ಸಾರಾಂಶ
ಕನ್ನಡಪ್ರಭ ವಾರ್ತೆ ಕೆ.ಆರ್.ಪೇಟೆ
ಮೈಸೂರಿನ ಆರ್ಯಾಂಬ ಫೌಂಡೇಷನ್ ವತಿಯಿಂದ ಪಟ್ಟಣದ ಸುಭಾಷ್ ನಗರ ಬಡಾವಣೆ ರಹಮತ್ ಉನ್ನೀಸಾ ಕುಟುಂಬಕ್ಕೆ ಪರಿಹಾರದ ಚೆಕ್ ವಿತರಿಸಲಾಯಿತು.ಆರ್ಯಾಂಬ ಫೌಂಡೇಷನ್ ಸ್ವ-ಸಹಾಯ ಸಂಘದ ಸದಸ್ಯೆ ರೆಹಮತ್ ಉನ್ನೀಸಾ ನಿವಾಸಕ್ಕೆ ಆಗಮಿಸಿದ ಮೈಸೂರಿನ ಆರ್ಯಾಂಬ ಫೌಂಡೇಷನ್ ಅಧಿಕಾರಿಗಳು ಇತ್ತೀಚೆಗೆ ಹೃದಯಾಘಾತದಿಂದ ನಿಧನರಾಗಿದ್ದ ರೆಹಮತ್ ಉನ್ನೀಸಾ ಅವರ ಪತಿ ಮಹಮದ್ ಹುಸೇನ್ ಅವರಿಗೆ ಸಂತಾಪ ಸೂಚಿಸಿ ಕುಟುಂಬದ ನೆರವಿಗಾಗಿ ಆರ್ಥಿಕ ಸಹಾಯದ ಚೆಕ್ ನೀಡಿದರು.
ಈ ವೇಳೆ ಫೌಂಡೇಷನ್ ಮುಖ್ಯ ವ್ಯವಸ್ಥಾಪಕ ಎಚ್.ಎಸ್.ಮಧುಕುಮಾರ್ ಮಾತನಾಡಿ, ಸ್ವ-ಸಹಾಯ ಸೇವಾ ಸಂಸ್ಥೆಯಾಗಿ ಮೈಸೂರು ಮತ್ತು ಮಂಡ್ಯ ಜಿಲ್ಲೆ ಸೇರಿದಂತೆ ರಾಜ್ಯದ ಅನೇಕ ಕಡೆ ಸ್ವಾವಲಂಭಿ ಕುಟುಂಬದ ನಿರ್ಮಾಣದ ಗುರಿಯೊಂದಿಗೆ ಕೆಲಸ ಮಾಡುತ್ತಿದೆ ಎಂದರು.ಸಾಲ ಸೌಲಭ್ಯ ನೀಡುವ ಜೊತೆಗೆ ಸಂಸ್ಥೆ ಎಲ್ಲಾ ಸದಸ್ಯರ ಕುಟುಂಬಗಳಿಗೂ ವಿಮೆ ಸೌಲಭ್ಯ ಇದೆ. ರೆಹಮತ್ ಉನ್ನೀಸಾ ಅವರು ಇತ್ತೀಚೆಗೆ ಸಂಸ್ಥೆ ಸದಸ್ಯರಾಗಿದ್ದು ಅವರ ಕುಟುಂಬಕ್ಕೆ ಇನ್ನೂ ವಿಮೆ ಸೌಲಭ್ಯ ದೊರಕಿರಲ್ಲಿಲ್ಲ. ಇವರ ಪತಿ ಮಹಮದ್ ಹುಸೇನ್ ಆಟೋ ಚಾಲಕರಾಗಿದ್ದು, ಹೃದಯಾಘಾತದಿಂದ ಅಕಾಲಿಕ ಮರಣ ಹೊಂದಿದ್ದಾರೆ. ಆದ ಕಾರಣ ಸಂಸ್ಥೆಯಿಂದಲೇ ಕುಟುಂಬಕ್ಕೆ ಆರ್ಥಿಕ ನೆರವು ನೀಡಲು ನಿರ್ಧರಿಸಿ ಚೆಕ್ ನೀಡಲಾಗಿದೆ ಎಂದರು.
