ಕರ್ಣಾಟಕ ಬ್ಯಾಂಕ್‌ ನಿಂದ 20 ಸಾವಿರ ಬಟ್ಟೆ ಬ್ಯಾಗ್‌ ವಿತರಣೆ

| Published : Oct 02 2024, 01:12 AM IST

ಕರ್ಣಾಟಕ ಬ್ಯಾಂಕ್‌ ನಿಂದ 20 ಸಾವಿರ ಬಟ್ಟೆ ಬ್ಯಾಗ್‌ ವಿತರಣೆ
Share this Article
  • FB
  • TW
  • Linkdin
  • Email

ಸಾರಾಂಶ

ಮೈಸೂರಿನ ನಾಗರಿಕರಿಗೆ ಸುಮಾರು 20 ಸಾವಿರ ಬಟ್ಟೆ ಬ್ಯಾಗನ್ನು ಬ್ಯಾಂಕಿನ ಸಿಎಸ್‌.ಆರ್‌. ಅಡಿಯಲ್ಲಿ ನಗರಪಾಲಿಕೆಯ ಸಹಯೋಗದೊಂದಿಗೆ ತಲುಪಿಸುವ ಕಾರ್ಯಕ್ರಮ

ಕನ್ನಡಪ್ರಭ ವಾರ್ತೆ ಮೈಸೂರು

ನಗರವನ್ನು ಸ್ವಚ್ಛವಾಗಿಡಿಸುವ ಹಾಗೂ ಪ್ಲಾಸ್ಟಿಕ್ ಮುಕ್ತ ನಗರವನ್ನಾಗಿಸುವ ನಿಟ್ಟಿನಲ್ಲಿ ಕರ್ಣಾಟಕ ಬ್ಯಾಂಕಿನ ಪ್ರಾಯೋಜಕತ್ವದಲ್ಲಿ ನಗರಪಾಲಿಕೆ ಸಹಯೋಗದೊಂದಿಗೆ 20 ಸಾವಿರ ಬಟ್ಟೆಯ ಬ್ಯಾಗ್‌ ನ್ನು ಸಾರ್ವಜನಿಕರಿಗೆ ಮಂಗಳವಾರ ಬೆಳಗ್ಗೆ ಶ್ರೀರಾಂಪುರ ಮಧುವನ ಉದ್ಯಾನವನದಲ್ಲಿ ವಿತರಿಸಲಾಯಿತು.

ಸಾಂಕೇತಿಕವಾಗಿ ಬಟ್ಟೆ ಬ್ಯಾಗಿನ ವಿತರಣೆಗೆ ಚಾಲನೆ ನೀಡಿದ ಕರ್ಣಾಟಕ ಬ್ಯಾಂಕಿನ ಮೈಸೂರು ವಲಯ ಮುಖ್ಯಸ್ಥ ಡಾ.ಟಿ.ಆರ್. ಅರುಣ್ ಮಾತನಾಡಿ, ನಗರವನ್ನು ಪ್ಲಾಸ್ಟಿಕ್ ಮುಕ್ತವನ್ನಾಗಿಸಿ ಸ್ವಚ್ಛ ನಗರವಾಗಿಡುವ ನಿಟ್ಟಿನಲ್ಲಿ ಮೈಸೂರಿನ ನಾಗರಿಕರಿಗೆ ಸುಮಾರು 20 ಸಾವಿರ ಬಟ್ಟೆ ಬ್ಯಾಗನ್ನು ಬ್ಯಾಂಕಿನ ಸಿಎಸ್‌.ಆರ್‌. ಅಡಿಯಲ್ಲಿ ನಗರಪಾಲಿಕೆಯ ಸಹಯೋಗದೊಂದಿಗೆ ತಲುಪಿಸುವ ಕಾರ್ಯಕ್ರಮ ಇದಾಗಿದ್ದು, ನಗರಪಾಲಿಕೆಯವರ ಸಹಕಾರದೊಂದಿಗೆ ಬ್ಯಾಗುಗಳನ್ನು ಮನೆಮನೆಗೆ ತಲುಪಿಸಲಾಗುವುದು ಎಂದು ತಿಳಿಸಿದರು.

ಮೈಸೂರು ನಗರಪಾಲಿಕೆ ಆಯುಕ್ತ ಅಸದ್ ಉರ್ ರೆಹಮಾನ್ ಶರೀಫ್ ಮಾತನಾಡಿ, ಸಾರ್ವಜನಿಕರು ಪ್ಲಾಸ್ಟಿಕ್ ಬಳಕೆ ಮಾಡದೇ ನಗರವನ್ನು ಸ್ವಚ್ಛವಾಗಿಡಿಸುವಲ್ಲಿ ನಗರಪಾಲಿಕೆಯೊಂದಿಗೆ ಕೈ ಜೋಡಿಸಬೇಕೆಂದು ಕರೆನೀಡಿದರು.

ನಗರಪಾಲಿಕೆ ಮತ್ತು ಬ್ಯಾಂಕಿನ ಅಧಿಕಾರಿಗಳು, ಲೀಡ್ ಬ್ಯಾಂಕಿನ ವ್ಯವಸ್ಥಾಪಕ ನಾಗೇಶ್, ಕರ್ಣಾಟಕ ಬ್ಯಾಂಕಿನ ಸಹಾಯಕ ವಲಯ ಪ್ರಬಂಧಕ ಕೆ.ಆರ್. ಅಜಿತ್, ಶ್ರೀರಾಂಪುರದ ನಿವಾಸಿಗಳು ಇದ್ದರು.