವ ಶ್ರೀ ಬಸವೇಶ್ವರ ದೇವಾಲಯದಲ್ಲಿ ಗೌರಮ್ಮನನ್ನು ಪ್ರತಿಷ್ಠಾಪಿಸಿದ್ದರು. 3 ದಿನಗಳ ನಂತರ ಗೌರಿ ಮೂರ್ತಿಯನ್ನು ಕಲ್ಯಾಣಿಯಲ್ಲಿ ವೀರಶೈವ ಸಮಾಜದ ಶೆಟ್ರು ಕುಟುಂಬದ ನೇತೃತ್ವದಲ್ಲಿ ಪಂಚಮುಖಿ ಕಲ್ಯಾಣಿಯಲ್ಲಿ ವಿಸರ್ಜಿಲಾಯಿತು.

ಕನ್ನಡಪ್ರಭ ವಾರ್ತೆ ನುಗ್ಗೇಹಳ್ಳಿ ಗ್ರಾಮದ ಪೇಟೆ ಬೀದಿಯಲ್ಲಿರುವ ಶ್ರೀ ಬಸವೇಶ್ವರ ದೇವಾಲಯದಲ್ಲಿ ಸ್ವರ್ಣ ಗೌರಿ ಹಬ್ಬದಂದು ಪ್ರತಿಷ್ಠಾಪಿಸಲಾಗಿದ್ದ ಗೌರಿ ಮೂರ್ತಿಯನ್ನು ಸುಮಂಗಲಿಯರು ಪೂಜೆ ನೆರವೇರಿಸಿ ಶಾಸ್ತ್ರೋಕ್ತವಾಗಿ ಪಂಚಮುಖಿ ಕಲ್ಯಾಣಿಯಲ್ಲಿ ವಿಸರ್ಜಿಸಲಾಯಿತು.ಸ್ವರ್ಣ ಗೌರಿ ಹಬ್ಬದಂದು ಗ್ರಾಮದ ಪುರವರ್ಗ ಹಿರೇಮಠದ ಡಾ. ಮಹೇಶ್ವರ ಶಿವಾಚಾರ್ಯ ಸ್ವಾಮೀಜಿಯವರ ಸಾನ್ನಿಧ್ಯದಲ್ಲಿ ವೀರಶೈವ ಸಮಾಜದ ಮುತ್ತೈದೆಯರು ಪಂಚಮುಖಿ ಕಲ್ಯಾಣಿಯಿಂದ ಗಂಗೆ ಪೂಜೆಯೊಂದಿಗೆ ಸ್ವರ್ಣ ಗೌರಿಯನ್ನು ಕರೆ ತರುವ ಮೂಲಕ ಗ್ರಾಮದ ಪೇಟೆ ಬೀದಿಯಲ್ಲಿರುವ ಶ್ರೀ ಬಸವೇಶ್ವರ ದೇವಾಲಯದಲ್ಲಿ ಗೌರಮ್ಮನನ್ನು ಪ್ರತಿಷ್ಠಾಪಿಸಿದ್ದರು. 3 ದಿನಗಳ ನಂತರ ಗೌರಿ ಮೂರ್ತಿಯನ್ನು ಕಲ್ಯಾಣಿಯಲ್ಲಿ ವೀರಶೈವ ಸಮಾಜದ ಶೆಟ್ರು ಕುಟುಂಬದ ನೇತೃತ್ವದಲ್ಲಿ ಪಂಚಮುಖಿ ಕಲ್ಯಾಣಿಯಲ್ಲಿ ವಿಸರ್ಜಿಲಾಯಿತು. ಪುರವರ್ಗ ಹಿರೇಮಠದ ಡಾ. ಮಹೇಶ್ವರ ಶಿವಾಚಾರ್ಯ ಸ್ವಾಮೀಜಿ ಪೂಜಾ ವಿಧಿ ವಿಧಾನಗಳನ್ನು ನೆರವೇರಿಸಿದರು. ಈ ಸಂದರ್ಭದಲ್ಲಿ ಶೆಟ್ರು ಮನೆತನದ ಸುಮಾ ಲೋಕೇಶ್, ರಾಜೇಶ್ವರಿ ವಿರುಪಾಕ್ಷ, ಮಾಲಾ ರುದ್ರಸ್ವಾಮಿ. ಆರ್‌. ವತ್ಸಲ ಶಿವಾನಂದ್, ಸರ್ವಮಂಗಳ ರಾಜಶೇಖರ್, ರತ್ನ ಶಿವಣ್ಣ, ಕವಿತಾ ರಾಜು, ಅಮಿತ್, ಮಂಜುಳಾ ರಮೇಶ್, ಶಕು, ನಾಗರಾಜ್, ಸಿದ್ದೇಶ್ ಅರ್ಚಕರು ಸೇರಿದಂತೆ ಸಮಾಜದ ಪ್ರಮುಖರು ಗ್ರಾಮಸ್ಥರು ಹಾಜರಿದ್ದರು.