ಸಾರಾಂಶ
ಅರಕಲಗೂಡು ತಾಲೂಕಿನ ಒಟ್ಟು 16 ಶಾಲೆಗಳಿಗೆ 1130500/- ರು. ಮೊತ್ತದ 133 ಬೆಂಚ್ ಡೆಸ್ಕ್‌ಗಳನ್ನು ವಿತರಣೆ ಮಾಡಲಾಗುತ್ತಿದ್ದು, 7 ಶಾಲೆಗಳಿಗೆ 56 ಬೆಂಚ್ ಡೆಸ್ಕ್‌ಗಳನ್ನು ವಿತರಣೆ ಮಾಡಲಾಯಿತು ಎಂದು ಯೋಜನಾಧಿಕಾರಿ ಜಿನ್ನಪ್ಪ ತಿಳಿಸಿದರು. ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ಹಾನಗಲ್ಲು ಗ್ರಾಮಕ್ಕೆ 10 ಬೆಂಚ್ ಡೆಸ್ಕ್ ವಿತರಣೆ ಮಾಡಲಾಯಿತು. ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯು ಕರ್ನಾಟಕ ರಾಜ್ಯದ ವಿವಿಧೆಡೆಗಳಲ್ಲಿ ಹಲವಾರು ಅಭಿವೃದ್ಧಿ ಕಾರ್ಯಕ್ರಮಗಳನ್ನು ರೂಪಿಸುತ್ತಿದೆ.
ಕನ್ನಡಪ್ರಭ ವಾರ್ತೆ ರಾಮನಾಥಪುರ
ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯು ಕರ್ನಾಟಕ ರಾಜ್ಯದ ವಿವಿಧೆಡೆಗಳಲ್ಲಿ ಹಲವಾರು ಅಭಿವೃದ್ಧಿ ಕಾರ್ಯಕ್ರಮಗಳನ್ನು ರೂಪಿಸುತ್ತಿದ್ದು, ಅದರಲ್ಲಿ ಒಂದಾದ ಜ್ಞಾನದೀಪ ಶಾಲಾ ಶಿಕ್ಷಣ ಕಾರ್ಯಕ್ರಮದ ಅಡಿಯಲ್ಲಿ ಶಿಕ್ಷಕರ ಕೊರತೆ ಇರುವ ಸರ್ಕಾರಿ ಹಾಗೂ ಖಾಸಗಿ ಶಾಲೆಗಳಿಗೆ ಗೌರವ ಶಿಕ್ಷಕರನ್ನು ಒದಗಿಸುವ ಮೂಲಕ ಮತ್ತು ಸಾಲ ಕಟ್ಟಡ ರಚನೆ, ಆವರಣ ರಚನೆ, ಆಟದ ಮೈದಾನ, ಶೌಚಾಲಯ ಮೂತ್ರ ದೊಡ್ಡಿಗಳ ರಚನೆ, ಶುದ್ಧ ಕುಡಿಯುವ ನೀರಿನ ಪೂರೈಕೆ, ಶಾಲಾ ಕಟ್ಟಡ ದುರಸ್ತಿ, ಕ್ರೀಡಾ ಹಾಗೂ ಬೋಧನಾ ಸಾಮಗ್ರಿ ಪೂರೈಕೆ ಮತ್ತು ಡೆಸ್ಕ್ ಬೆಂಚುಗಳ ಒದಗಣೆ ಇತ್ಯಾದಿ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿದೆ. ಅದರಂತೆ ಅರಕಲಗೂಡು ತಾಲೂಕಿನ ಒಟ್ಟು 16 ಶಾಲೆಗಳಿಗೆ 1130500/- ರು. ಮೊತ್ತದ 133 ಬೆಂಚ್ ಡೆಸ್ಕ್‌ಗಳನ್ನು ವಿತರಣೆ ಮಾಡಲಾಗುತ್ತಿದ್ದು, 7 ಶಾಲೆಗಳಿಗೆ 56 ಬೆಂಚ್ ಡೆಸ್ಕ್‌ಗಳನ್ನು ವಿತರಣೆ ಮಾಡಲಾಯಿತು ಎಂದು ಯೋಜನಾಧಿಕಾರಿ ಜಿನ್ನಪ್ಪ ತಿಳಿಸಿದರು. ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ಹಾನಗಲ್ಲು ಗ್ರಾಮಕ್ಕೆ 10 ಬೆಂಚ್ ಡೆಸ್ಕ್ ವಿತರಣೆ ಮಾಡಲಾಯಿತು.ಕಾರ್ಯಕ್ರಮದಲ್ಲಿ ಶಾಲೆಯ ಮುಖ್ಯ ಶಿಕ್ಷಕರು ನಾಗೇಗೌಡ ಮತ್ತು ಶಾಲೆಯ ಸಹ ಶಿಕ್ಷಕರು, ಗ್ರಾಮಪಂಚಾಯಿತಿ ಸದಸ್ಯರು ಎಸ್‌ಡಿಎಂಸಿ ಅಧ್ಯಕ್ಷರು ಹಾಗೂ ಸದಸ್ಯರು, ವಲಯದ ಮೇಲ್ವಿಚಾರಕ ರವೀಂದ್ರ, ಕೃಷಿ ಮೇಲ್ವಿಚಾರಕರು ಸುನೀಲ್ ಕುಮಾರ್ ಎಂ, ಸೇವಾಪ್ರತಿನಿಧಿ ಗೀತಾ, ಗ್ರಾಮದ ಮುಖಂಡರು ಉಪಸ್ಥಿತರಿದ್ದರು.