ರೈತರಿಗೆ ಬಿತ್ತನೆ ಬೀಜ ವಿತರಣೆ ಮಾಡಿ: ಜೋಗಣ್ಣವರ

| Published : May 27 2024, 01:13 AM IST

ಸಾರಾಂಶ

ಹೆಸರು ಬೀಜವನ್ನು ಖಾಸಗಿ ಅಂಗಡಿಯವರ ಹತ್ತಿರ ಕೆಜಿಗೆ ₹160 ಹೆಚ್ಚುವರಿಯಾಗಿ ಹಣ ನೀಡಿ ಖರೀದಿಸುವಂತಾಗಿದೆ.

ನರಗುಂದ: ಪ್ರಸಕ್ತ ವರ್ಷ ತಾಲೂಕಿನ ರೈತರು ಮುಂಗಾರು ಬಿತ್ತನೆಗೆ ಸಜ್ಜಾಗಿದ್ದು. ರೈತರಿಗೆ ಸರ್ಕಾರದ ಸಹಾಯಧನದಲ್ಲಿ ಕೃಷಿ ಇಲಾಖೆ ಅಧಿಕಾರಿಗಳು ಬೀಜ ವಿತರಣೆ ಮಾಡಬೇಕು ಎಂದು ರೈತ ಸೇನೆ ಸಂಘಟನೆ ರಾಜ್ಯ ಕಾರ್ಯದರ್ಶಿ ಎಸ್.ಬಿ. ಜೋಗಣ್ಣವರ ಆಗ್ರಹಿಸಿದರು.

ಅವರು 3216 ನೇ ದಿನದ ಮಹದಾಯಿ ಹಾಗೂ ಕಳಸಾ ಬಂಡೂರಿ ನಾಲಾ ಯೋಜನೆ ನಿರಂತರ ಹೋರಾಟ ವೇದಿಕೆಯಲ್ಲಿ ಮಾತನಾಡಿ, ಪಟ್ಟಣ ಸೇರಿದಂತೆ ತಾಲೂಕಿನ ವಿವಿಧ ಗ್ರಾಮಗಳಲ್ಲಿ ಅಲ್ಪಸ್ವಲ್ಪ ಮಳೆಯಾಗಿದೆ. ಹೆಸರು ಬೀಜವನ್ನು ಖಾಸಗಿ ಅಂಗಡಿಯವರ ಹತ್ತಿರ ಕೆಜಿಗೆ ₹160 ಹೆಚ್ಚುವರಿಯಾಗಿ ಹಣ ನೀಡಿ ಖರೀದಿಸುವಂತಾಗಿದೆ. ಆದ್ದರಿಂದ ಮುಂಗಾರು ಹಂಗಾಮಿನಲ್ಲಿ ಸರ್ಕಾರ ಸಹಾಯಧನದಲ್ಲಿ ನೀಡುವ ಹೆಸರು ಬೀಜವನ್ನು ತಾಲೂಕು ಕೃಷಿ ಇಲಾಖೆ ಹೆಚ್ಚುವರಿ ಆಗಿ ತಂದು ರೈತರಿಗೆ ವಿತರಣೆ ಮಾಡಲು ಮುಂದಾಗಬೇಕು ಎಂದು ಒತ್ತಾಯಿಸಿದರು. ಈ ಸಂದರ್ಭದಲ್ಲಿ ಪರಶುರಾಮ ಜಂಬಗಿ, ಸುಭಾಸ ಗಿರಿಯಣ್ಣವರ, ಹನಮಂತ ಸರನಾಯ್ಕರ, ಶಂಕ್ರಪ್ಪ ಜಾಧವ, ಮಲ್ಲೇಶಪ್ಪ ಅಣ್ಣಿಗೇರಿ, ಸೋಮಲಿಂಗಪ್ಪ ಆಯಿಟ್ಟಿ, ವಾಸು ಚವ್ಹಾಣ, ಯಲ್ಲಪ್ಪ ಚಲವಣ್ಣವರ, ಅನಸವ್ವ ಶಿಂದೆ, ನಾಗರತ್ನ ಸವಳಭಾವಿ, ಶಿವಪ್ಪ ಸಾತಣ್ಣವರ, ವಿಜಯಕುಮಾರ ಹೂಗಾರ ಸೇರಿದಂತೆ ಮುಂತಾದವರು ಇದ್ದರು.