ಸಾರಾಂಶ
ಕನ್ನಡಪ್ರಭ ವಾರ್ತೆ ಕೊಳ್ಳೇಗಾಲ
ನಗರಸಭೆಯಲ್ಲಿ ಅಕ್ರಮ ಕಟ್ಟಡಕ್ಕೆ ಅಧಿಕೃತ ಕಟ್ಟಡ ಎಂದು ಸರ್ಕಾರ ಮತ್ತು ಸ್ಥಳೀಯ ಸಂಸ್ಥೆಗಳ ಆದಾಯಕ್ಕೆ ಕೋಟ್ಯಂತರ ನಷ್ಟವುಂಟು ಮಾಡಿರುವ ನಗರಸಭೆ ಆಯುಕ್ತ ರಮೇಶ್ ಸೇರಿ 4 ಮಂದಿ ಅಧಿಕಾರಿಗಳ ವಿರುದ್ಧ ಕ್ರಿಮಿನಲ್ ಮೊಕದ್ದಮೆ ದಾಖಲಿಸುವಂತೆ ಕೊಳ್ಳೇಗಾಲ ಪಟ್ಟಣದ ದೊಡ್ಡಗಂಡಿ ಬೀದಿ ವಾಸಿ ರಾಮನಾಥ ಶೇಷಾದ್ರಿ ಎಂಬವರು ಜಿಲ್ಲಾಧಿಕಾರಿಗೆ ಲಿಖಿತ ದೂರು ಸಲ್ಲಿಸಿದ್ದಾರೆ.ನಗರಸಭೆಯಲ್ಲಿ ಕರ್ತವ್ಯ ನಿರ್ವಹಿಸುವ ಪೌರಾಯುಕ್ತರ ಬೇಜವಾಬ್ದಾರಿಯಿಂದಾಗಿಯೂ ಆದಾಯ ಸೋರಿಕೆಯಾಗಿದ್ದು ಅನಧಿಕೃತ ಕಟ್ಟಡಗಳಿಗೆ ಅಧಿಕೃತ ಎಂದು ಇ-ಸ್ವತ್ತು ನೀಡಿ ನಗರಸಭೆ ಆದಾಯಕ್ಕೆ ಕೋಟ್ಯಂತರ ರು.ಗಳ ನಷ್ಟವುಂಟಾಗಿದೆ. ಕೆಲವು ಕಡೆ ಪೂರ್ಣ ಪ್ರಮಾಣದಲ್ಲಿ ಕಟ್ಟಡ ನಿರ್ಮಿಸಿದ್ದರೂ ಅಳತೆ ಕಡಿಮೆ ತೋರಿಸಿ 25ಕ್ಕೂ ಅಧಿಕ ಇ-ಸ್ವತ್ತುಗಳನ್ನು ನೀಡಿ ಅಪಾರ ಪ್ರಮಾಣದ ನಷ್ಟವುಂಟಾಗಲು ಹಾಲಿ ನಗರಸಭೆ ಆಯುಕ್ತ ರಮೇಶ್, ಪ್ರಭಾರಿ ರಾಜಸ್ವ ನಿರೀಕ್ಷಕ ಪ್ರದೀಪ್, ಸಿಬ್ಬಂದಿ ರವಿಶಂಕರ್, ಗುಣಶ್ರೀ ಮತ್ತು ವ್ಯವಸ್ಥಾಪಕ ಲಿಂಗರಾಜು ಅವರ ವಿರುದ್ಧ ಕ್ರಿಮಿನಲ್ ಮೊಕದ್ದಮೆ ದಾಖಲಿಸಿ ಪ್ರಕರಣ ತನಿಖೆ ನಡೆಸಬೇಕು ಎಂದು ದಾಖಲೆ ಸಮೇತ ದೂರಿನಲ್ಲಿ ಮನವಿ ಸಲ್ಲಿಸಿದ್ದಾರೆ.
