ವೀರಶೈವ ಮಹಾಸಭಾ ಪದಾಧಿಕಾರಿಗಳಿಗೆ ದೃಢೀಕರಣಪತ್ರ ವಿತರಣೆ

| Published : Sep 20 2024, 01:43 AM IST

ವೀರಶೈವ ಮಹಾಸಭಾ ಪದಾಧಿಕಾರಿಗಳಿಗೆ ದೃಢೀಕರಣಪತ್ರ ವಿತರಣೆ
Share this Article
  • FB
  • TW
  • Linkdin
  • Email

ಸಾರಾಂಶ

ಸ್ಥಳೀಯ ರಾಜೇಂದ್ರ ನಗರದ ಅಖಿಲ ಭಾರತ ವೀರಶೈವ ಮಹಾಸಭಾ ಜಿಲ್ಲಾ ಘಟಕದ ಕಚೇರಿ ಆವರಣದಲ್ಲಿ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಮಹಾಸಭಾಕ್ಕೆ ಆಯ್ಕೆಯಾದ ಜಿಲ್ಲಾ, ತಾಲೂಕು ಘಟಕಗಳ ಅಧ್ಯಕ್ಷರು, ಕಾರ್ಯನಿರ್ವಾಹಕ ಸಮಿತಿ ಸದಸ್ಯರಿಗೆ ಚುನಾವಣಾ ದೃಢೀಕರಣ ಪತ್ರ ವಿತರಿಸಲಾಯಿತು.

