ರಾಜ್ಯ ಸರಕಾರವೂ ಇಂತಹ ಕಿಟ್ಗಳನ್ನು ನೀಡಲು ಮುಂದಾಗಬೇಕು. ಸಕಾಲದಲ್ಲಿ ರೈತರ ನೆರವಿಗೆ ಬರಬೇಕು. ತಾಲೂಕಿ ನಲ್ಲಿ ಪಶುಗಳ ಆಹಾರದ ಕೊರತೆಯಾಗದಂತೆ ಅಧಿಕಾರಿಗಳು ಮುನ್ನೆಚ್ಚರಿಕಾ ಕ್ರಮಗಳನ್ನು ಅನುಸರಿಸಬೇಕು. ಇಂತಹ ಯೋಜನೆಗಳನ್ನು ಸದುಪಯೋಗ ಮಾಡಿಕೊಂಡು ಸಕಾಲದಲ್ಲಿ ಮೇವಿನ ಬೀಜಗಳನ್ನು ಬಿತ್ತನೆ ಮಾಡಬೇಕು. ಒಮ್ಮೆ ಬಿತ್ತಿದ ಬೀಜದಲ್ಲಿ ವರ್ಷದಲ್ಲಿ ನಾಲ್ಕು ಬೆಳೆ ತೆಗೆಯಬಹುದು. ತಾಲೂಕಿನಲ್ಲಿ ನಿತ್ಯ ೪.೫ ಲಕ್ಷ ಲೀ ಹಾಲು ಉತ್ಪಾದನೆಯಾಗುತ್ತಿದೆ ಎಂದರು.
ಕನ್ನಡಪ್ರಭ ವಾರ್ತೆ ಚನ್ನರಾಯಪಟ್ಟಣ
ಮಳೆ ಕೈಕೊಟ್ಟ ಹಿನ್ನೆಲೆಯಲ್ಲಿ ಕೇಂದ್ರ ಸರಕಾರದ ನೆರವಿನಲ್ಲಿ ತಾಲೂಕಿಗೆ ಸರಬರಾಜಾಗಿರುವ ೨೪೫೩ ಮೇವಿನ ಕಿಟ್ಗಳನ್ನು ಅರ್ಹ ಫಲಾನುಭವಿಗಳಿಗೆ ವಿತರಣೆ ಮಾಡಲಾಗುವುದು ಎಂದು ಶಾಸಕ ಸಿ. ಎನ್. ಬಾಲಕೃಷ್ಣ ತಿಳಿಸಿದರು.ಪಟ್ಟಣದ ಪಶು ಆಸ್ಪತ್ರೆ ಆವರಣದಲ್ಲಿ ತಲಾ ೫ ಕೇಜಿಯ ಮೇವಿನ ಬೀಜದ ಚೀಲಗಳನ್ನು ವಿತರಣೆ ಮಾಡಿ ಮಾತನಾಡಿ, ’ರಾಜ್ಯ ಸರಕಾರವೂ ಇಂತಹ ಕಿಟ್ಗಳನ್ನು ನೀಡಲು ಮುಂದಾಗಬೇಕು. ಸಕಾಲದಲ್ಲಿ ರೈತರ ನೆರವಿಗೆ ಬರಬೇಕು. ತಾಲೂಕಿ ನಲ್ಲಿ ಪಶುಗಳ ಆಹಾರದ ಕೊರತೆಯಾಗದಂತೆ ಅಧಿಕಾರಿಗಳು ಮುನ್ನೆಚ್ಚರಿಕಾ ಕ್ರಮಗಳನ್ನು ಅನುಸರಿಸಬೇಕು. ಇಂತಹ ಯೋಜನೆಗಳನ್ನು ಸದುಪಯೋಗ ಮಾಡಿಕೊಂಡು ಸಕಾಲದಲ್ಲಿ ಮೇವಿನ ಬೀಜಗಳನ್ನು ಬಿತ್ತನೆ ಮಾಡಬೇಕು. ಒಮ್ಮೆ ಬಿತ್ತಿದ ಬೀಜದಲ್ಲಿ ವರ್ಷದಲ್ಲಿ ನಾಲ್ಕು ಬೆಳೆ ತೆಗೆಯಬಹುದು. ತಾಲೂಕಿನಲ್ಲಿ ನಿತ್ಯ ೪.೫ ಲಕ್ಷ ಲೀ ಹಾಲು ಉತ್ಪಾದನೆಯಾಗುತ್ತಿದೆ ಎಂದರು.ತಾಲೂಕು ಪಶು ಆಸ್ಪತ್ರೆ ಆವರಣದಲ್ಲಿ ಅಭಿವೃದ್ಧಿ ಕಾಮಗಾರಿಗಳಿಗಾಗಿ ₹ ೧೧.೫ ಲಕ್ಷ ಬಿಡುಗಡೆಯಾಗಿದ್ದು, ಅಗತ್ಯ ಕಾಮಗಾರಿಗಳನ್ನು ನಿರ್ವಹಿಸಲಾಗುವುದು. ಕೆಪಿಎಸ್ಸಿ ಸಂಸ್ಥೆಯು ಹಗರಣಗಳ ಆಗರವಾಗಿದ್ದು, ತಾಲೂಕಿನಲ್ಲಿ ೨೯ ಪಶುವೈದ್ಯರು ಇರಬೇಕಿದ್ದು, ಕೇವಲ ೪ ಮಂದಿ ಮಾತ್ರ ಕರ್ತವ್ಯ ನಿರ್ವಹಿಸುತ್ತಿದ್ದಾರೆ. ಒತ್ತಡದಲ್ಲಿ ಸಿಬ್ಬಂದಿ ಕೆಲಸ ಮಾಡುವಂತಾಗಿದ್ದು, ಸರಕಾರ ಕೂಡಲೇ ತನ್ನ ಬದ್ದತೆ ತೋರಿಸಬೇಕು ಎಂದರು.ಪಶುವೈದ್ಯ ಇಲಾಖೆ ಸಹಾಯಕ ನಿರ್ದೇಶಕ ಡಾ.ಯಶವಂತ್, ಡಾ.ಶ್ರೀಧರ್, ಡಾ. ಮಂಜುನಾಥ್ ಇದ್ದರು.