ಹರಿಹರ ತಾಲೂಕಿನ 4 ಸಾವಿರ ವಿದ್ಯಾರ್ಥಿಗಳಿಗೆ ಬ್ಯಾಗ್‌ಗಳ ವಿತರಣೆ

| Published : Jan 30 2024, 02:03 AM IST

ಹರಿಹರ ತಾಲೂಕಿನ 4 ಸಾವಿರ ವಿದ್ಯಾರ್ಥಿಗಳಿಗೆ ಬ್ಯಾಗ್‌ಗಳ ವಿತರಣೆ
Share this Article
  • FB
  • TW
  • Linkdin
  • Email

ಸಾರಾಂಶ

ಸಾಮಾಜಿಕ ಹೊಣೆಗಾರಿಕೆ ನಿಧಿಯಡಿ ಶಾಲಾ ಮಕ್ಕಳ ಕಲಿಕೆಯ ಭಾಗವಾದ ಡಿಜಿಟಲ್ ಜಗತ್ತಿಗೆ ಅಗತ್ಯವಿರುವ ಕಂಪ್ಯೂಟರ್, ಬ್ಯಾಗ್, ಪುಸ್ತಕಗಳು, ನಲಿಕಲಿ ಪೀಠೋಪಕರಣಗಳ ನೀಡುತ್ತಿರುವ ಕಾರ್ಪೋರೇಟ್ ಸಂಸ್ಥೆಗಳ ಕಾರ್ಯ ಶ್ಲಾಘನೀಯ.

ಕನ್ನಡಪ್ರಭ ವಾರ್ತೆ ಮಲೇಬೆನ್ನೂರು

ಹರಿಹರ ತಾಲೂಕಿನ ನಾಲ್ಕು ಸಾವಿರ ಬಡ ಮಕ್ಕಳಿಗೆ ವಿದ್ಯಾಭ್ಯಾಸಕ್ಕೆ ನೆರವಾಗಲು ಬ್ಯಾಗ್‌ಗಳ ವಿತರಿಸಲಾಗಿದೆ ಎಂದು ಆಕ್ವಿನ್ ಫೈನಾನ್ಸಿಯಲ್ ಕಾರ್ಪೋರೇಟ್ ಸಂಸ್ಥೆಯ ಸದಸ್ಯ ಬಸಯ್ಯ ಹಿರೇಮಠ್ ಹೇಳಿದರು.

ಗುಡ್ಡದ ಬೇವಿನಹಳ್ಳಿ, ಮಲ್ಲನಾಯ್ಕನಹಳ್ಳಿ, ಸಂಕ್ಲೀಪುರ, ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ಮತ್ತು ನಂದಿತಾವರೆ ಬಸವೇಶ್ವರ ಪ್ರೌಢಶಾಲೆಗಳ ವಿದ್ಯಾರ್ಥಿಗಳಿಗೆ ಬೆಂಗಳೂರಿನ ಆಕ್ವಿನ್ ಫೈನಾನ್ಸಿಯಲ್ ಸಲ್ಯೂಷನ್ಸ್ ನಿಂದ ಉಚಿತ ಬ್ಯಾಗ್‌ಗಳ ವಿತರಿಸಿ ಮಾತನಾಡಿ ಸರ್ಕಾರಿ ಶಾಲಾ ಮಕ್ಕಳ ಕಷ್ಟ ಅರಿತು ಬಡ ಮಕ್ಕಳಿಗೆ ಅನುಕೂಲವಾಗಲೆಂದು ಉತ್ತಮ ಗುಣಮಟ್ಟದ ಬ್ಯಾಗ್‌ಗಳ ನೀಡುತ್ತಿದ್ದೇವೆ ಎಂದರು.

ಕ್ಷೇತ್ರ ಶಿಕ್ಷಣಾಧಿಕಾರಿ ಹನುಮಂತಪ್ಪ ಮಾತನಾಡಿ ಸಾಮಾಜಿಕ ಹೊಣೆಗಾರಿಕೆ ನಿಧಿಯಡಿ ಶಾಲಾ ಮಕ್ಕಳ ಕಲಿಕೆಯ ಭಾಗವಾದ ಡಿಜಿಟಲ್ ಜಗತ್ತಿಗೆ ಅಗತ್ಯವಿರುವ ಕಂಪ್ಯೂಟರ್, ಬ್ಯಾಗ್, ಪುಸ್ತಕಗಳು, ನಲಿಕಲಿ ಪೀಠೋಪಕರಣಗಳ ನೀಡುತ್ತಿರುವ ಕಾರ್ಪೋರೇಟ್ ಸಂಸ್ಥೆಗಳ ಕಾರ್ಯ ಶ್ಲಾಘನೀಯ ಎಂದರು.

ತಾಲೂಕು ಶಿಕ್ಷಕರ ಸಂಘದ ಪ್ರಧಾನ ಕಾರ್ಯದರ್ಶಿ ಶರಣ್‌ಕುಮಾರ್ ಹೆಗಡೆ ಮಾತನಾಡಿ ಕೋವಿಡ್ ವೇಳೆಯೂ ಈ ಕಾರ್ಪೋರೇಟ್ ಸಂಸ್ಥೆ ರೋಗಿಗಳಿಗೆ ಕಿಟ್, ಉಪಹಾರ, ಮಾತ್ರೆ, ಮಾಸ್ಕ್ ವಿತರಿಸಿ ರೋಗಿಗಳು ಗುಣಮುಖರಾಗಲು ಶ್ರಮಿಸಿ ಮಾದರಿಯಾಗಿದೆ ಎಂದರು.

ಗ್ರಾಪಂ ಅಧ್ಯಕ್ಷೆ ರೂಪಾ, ಸದಸ್ಯ ಹೋಬಳಿ ಆನಂದ್‌ಗೌಡ, ದೇವರಾಜ್ ,ವಿರೂಪಾಕ್ಷಪ್ಪ, ಸಿಆರ್‌ಪಿ ನಂಜುಂಡಪ್ಪ, ಎಸ್‌ಡಿಎಂಸಿ ಅಧ್ಯಕ್ಷ ಲಿಂಗನಗೌಡ, ರೇವಣಸಿದ್ದಪ್ಪ, ಉಪಾಧ್ಯಕ್ಷೆ ನಾಗಮ್ಮ, ಕಾಂತಮ್ಮ, ಶೇಖರಪ್ಪ, ಕೆ.ಜಿ ಕುಬೇರಗೌಡ, ಮುಖ್ಯ ಶಿಕ್ಷಕರಾದ ಡಿ.ಕೆ ಕರಿಬಸಪ್ಪ, ದೊಡ್ಡರಾಜಪ್ಪ, ಬಿ.ಪಿ. ಉಮೇಶ್, ವಿವಿಧ ಶಾಲೆಗಳ ಶಿಕ್ಷಕರಾದ ರಾಘವೇಂದ್ರ, ಮಂಜಪ್ಪ ಬಿದರಿ, ರಾಮನಗೌಡ, ಪೀರುನಾಯ್ಕ್, ಚನ್ನವೀರಯ್ಯ, ವಿನೋದಮ್ಮ, ಶಶಿಕುಮಾರ್, ಮುಖಂಡ ಮಹೇಶ್ವರಯ್ಯ ಗ್ರಾಮಸ್ಥರಿದ್ದರು. ವಿದ್ಯಾರ್ಥಿಗಳಾದ ಕೈಲಾಸ್, ಸಿಂಚನಾ, ಶಮಂತ್ ಅನಿಸಿಕೆ ಹಂಚಿಕೊಂಡರು.