ಪ್ಯಾಕೇಜ್ ಟೆಂಡರ್‌ನಿಂದ ಸಣ್ಣ ಗುತ್ತಿಗೆದಾರರಿಗೆ ಸಂಕಷ್ಟ

| Published : Mar 12 2024, 02:08 AM IST

ಸಾರಾಂಶ

ಚನ್ನಪಟ್ಟಣ: ಪ್ಯಾಕೇಜ್ ಟೆಂಡರ್ ಪ್ರಕಿಯೆಯಿಂದಾಗಿ ಸಣ್ಣಪುಟ್ಟ ಗುತ್ತಿಗೆದಾರರು ಬೀದಿಗೆ ಬಿದ್ದಿದ್ದಾರೆ. ಬ್ಯಾಂಕ್‌ನಿಂದ ಪಡೆದ ಸಾಲ ತೀರಿಸಲಾಗದೇ ಗುತ್ತಿಗೆದಾರರು ಸಂಕಷ್ಟ ಅನುಭವಿಸುತ್ತಿದ್ದಾರೆ. ಈ ಹಿನ್ನೆಲೆಯಲ್ಲಿ ಗುತ್ತಿಗೆದಾರರ ಹಿತ ರಕ್ಷಣೆ ಉದ್ದೇಶದಿಂದ ಚನ್ನಪಟ್ಟಣ ತಾಲೂಕು ಗುತ್ತಿಗೆದಾರರ ಸಂಘವನ್ನು ಅಸ್ತಿತ್ವಕ್ಕೆ ತರಲಾಗಿದೆ ಎಂದು ನೂತನ ಅಧ್ಯಕ್ಷ ಶ್ಯಾನುಭೋಗನಹಳ್ಳಿ ಪ್ರದೀಪ್ ತಿಳಿಸಿದರು.

ಪ್ರತಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಹತ್ತಾರು ಟೆಂಡರ್‌ಗಳನ್ನು ಒಗ್ಗೂಡಿಸಿ ಪ್ಯಾಕೇಜ್ ಟೆಂಡರ್ ಮಾಡಿ, ಟೆಂಡರ್ ಆಹ್ವಾನಿಸಲಾಗುತ್ತಿದೆ. ಇಂತಹ ದೊಡ್ಡ ಟೆಂಡರ್‌ಗಳು ಬಹುಪಾಲು ದೊಡ್ಡ ಗುತ್ತಿಗೆದಾರರ ಪಾಲಾಗುತ್ತಿದ್ದು, ಇದರಿಂದ ಸಣ್ಣ ಗುತ್ತಿಗೆದಾರರು ಗುತ್ತಿಗೆ ಮಾಡಲಾಗದೇ, ಬ್ಯಾಂಕ್‌ನಿಂದ ಪಡೆದ ಸಾಲ ತೀರಿಸಲಾಗದೆ ಪರಿತಪಿಸುತ್ತಿದ್ದಾರೆ. ಹೊರ ಜಿಲ್ಲೆಗಳ ಗುತ್ತಿಗೆದಾರರಿಂದ ಜಿಲ್ಲೆಯ ಸಣ್ಣ ಗುತ್ತಿಗೆದಾರರಿಗೆ ಕೆಲಸವಿಲ್ಲದೆ ಆರ್ಥಿಕ ಸಂಕಷ್ಟಕ್ಕೆ ಸಿಲುಕಿದ್ದಾರೆಂದು ಹೇಳಿದರು.

ಸಣ್ಣ ಗುತ್ತಿಗೆದಾರರ ಸಮಸ್ಯೆಗಳನ್ನು ಪರಿಹರಿಸಿ, ಅವರ ಹಿತ ಕಾಯುವ ಉದ್ದೇಶದಿಂದ ಸಂಘವನ್ನು ಅಸ್ತಿತ್ವಕ್ಕೆ ತರಲಾಗಿದೆ. ಸಂಘಟನಾತ್ಮಕ ಹೋರಾಟಕ್ಕಾಗಿ ರಾಜ್ಯ ಹಾಗೂ ಜಿಲ್ಲಾ ಸಂಘದ ಅಡಿಯಲ್ಲಿ ತಾಲೂಕು ಸಂಘ ರಚಿಸಿರುವುದಾಗಿ ವಿವರಿಸಿದರು.

ಸಂಘದ ನಿರ್ದೇಶಕ ಹಾಗೂ ಸಲಹೆಗಾರ ಬ್ರಹ್ಮಣೀಪುರ ಪ್ರಸನ್ನ, ಸಂಘದ ಪ್ರಧಾನ ಕಾರ್ಯದರ್ಶಿ ಹುಲುವಾಡಿ ಕೆಂಪೇಗೌಡ ಮಾತನಾಡಿದರು. ಸಂಘದ ಉಪಾಧ್ಯಕ್ಷರಾದ ಪುಟ್ಟಸ್ವಾಮಿ, ಚೈತನ್ಯ ಕುಮಾರ್, ಸಹಕಾರ್ಯದಶಿ ತೌಟನಹಳ್ಳಿ ಪ್ರಶಾಂತ್ , ಖಜಾಂಚಿ ಬಸವರಾಜು, ನಿರ್ದೇಶಕರಾದ ನಾಗೇಶ್ ಬೆಳಕೆರೆ, ಶಿವರಾಂ(ಕೆಂಪ), ಕೊಂಡಾಪುರ ಮಂಚೇಗೌಡ, ಕರಿಯಪ್ಪನದೊಡ್ಡಿ ಶಿವಣ್ಣ, ಚನ್ನವೀರೇಗೌಡ, ಮಂಕುಂದ ಕೃಷ್ಣ, ಜಿ.ಡಿ.ಶಿವಕುಮಾರ್ ರಾಜಶೇಖರ್ ಇತರರಿದ್ದರು.

ಪೋಟೊ೧೧ಸಿಪಿಟಿ2: ಚನ್ನಪಟ್ಟಣದಲ್ಲಿ ಗುತ್ತಿಗೆದಾರರ ಸಂಘದ ಪದಾಧಿಕಾರಿಗಳು ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದರು.