ಚುನಾವಣೆ ಕರ್ತವ್ಯದ ವೇಳೆ ಮೃತನ ಕುಟುಂಬಕ್ಕೆ ಪರಿಹಾರ ವಿತರಣೆ

| Published : Jun 21 2024, 01:00 AM IST

ಚುನಾವಣೆ ಕರ್ತವ್ಯದ ವೇಳೆ ಮೃತನ ಕುಟುಂಬಕ್ಕೆ ಪರಿಹಾರ ವಿತರಣೆ
Share this Article
  • FB
  • TW
  • Linkdin
  • Email

ಸಾರಾಂಶ

ಲೋಕಸಭಾ ಚುನಾವಣೆ ಕರ್ತವ್ಯದಲ್ಲಿದ್ದಾಗ ಮರಣ ಹೊಂದಿದ ಮುಧೋಳ ತಾಲೂಕಿನ ಬಿದರಿ ಜನತಾ ಪ್ಲಾಟ್ ಎಲ್.ಪಿ.ಎಸ್ ನ ಸಹ ಶಿಕ್ಷಕ ಗೋವಿಂದಪ್ಪ ಸಿದ್ದಾಪೂರ ಕುಟುಂಬಕ್ಕೆ ₹15 ಲಕ್ಷ ಪರಿಹಾರಧನ ವಿತರಿಸಲಾಯಿತು.

ಕನ್ನಡಪ್ರಭ ವಾರ್ತೆ ಬಾಗಲಕೋಟೆ

ಲೋಕಸಭೆ ಚುನಾವಣೆ-2024ರ ಕರ್ತವ್ಯದಲ್ಲಿದ್ದಾಗ ಮರಣ ಹೊಂದಿದ ಮುಧೋಳ ತಾಲೂಕಿನ ಬಿದರಿ ಜನತಾ ಪ್ಲಾಟ್ ಎಲ್.ಪಿ.ಎಸ್‌ ಸಹ ಶಿಕ್ಷಕ ಗೋವಿಂದಪ್ಪ ಸಿದ್ದಾಪೂರ ಕುಟುಂಬಕ್ಕೆ ₹ 15 ಲಕ್ಷ ಪರಿಹಾರಧನದ ಆದೇಶ ಪ್ರತಿಯನ್ನು ಜಿಲ್ಲಾಧಿಕಾರಿ ಜಾನಕಿ ಕೆ.ಎಂ ವಿತರಿಸಿದರು.

ಮೃತ ವ್ಯಕ್ತಿ ಗೋವಿಂದ ಸಿದ್ದಾಪೂರ ಅವರು ಲೋಕಸಭೆ ಚುನಾವಣೆ ನಿಮಿತ್ತ ಜಮಖಂಡಿ ವಿಧಾನಸಭಾ ಕ್ಷೇತ್ರಕ್ಕೆ ಮತಗಟ್ಟೆ ಸಂಖ್ಯೆ.190ಕ್ಕೆ ಮತಗಟ್ಟೆ ಅಧಿಕಾರಿಯಾಗಿ ನೇಮಿಸಲಾಗಿತ್ತು. ಮೇ 6ರಂದು ಮಸ್ಟರಿಂಗ್ ಕರ್ತವ್ಯಕ್ಕೆಂದು ಮುಧೋಳ ಜಮಖಂಡಿ ಮತಕ್ಷೇತ್ರಕ್ಕೆ ತರಳುವ ಸಂದರ್ಭದಲ್ಲಿ ಬಸ್ ನಿಲ್ದಾಣದಲ್ಲಿ ಹೃದಯಾಘಾತದಿಂದ ಮರಣ ಹೊಂದಿದ್ದರು.

ಈ ಬಗ್ಗೆ ಮೃತರ ಕುಟುಂಬಕ್ಕೆ ₹ 15 ಲಕ್ಷ ಪರಿಹಾರ ಮಂಜೂರಿಗೆ ಬೆಂಗಳೂರು ಮುಖ್ಯ ಚುನಾವಣಾಧಿಕಾರಿಗಳಿಗೆ ಪ್ರಸ್ತಾವನೆ ಸಲ್ಲಿಸಲಾಗಿತ್ತು. ಮೃತರ ಕಾನೂನು ಬದ್ಧ ಅವಲಂಬಿತರ ಬ್ಯಾಂಕ್ ಖಾತೆಗೆ ನೇರವಾಗಿ ಪರಿಹಾರ ಜಮೆ ಮಾಡುವಂತೆ ಆದೇಶಿಸಿದ ಹಿನ್ನೆಲೆಯಲ್ಲಿ ಮೃತರ ಪತ್ನಿ ಸುಜಾತಾ ಗೋವಿಂದಪ್ಪ ಸಿದ್ದಾಪೂರ ಬ್ಯಾಂಕ್ ಖಾತೆಗೆ ಮರಣ ಪರಿಹಾರ ಜಮೆ ಮಾಡುವಂತೆ ಆದೇಶಿಸಿದ್ದು, ಆದೇಶದ ಪ್ರತಿಯನ್ನು ಜಿಲ್ಲಾಧಿಕಾರಿಗಳು ವಿತರಿಸಿದರು.