25 ಅಕ್ರಮಗಳಿಗೆ ಇ-ಸ್ವತ್ತು ನೀಡಿರುವ ವಿವರ?ವಾರ್ಡ್1ರಲ್ಲಿ ಪಿಐಡಿ ಸಂಖ್ಯೆ13-505, 2116 ಆಗಿದ್ದು ಖಾತೆ ಸಂಖ್ಯೆ 926ಎ, 926ಬಿ ಮತ್ತು 926ಸಿ ರಲ್ಲಿ ಅಳತೆ 83.6127 ಚ.ಮೀ.ಆಗಿದ್ದು ನಕ್ಷೆ ಉಲ್ಲಂಘಿಸಿ ನಿರ್ಮಿಸಿದ್ದರೂ 2ಪಟ್ಟು ಕಂದಾಯ ಪಡೆಯುವ ಬದಲು ಅಧಿಕೃತ ಎಂದು ಜುಲೈ 9ರ 2024ರಂದು ಅಕ್ರಮವಾಗಿ ಇ-ಸ್ವತ್ತು ನೀಡಿರುತ್ತಾರೆ, ಅದೇ ರೀತಿಯಲ್ಲಿ ಕ್ರಮವಾಗಿ ವಾರ್ಡ್ ಸಂಖ್ಯೆ 21ರಲ್ಲಿ ಹೆಚ್ಚಿನ ರೀತಿಯಲ್ಲಿ ಪರಿಶೀಲನೆ ನಡೆಸದೆ ನಿಯಮ ಉಲ್ಲಂಘಿಸಿ ಇ-ಸ್ವತ್ತು ನೀಡಿದ್ದು ವಾರ್ಡ್ 21ರಲ್ಲಿ ಪಿಐಡಿ ಸಂಖ್ಯೆ 20--883ರ ಖಾತೆ 1417, ಆದ ವಾರ್ಡ್‌ನ ಪಿಐಡಿ ಸಂಖ್ಯೆಯಲ್ಲಿ 20-505,83ರ ಖಾತೆ ಸಂಖ್ಯೆ1532 ಆಗಿದೆ. ವಾರ್ಡ್ 20ರಲ್ಲಿ ಪಿಐಡಿ ಸಂಖ್ಯೆ 42,510ರ 164ರಲ್ಲಿ ಖಾತೆ ಸಂಖ್ಯೆ 2711 ಮತ್ತು ವಾರ್ಡ್ 17ರಲ್ಲಿ 13-13-17ಬಿ ರ ಖಾತೆ ಸಂಖ್ಯೆ 2698ಎ ಆಗಿದೆ. ಅದೇ ರೀತಿಯಲ್ಲಿ 13-5- 17ಬಿರ ಖಾತೆ ಸಂಖ್ಯೆ269 795, 796,798ರಲ್ಲಿ ಅಕ್ರಮ ಎಸಗಿ ಸರ್ಕಾರದ ಬೊಕ್ಕಸಕ್ಕೆ ವಂಚಿಸಲಾಗಿದೆ.
ವಾರ್ಡ್17ರಲ್ಲಿ ಪಿಐಡಿಸಖ್ಯೆ 13-3-77ಬಿರಲ್ಲಿ ಖಾತೆ ಸಂಖ್ಯೆ 946ರಲ್ಲಿ, ವಾರ್ಡ್ 21ರಲ್ಲಿ ಖಾತೆ 1532ರಲ್ಲಿ 20-50483ರಲ್ಲೂ ಅಕ್ರಮ ಎಸಗಲಾಗಿದೆ ಎಂದು ದೂರಿನಲ್ಲಿ ವಿವರಿಸಿದ್ದಾರೆ. ಪಿಐಡಿ ಸಂಖ್ಯೆ 39-138-27ಬಿ ರಲ್ಲಿ ಖಾತೆ ನಂ.1806, ಪಿಐಡಿ ಸಂಖ್ಯೆ 39-138,29 (1840 ,ಸಿ 12 ಖಾತೆ ಸಂಖ್ಯೆ 1840, 29,502-21ರಲ್ಲಿ ಖಾತೆ ನಂ.1786, ಪಿಐಡಿ ಸಂಖ್ಯೆ 39,502, 2008ರಲ್ಲಿ ಖಾತೆ 1735 ಆಗಿದೆ. ಅದೇ ರೀತಿಯಲ್ಲಿ ಪಿಐಡಿ ಸಂಖ್ಯೆ 39-17,2015ರ ಖಾತೆ ಸಂಖ್ಯೆ 1797ಎ ಆಗಿದೆ. ಉಳಿದಂತೆ 23ನೇ ವಾರ್ಡ್‌ನ ಪಿಐಡಿ ಸಂಖ್ಯೆ (35-10-14(55), ಖಾತೆ ಸಂಖ್ಯೆ 55 ಮತ್ತು ಅದೇ ವಾರ್ಡ್‌ನ ಪಿಐಡಿ ಸಂಖ್ಯೆ35-135-49ರ ಖಾತೆ ಸಂಖ್ಯೆ 385 ಆಗಿದೆ. ಉಳಿದಂತೆ ವಾರ್ಡ್ 21ರಲ್ಲಿ ಖಾತೆ 1417ರಲ್ಲಿ 20-8-83ರಲ್ಲಿ, ವಾರ್ಡ್ 17ರಲ್ಲಿ 13-505-83ರ ಖಾತೆ ಸಂಖ್ಯೆ 1532ರಲ್ಲಿ ಹಾಗೂ 13-505ರ 168ರ ಖಾತೆ ಸಂಖ್ಯೆ 937,938ರಲ್ಲಿ ಮತ್ತು ವಾರ್ಡ್ 23ರಲ್ಲಿ 35- 135-49ರ ಸಂಖ್ಯೆಯ ಖಾತೆ ನಂ.395ರಲ್ಲಿ, ವಾರ್ಡ್ 21ರಲ್ಲಿ 39-502-21ರ ಖಾತೆ ಸಂಖ್ಯೆ 1786 ಹೀಗೆ ಮೇಲ್ಕಂಡ 25ಕ್ಕೂ ಅಧಿಕ ಕಡೆ ಸರ್ಕಾರ ಮತ್ತು ಸ್ಥಳೀಯ ಸಂಸ್ಥೆ ನಗರಸಭೆಗೆ ವಂಚಿಸಿ ಆದಾಯ ವಂಚನೆ ಮಾಡಿದ್ದು ಇವರ ವಿರುದ್ಧ ಪರಿಶೀಲಿಸಿ ತಕ್ಷಣ ಕ್ರಿಮಿನಲ್ ಮೊಕದ್ದಮೆ ದಾಖಲಿಸಿ ಪ್ರಕರಣ ತನಿಖೆ ನಡೆಸಬೇಕು ಎಂದು ದೂರಿನಲ್ಲಿ ವಿವರಿಸಿದ್ದು ದೂರು ಪ್ರತಿಯನ್ನು ಜಿಲ್ಲಾಧಿಕಾರಿಗಳು, ನಗರಸಭೆ ಕೋಶದ ಯೋಜನಾಧಿಕಾರಿಗಳಿಗೆ ಸಲ್ಲಿಸಿದ್ದಾರೆ.2016ರತನಕ ನಮ್ಮ ಆಸ್ತಿ, 2017ರಲ್ಲಿ ಸಂಸ್ಥೆ ಹೆಸರಿಗೆ: @ ಪಿಐಡಿ ನಂಬರ್ 13,3,1955ರ ಸಂಖ್ಯೆಯ ಸರ್ವೇನಂ.745ರ ಆಸ್ತಿ, ಖಾತೆ ಸಂಖ್ಯೆ 2031ರಲ್ಲಿ ವಾರ್ಡ್ 17ಕ್ಕೆ ಸಂಬಂಧಿಸಿದಂತೆ ಅಧಿಕೃತ ದಾಖಲೆಗಳಲ್ಲಿ ಅಕ್ರಮ ಖಾತೆ ಮಾಡಲಾಗಿದ್ದು ಇ-ಸ್ವತ್ತು ನಮ್ಮ ಕುಟುಂಬಕ್ಕೆ ಸೇರಿದ್ದು ಇ-ಸ್ವತ್ತಿನ ದಾಖಲೆ 2016 ರತನಕ ನಮ್ಮ ಕುಟುಂಬಕ್ಕೆ ಸೇರಿದ ಹೆಸರಿನಲ್ಲಿದ್ದು ಆದರೆ 2017ರ ಮೇ 15ರಲ್ಲಿ ನಿಯಮ ಉಲ್ಲಂಘಿಸಿ ಅಕ್ರಮವಾಗಿ ಸಂಸ್ಥೆಯೊಂದರ ಹೆಸರಿಗೆ ಖಾತೆ ಮಾಡಲಾಗಿದ್ದು ಇದರಿಂದ ನನಗೆ ಅನ್ಯಾಯವಾಗಿದ್ದು ತನಿಖೆ ನಡೆಸಿ ನನಗೆ ನ್ಯಾಯ ಒದಗಿಸಬೇಕು ಎಂದು ರಾಮನಾಥ್ ಶೇಷಾದ್ರಿ ಮನವಿ ಮಾಡಿದ್ದಾರೆ. ನೀರಿನ ಘಟಕದ ಲೋಪ, ಕ್ರಮವಾಗಿಲ್ಲಶುದ್ಧ ಕುಡಿಯುವ ನೀರಿನ ಘಟಕದಲ್ಲಿನ ಅವ್ಯವಹಾರ ಸಂಬಂಧಿಸಿದಂತೆ ತನಿಖೆ ನಡೆಸಿ ಸಂಬಂಧಿಸಿದವರ ವಿರುದ್ಧ ಕ್ರಮಕೈಗೊಳ್ಳುವಂತೆ ಪೌರಾಡಳಿತ ನಿರ್ದೇಶನಾಲಯ ಆದೇಶಿಸಿದೆ. ಅದೇ ರೀತಿಯಲ್ಲಿ ಯುಜಿಡಿ ಲೋಪ ಕುರಿತು ಸರಿಪಡಿಸುವಂತೆ ಜಿಲ್ಲಾಧಿಕಾರಿ ಶಿಲ್ಪಾನಾಗ್, ಶಾಸಕ ಎ.ಆರ್. ಕೃಷ್ಣಮೂರ್ತಿ ಅವರ ಸಮ್ಮುಖದಲ್ಲಿ ಸೂಚಿಸಲಾಗಿದೆ. ಹೀಗಿದ್ದರೂ ಯುಜಿಡಿ ಲೋಪವು ಕೆಲ ವಾರ್ಡ್‌ಗಳಲ್ಲಿ ಹಾಗೆಯೇ ಇದೆ. ಶುದ್ಧ ಕುಡಿಯುವ ನೀರಿನ ಘಟಕ ಹಣ ದುರ್ಬಳಕೆ ಮಾಡಿಕೊಂಡವರ ವಿರುದ್ಧವೂ ಕ್ರಮ ಆಗಿಲ್ಲ ಎಂಬ ಮಾತುಗಳು ಸಾರ್ವಜನಿಕ ವಲಯದಲ್ಲಿ ಕೇಳಿ ಬರುತ್ತಿವೆ.