ಈ ವೇಳೆ ಆರ್ಯಾಂಬ ಫೌಂಡೇಷನ್ ಕೆ.ಆರ್.ಪೇಟೆ ಘಟಕದ ಅಭಿವೃದ್ಧಿ ಅಧಿಕಾರಿ ಜ್ಯೋತಿ ರವಿಕುಮಾರ್, ನಾಗಮಂಗಲ ವಿಭಾಗದ ನಿವೇಧಿತಾ, ಮಂಡ್ಯ ವಿಭಾಗದ ಮಮತಾ, ಶಾಖಾಧಿಕಾರಿ ಪ್ರಶಾಂತ್, ಕಾರ್ಯ ನಿರ್ವಹಣಾಧಿಕಾರಿಗಳಾದ ಸವಿತಾ, ರಂಜಿತ್, ಮತ್ತಿತರರಿದ್ದರು.ಫೆ.7ರಂದು ಉದ್ಯೋಗ ಮೇಳ
ಮಂಡ್ಯ:ಜಿಲ್ಲಾಡಳಿತ, ಕೌಶಲ್ಯಾಭಿವೃದ್ಧಿ, ಉದ್ಯಮಶೀಲತೆ ಮತ್ತು ಜೀವನೋಪಾಯ ಇಲಾಖೆ ಹಾಗೂ ಜಿಲ್ಲಾ ಉದ್ಯೋಗ ವಿನಿಮಯ ಕಚೇರಿ, ಮಂಡ್ಯ ಸರ್ಕಾರಿ ವಿಶ್ವವಿದ್ಯಾನಿಲಯ ಆಶ್ರಯದಲ್ಲಿ ರೋಜ್ಗಾರ್, ಉದ್ಯೋಗ ಮೇಳವನ್ನು ಆಯೋಜಿಸಲಾಗಿದೆ. ವಿವಿಧ ಸಂಸ್ಥೆಗಳಲ್ಲಿ ಖಾಲಿ ಇರುವ ಹುದ್ದೆಗಳಿಗೆ ಎಸ್ಸೆಸ್ಸೆಲ್ಸಿ, ಪಿಯುಸಿ, ಐಟಿಐ, ಡಿಪ್ಲೋಮಾ, ಯಾವುದೇ ಪದವಿ, ಮತ್ತು ಬಿಎಸ್ಸಿ(ನರ್ಸಿಂಗ್) ಉತ್ತೀರ್ಣರಾದ 18 ರಿಂದ 45 ವರ್ಷದೊಳಗಿನ ಅಭ್ಯರ್ಥಿಗಳು ಫೆಬ್ರವರಿ 7 ಬೆಳಗ್ಗೆ 9ರಂದು ತಮ್ಮ ಎಲ್ಲಾ ಸ್ವ-ವಿವರ ಮತ್ತು ಆಧಾರ್ ಕಾರ್ಡ್ ನಕಲು ಪ್ರತಿಗಳೊಂದಿಗೆ ಭಾಗವಹಿಸಬಹುದು. ಹೆಚ್ಚಿನ ಮಾಹಿತಿಗಾಗಿ ದೂ-08232-295010/ಮೊ-8073264498/ಮೊ-9964181442 ಅನ್ನು ಸಂಪರ್ಕಿಸಬಹುದು ಹಾಗೂ https://bit.ly/4abg0I3 ಲಿಂಕ್ ಬಿಳಸಿ ನೋಂದಾಯಿಸಿಕೊಳ್ಳಬಹುದು ಎಂದು ಜಿಲ್ಲಾ ಕೌಶಲ್ಯಾಭಿವೃದ್ಧಿ ಅಧಿಕಾರಿಗಳು ತಿಳಿಸಿದ್ದಾರೆ.