ಹಾವೇರಿ: ಸ್ಥಳೀಯ ರಾಜೇಂದ್ರ ನಗರದ ಅಖಿಲ ಭಾರತ ವೀರಶೈವ ಮಹಾಸಭಾ ಜಿಲ್ಲಾ ಘಟಕದ ಕಚೇರಿ ಆವರಣದಲ್ಲಿ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಮಹಾಸಭಾಕ್ಕೆ ಆಯ್ಕೆಯಾದ ಜಿಲ್ಲಾ, ತಾಲೂಕು ಘಟಕಗಳ ಅಧ್ಯಕ್ಷರು, ಕಾರ್ಯನಿರ್ವಾಹಕ ಸಮಿತಿ ಸದಸ್ಯರಿಗೆ ಚುನಾವಣಾ ದೃಢೀಕರಣ ಪತ್ರ ವಿತರಿಸಲಾಯಿತು. ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಮಹಾಸಭಾದ ಜಿಲ್ಲಾಧ್ಯಕ್ಷ ಎಂ.ಎಸ್. ಕೋರಿಶೆಟ್ಟರ ಮಾತನಾಡಿ, ಅಖಿಲ ಭಾರತ ವೀರಶೈವ ಮಹಾಸಭಾ ಚುನಾವಣೆಯಲ್ಲಿ ಆಯ್ಕೆಯಾದ ಎಲ್ಲರೂ ಸಮಾಜ ಬಾಂಧವರಲ್ಲಿ ಭೇದ-ಭಾವ ಮಾಡದೆ ಸಮಾನವಾಗಿ ಕರೆದುಕೊಂಡು ಹೋಗುವ ಮನೋಭಾವ ಬೆಳೆಸಿಕೊಳ್ಳಬೇಕು ಎಂದು ಕರೆ ನೀಡಿದರು.ಕಾರ್ಯನಿರ್ವಾಹಕ ಸಮಿತಿ ಸದಸ್ಯ ಮಲ್ಲಿಕಾರ್ಜುನ ಹಾವೇರಿ ಮಾತನಾಡಿ, ಮುಂದಿನ ದಿನಗಳಲ್ಲಿ ಸಮಾಜದ ಸಂಘಟನೆಯಲ್ಲಿ ಸಕ್ರಿಯವಾಗಿರಬೇಕು ಎಂದು ಕರೆ ನೀಡಿದರು. ಇದೇ ಸಂದರ್ಭದಲ್ಲಿ ಜಿಲ್ಲಾ ಉಪ ಚುನಾವಣಾಧಿಕಾರಿ ಪ್ರವೀಣ್ ತುಪ್ಪದ, ತಾಲೂಕು ಘಟಕಗಳ ಸಹಾಯಕ ಚುನಾವಣಾಧಿಕಾರಿ ರುದ್ರಪ್ಪ ಬಶೆಟ್ಟಿಯವರು ಮತ್ತು ಅಶೋಕ ಯತ್ನಳ್ಳಿ ಅವರು ಚುನಾವಣಾ ದೃಢೀಕರಣ ಪತ್ರಗಳನ್ನು ವಿತರಿಸಿದರು.ಅಖಿಲ ಭಾರತ ವೀರಶೈವ ಮಹಾಸಭಾ ರಾಜ್ಯ ಘಟಕದ ಕಾರ್ಯನಿರ್ವಾಹಕ ಸಮಿತಿ ಸದಸ್ಯ ಶಂಭು ಚಕ್ಕಡಿ ಮತ್ತು ಜಿಲ್ಲಾ ಘಟಕದ ಅಧ್ಯಕ್ಷ ಎಂ.ಎಸ್. ಕೋರಿಶೆಟ್ಟರ ಅವರನ್ನು ಸನ್ಮಾನಿಸಲಾಯಿತು. ಜಿಲ್ಲಾ ಕಾರ್ಯನಿರ್ವಾಹಕ ಸಮಿತಿ ಸದಸ್ಯರಾದ ಅಜ್ಜನಗೌಡ ಗೌಡಪ್ಪನವರ, ಶಂಕರ ಬಿಸಲಳ್ಳಿ, ಶಂಕರೇಗೌಡ ಪಾಟೀಲ, ಪ್ರಕಾಶ ಬನ್ನಿಹಟ್ಟಿ, ಸಂದೀಪ ಚಿನ್ನಿಕಟ್ಟಿ ಮಲ್ಲಿಕಾರ್ಜುನ ಹಾವೇರಿ, ದಾಕ್ಷಾಯಿಣಿ ಗಾಣಿಗೇರ, ಅಮೃತಮ್ಮ ಶೀಲವಂತ, ಅನಸೂಯಾ ಯರವಿನತಲಿ, ಶೋಭಾ ಮಹಾರಾಜಪೇಟ, ಜ್ಯೋತಿ ಬಶೆಟ್ಟಿಯವರ, ತಾಲೂಕು ಘಟಕದ ಕಾರ್ಯನಿರ್ವಾಹಕ ಸಮಿತಿ ಸದಸ್ಯರಾದ ರುದ್ರಗೌಡ ಮಲ್ಲನಗೌಡ, ವೀರಣ್ಣ ಹರನಗೇರಿ, ಶಶಿಧರ ಬಶೆಟ್ಟಿಯವರ, ಕಲವೀರಪ್ಪ ಬೆಟಗೇರಿ, ಶಾಂತಪ್ಪ ಆನಿಶೆಟ್ಟರ, ಶರಣಪ್ಪ ವಿಭೂತಿ, ಪಂಚಾಕ್ಷರಯ್ಯ ಮಳಮಠ, ಕರಿಬಸಪ್ಪ ಪಾಟೀಲ, ಕುಮಾರಸ್ವಾಮಿ ಹಿರೇಮಠ, ಶಂಭು ವಡಕನಗೌಡ್ರ, ಮಂಜಪ್ಪ ಹಾವೇರಿ, ಪ್ರಭಪ್ಪ ಮರಗೂರ, ವಿ.ಎ. ಗೌಡರ, ಶ್ವೇತಾ ತುಪ್ಪದ, ಅಶ್ವಿನಿ ಟೊಂಕದ, ನೀಲಮ್ಮ ಗೌಡಪ್ಪನವರ, ದೀಪಾ ಹಲಗಣ್ಣನವರ, ಚಂದ್ರಕಲಾ ಇಚ್ಚಂಗಿ, ನೀಲಮ್ಮ ನಿಂಬರಗಿ, ಲತಾ ಬರತನೂರಮಠ, ಷಣ್ಮುಖಪ್ಪ ಉಳ್ಳಾಗಡ್ಡಿ, ಉಳೇವಪ್ಪ ಹಲಗಣ್ಣನವರ ವೀರಣ್ಣ ಮಹಾರಾಜ ಪೇಟೆ, ಶಿವಬಸಪ್ಪ ಟೊಂಕದ ಇದ್ದರು. ಪ್ರಭಪ್ಪ ಮರಗೂರ ಸ್ವಾಗತಿಸಿದರು. ವಿ.ಎಂ. ಗೌಡ ಕಾರ್ಯಕ್ರಮ ನಿರೂಪಿಸಿದರು.