ಮಂದಿರ ಉದ್ಘಾಟನೆಯಂದು ರಾಮನ ಜಪ ಮಾಡಿ

| Published : Jan 16 2024, 01:50 AM IST

ಸಾರಾಂಶ

ಶ್ರೀರಾಮ ಎಲ್ಲ ಹಿಂದುಗಳಿಂದ ಆರಾಧನೆಗೆ ಒಳಪಡುವ ದೇವರು. ಅವರು ಜನಿಸಿದ ಅಯ್ಯೋಧ್ಯೆಯಲ್ಲಿ ನೂರಾರು ವರ್ಷಗಳಿಂದ ಮಂದಿರ ನಿರ್ಮಾಣವಾಗಬೇಕೆಂಬ ಕನಸ್ಸು ದೇಶದ ಪ್ರಧಾನಿ ನರೇಂದ್ರ ಮೋದಿ ಅವರ ನೇತೃತ್ವದಲ್ಲಿ ನೆರವೇರುತ್ತಿರುವುದು ಸಂತಸದ ಸಂಗತಿ ಎಂದರು.

ಕನ್ನಡಪ್ರಭ ವಾರ್ತೆ ತಾಳಿಕೋಟೆ

ಹಿಂದು ಸಮಾಜದ ಆರಾಧ್ಯ ದೈವ ಶ್ರೀರಾಮನ ಮಂದಿರ ಉದ್ಘಾಟನೆಯ ದಿನದಂದು ಎಲ್ಲರೂ ಶ್ರೀ ಪ್ರಭು ಶ್ರೀ ರಾಮನ ಜಪ ಮಾಡಬೇಕು ಎಂದು ಆರ್ಯವೈಶ್ಯ ಸಮಾಜದ ಅಧ್ಯಕ್ಷ ಡಾ.ಎಲ್.ಎನ್.ಶೆಟ್ಟಿ ಹೇಳಿದರು.

ಜ.೨೨ ರಂದು ಅಯೋಧ್ಯ ನಗರದಲ್ಲಿ ನೂತನ ಮಂದಿರದಲ್ಲಿ ಶ್ರೀರಾಮ ಲಲ್ಲಾ ಮೂರ್ತಿ ಪ್ರತಿಷ್ಠಾಪನೆ ಅಂಗವಾಗಿ ಶ್ರೀರಾಮ ಮಂತ್ರಾಕ್ಷತೆಯನ್ನು ಪಟ್ಟಣದ ಆರ್ಯವೈಶ್ಯ ಸಮಾಜದವರ ಮನೆಗೆ ನೀಡುವ ಕಾರ್ಯಕ್ರಮಕ್ಕೂ ಮುಂಚೆ ಶ್ರೀ ನಗರೇಶ್ವರ ದೇವಸ್ಥಾನದಲ್ಲಿ ಮಂತ್ರಾಕ್ಷತೆಗೆ ಪೂಜಾ ಕಾರ್ಯಕ್ರಮದ ನಡೆಯಿತು. ಈ ವೇಳೆ ಮಾತನಾಡಿದ ಅವರು, ಶ್ರೀರಾಮ ಎಲ್ಲ ಹಿಂದುಗಳಿಂದ ಆರಾಧನೆಗೆ ಒಳಪಡುವ ದೇವರು. ಅವರು ಜನಿಸಿದ ಅಯ್ಯೋಧ್ಯೆಯಲ್ಲಿ ನೂರಾರು ವರ್ಷಗಳಿಂದ ಮಂದಿರ ನಿರ್ಮಾಣವಾಗಬೇಕೆಂಬ ಕನಸ್ಸು ದೇಶದ ಪ್ರಧಾನಿ ನರೇಂದ್ರ ಮೋದಿ ಅವರ ನೇತೃತ್ವದಲ್ಲಿ ನೆರವೇರುತ್ತಿರುವುದು ಸಂತಸದ ಸಂಗತಿ ಎಂದರು.p

ಪ್ರಭು ಶ್ರೀರಾಮನ ಮೂರ್ತಿ ಪ್ರತಿಷ್ಠಾಪನೆಯಂದು ಎಲ್ಲರೂ ಮನೆಗಳಲ್ಲಿ ಮತ್ತು ದೇವಸ್ಥಾನಗಳಲ್ಲಿ ದೀಪಾವಳಿ ಹಬ್ಬದಂತೆ ಸಂಭ್ರಮಾಚರಣೆ ಮಾಡಬೇಕು. ಅಂದು ಶ್ರೀರಾಮ, ಜಯರಾಮ ಎಂಬ ಜಪಗಳು, ಪಾರಾಯಣಗಳು, ನಡೆಯುವಂತೆ ನೋಡಿಕೊಳ್ಳುವುದು ಮತ್ತು ಎಲ್‌ಇಡಿ ಅಥವಾ ಟಿವಿಯ ಮೂಲಕ ಎಲ್ಲ ಜನರಿಗೆ ಶ್ರೀರಾಮ ಮಂದಿರದಲ್ಲಿ ಮೂರ್ತಿ ಪ್ರತಿಷ್ಠಾಪನೆ ನೇರ ಪ್ರಸಾರದ ವ್ಯವಸ್ಥೆ ಮಾಡುವುದು ಪ್ರತಿ ಹಿಂದು ಸಮಾಜದವರ ಕರ್ತವ್ಯ ಎಂದರು.

ಮಂದಿರದ ಉದ್ಘಾಟನೆಯಲ್ಲಿ ವಿದೇಶದಲ್ಲಿರುವ ಹಿಂದುಗಳು ಸಹ ವಿವಿಧ ಪೂಜಾ ಕಾರ್ಯಕ್ರಮಗಳನ್ನು ಹಮ್ಮಿಕೊಂಡಿದ್ದಾರೆ. ಮನೆ ಮನೆಗೆ ವಿತರಿಸುತ್ತಿರುವ ಮಂತ್ರಾಕ್ಷತೆ ದೇವರ ಜಗಲಿಯ ಮೇಲಿಟ್ಟು ನಿತ್ಯ ಪೂಜಿಸಬೇಕು. ಅವಕಾಶ ಸಿಕ್ಕಾಗ ಶ್ರೀ ರಾಮನ ದರ್ಶನಕ್ಕೆ ತೆರಳಿ ಶ್ರೀರಾಮನ ಕೃಪೆಗೆ ಪಾತ್ರರಾಗೋಣವೆಂದರು.ಕಾರ್ಯಕ್ರಮಕ್ಕೂ ಮುಂಚೆ ಪಟ್ಟಣದ ಶ್ರೀ ನಗರೇಶ್ವರ ದೇವಸ್ಥಾನದಲ್ಲಿ ಮಂತ್ರಾಕ್ಷತೆಯೊಂದಿಗೆ ವಿಶೇಷ ಪೂಜೆ ಸಲ್ಲಿಸಿ ಆರ್ಯವೈಶ್ಯ ಸಮಾಜ ಬಾಂಧವರ ಪ್ರತಿ ಮನೆಮನೆಗೆ ತೆರಳಿ ಮಂತ್ರಾಕ್ಷತೆಗೆ ವಿತರಿಸುವ ಕಾರ್ಯಕ್ಕೆ ಚಾಲನೆ ನೀಡಲಾಯಿತು.

ಈ ವೇಳೆ ಸಮಾಜದ ಮುಖಂಡ ಕೃಷ್ಣಯ್ಯ ಶೆಟ್ಟಿ, ದತ್ತಾತ್ರೇಯ ಹೆಬಸೂರ, ಕೃಷ್ಣಾ ಮಾನ್ವಿ, ಶ್ರೀಕಾಂತ ಶೆಟ್ಟಿ, ರವಿ ತಾಳಪಲ್ಲೆ, ಅರುಣ ಕನಕಗಿರಿ, ಸತ್ಯನಾರಾಯಣ ತಾಳಪಲ್ಲೆ, ಭೀಮಣ್ಣ ಅಗಡಿ, ಭಕ್ತಪ್ರಲ್ಹಾದ ಮಾನ್ವಿ, ಸಂದೀಪ ಶೆಟ್ಟಿ, ಪುರಸಭಾ ಸದಸ್ಯ ವಾಸುದೇವ ಹೆಬಸೂರ, ಸುಭದ್ರಾ ಹೆಬಸೂರ, ರಮಾ ತಾಳಪಲ್ಲೆ, ಸಾವಿತ್ರಿ ಹೆಬಸೂರ, ಸರೋಜಾ ತಾಳಪಲ್ಲೆ, ಕವಿತಾ ಜನಾದ್ರಿ, ಜ್ಯೋತಿ ಶೆಟ್ಟಿ, ಪ್ರತಿಭಾ ತಾಳಪಲ್ಲೆ, ಅರ್ಚನಾ ಮಾನ್ವಿ, ರಾಜಲಕ್ಷ್ಮೀ ಮಾನ್ವಿ, ರಾಧಾ ಕನಕಗಿರಿ, ಮೊದಲಾದವರು ಇದ್ದರು.