ಸಾರಾಂಶ
ಸಂಚಾರಿ ದಳದ ಡಿಸಿಎಫ್ ಡಾ. ಚಂದ್ರಶೇಖರ ಪಾಟೀಲ್, ಪತ್ರಕರ್ತ ಎಂ.ಟಿ. ಯೋಗೇಶ್ ಕುಮಾರ್
ಕನ್ನಡಪ್ರಭ ವಾರ್ತೆ ಮೈಸೂರು
ಮೈಸೂರು ಅರಮನೆ ಆವರಣದಲ್ಲಿ ಬೀಡು ಬಿಟ್ಟಿರುವ ದಸರಾ ಆನೆಗಳ ಮಾವುತರು ಮತ್ತು ಕಾವಾಡಿಗಳಿಗೆ ರೋಟರಿ ಸೆಂಟ್ರಲ್ ಸಂಸ್ಥೆಯಿಂದ ಪ್ಲಾಸ್ಕ್ ವಿತರಿಸಲಾಯಿತು.ದಸರಾ 14 ಆನೆಗಳ ಮಾವುತ, ಕಾವಾಡಿಗಳು, ವಿಶೇಷ ಮಾವುತರು ಹಾಗೂ ಸಹಾಯಕರು ಸೇರಿದಂತೆ 65 ಮಂದಿಗೆ ಗುಣಮಟ್ಟದ ಪ್ಲಾಸ್ಕ್ ಅನ್ನು ಮೈಸೂರು ವನ್ಯಜೀವಿ ವಿಭಾಗದ ಡಿಸಿಎಫ್ ಡಾ.ಐ.ಬಿ. ಪ್ರಭುಗೌಡ ವಿತರಿಸಿದರು.
ಸಂಚಾರಿ ದಳದ ಡಿಸಿಎಫ್ ಡಾ. ಚಂದ್ರಶೇಖರ ಪಾಟೀಲ್, ಪತ್ರಕರ್ತ ಎಂ.ಟಿ. ಯೋಗೇಶ್ ಕುಮಾರ್, ರೋಟರಿ ಸೆಂಟ್ರಲ್ ಮೈಸೂರು ಅಧ್ಯಕ್ಷ ಸುಬ್ರಹ್ಮಣ್ಯ ಆರ್. ತಂತ್ರಿ, ಕಾರ್ಯದರ್ಶಿ ಸಮರ್ಥ್ ವೈದ್ಯ, ಪದಾಧಿಕಾರಿಗಳಾದ ಎಸ್.ಆರ್. ಸ್ವಾಮಿ, ವಿವೇಕ್ ಅತಾವರ್, ಸೌಜನ್ಯ ಅತಾವರ್, ಪ್ರಿಯಾ ತಂತ್ರಿ, ಅಂಜಲಿ ಸಮರ್ಥ್, ಪ್ರತಿಭಾ, ವಿಜೇಂದ್ರ ಶ್ರೀನಿವಾಸನ್, ಪ್ರದ್ಯುಮ್ನ ಬಿ. ಭಟ್, ವಿಶ್ರುತ ವಿ. ಭಟ್, ಅರ್ಣ ಸಮರ್ಥ್ ಮೊದಲಾದವರು ಇದ್ದರು.