Distribution of food kits and clothes to Anandashrama

ನರಸಿಂಹರಾಜಪುರ: ಇನ್ನರ್ ವೀಲ್ ಕ್ಲಬ್ ನಿಂದ ಬಿ.ಎಚ್.ಕೈಮರದ ಮತ್ತಿಮರ ದಿವ್ಯ ಕಾರುಣ್ಯ ಆನಂದಾಶ್ರಮದಲ್ಲಿ ಅಲ್ಲಿನ ಅನಾಥರಿಗೆ ಆಹಾರ ಕಿಟ್, ಬಟ್ಟೆಗಳನ್ನು ಆಶ್ರಮದ ಮುಖ್ಯಸ್ಥರಿಗೆ ಇನ್ನರ್ ವೀಲ್ ಕ್ಲಬ್ ಅಧ್ಯಕ್ಷೆ ರಾಧಿಕಾ ಅರ್ಜುನ್‌ ಹಸ್ತಾಂತರಿಸಿದರು. ಈ ವರ್ಷ 50 ಕೆ.ಜಿ. ಅಕ್ಕಿ, 50 ಸ್ಟೀಲ್ ಲೋಟಗಳು, ಬಟ್ಟೆಗಳು ಹಾಗೂ ಇತರ ಆಹಾರ ಸಾಮಗ್ರಿ ನೀಡುತ್ತಿದ್ದೇವೆ. ಇದನ್ನು ಸರಿಯಾದ ರೀತಿಯಲ್ಲಿ ಉಪಯೋಗಿಸಿಕೊಳ್ಳಿ. ಅನಾಥರ ಸೇವೆ ಮಾಡುತ್ತಿರುವ ಆಶ್ರಮದ ಮುಖ್ಯಸ್ಥರಿಗೆ ಸಂಘ ಸಂಸ್ಥೆಗಳು ಸಹಾಯ ಹಸ್ತ ಚಾಚಬೇಕು ಎಂದು ಅವರು ಮನವಿ ಮಾಡಿದರು. ಇನ್ನರ್ ವೀಲ್ ಕ್ಲಬ್ ಕಾರ್ಯದರ್ಶಿ ಸನ್ಮತಿ ರಕ್ಷಿತ್, ಐ.ಎಸ್.ಓ ಸ್ಫೂರ್ತಿ ಅಭಿಜಿತ್, ಪೂರ್ವಾಧ್ಯಕ್ಷೆ ರಶ್ಮಿದಯಾನಂದ್, ಸದಸ್ಯರಾದ ಶಿಲ್ಪ ಚೇತನ್, ಪ್ರಿಯಾಂಕ ಪ್ರವರ್ದನ್ ಇದ್ದರು.