ರಂಜಾನ್‌ ಪ್ರಯುಕ್ತ ಮುಸ್ಲಿಮರಿಗೆ ಆಹಾರ ಕಿಟ್ ವಿತರಣೆ

| Published : Apr 01 2025, 12:51 AM IST

ರಂಜಾನ್‌ ಪ್ರಯುಕ್ತ ಮುಸ್ಲಿಮರಿಗೆ ಆಹಾರ ಕಿಟ್ ವಿತರಣೆ
Share this Article
  • FB
  • TW
  • Linkdin
  • Email

ಸಾರಾಂಶ

ಮುಸ್ಲಿಂ ಸಮಾಜದ ಪವಿತ್ರ ಹಬ್ಬ ಎಂದೇ ಖ್ಯಾತವಾದ ರಂಜಾನ್ ಹಬ್ಬದ ಪ್ರಯುಕ್ತ ಮುಸ್ಲಿಂ ಸಮುದಾಯದ ಕೊಳ್ಳೇಗಾಲ ಮತ್ತು ಯಳಂದೂರು ತಾಲೂಕಿನ ನೊಂದಾಯಿತ ಬಡಜನರಿಗೆ ಆಹಾರ ಕಿಟ್ ಅನ್ನು ಕ್ಷೇತ್ರದ ಶಾಸಕ ಎ.ಆರ್. ಕೃಷ್ಣಮೂರ್ತಿ ವಿತರಿಸಿದರು.

ಕನ್ನಡಪ್ರಭ ವಾರ್ತೆ ಕೊಳ್ಳೇಗಾಲ

ಮುಸ್ಲಿಂ ಸಮಾಜದ ಪವಿತ್ರ ಹಬ್ಬ ಎಂದೇ ಖ್ಯಾತವಾದ ರಂಜಾನ್ ಹಬ್ಬದ ಪ್ರಯುಕ್ತ ಮುಸ್ಲಿಂ ಸಮುದಾಯದ ಕೊಳ್ಳೇಗಾಲ ಮತ್ತು ಯಳಂದೂರು ತಾಲೂಕಿನ ನೊಂದಾಯಿತ ಬಡಜನರಿಗೆ ಆಹಾರ ಕಿಟ್ ಅನ್ನು ಕ್ಷೇತ್ರದ ಶಾಸಕ ಎ.ಆರ್. ಕೃಷ್ಣಮೂರ್ತಿ ವಿತರಿಸಿದರು.

ಪಟ್ಟಣದ ವೆಂಕಟೇಶ್ವರ ಮಹಲ್ ನಲ್ಲಿ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಮಾತನಾಡಿ, ಇಂದು ನೊಂದಾಯಿತ ನಾನೂರಕ್ಕೂ ಅಧಿಕ ಮಂದಿ ಮುಸ್ಲಿಂ ಸಮಾಜದ ಬಂಧುಗಳಿಗೆ ಆಹಾರ ಕಿಟ್‌ಗಳನ್ನು ವಿತರಿಸಲಾಗಿದೆ. 1 ತಿಂಗಳುಗಳ ಕಾಲ ಉಪವಾಸವಿದ್ದು, ಶ್ರದ್ದಾ-ಭಕ್ತಿಯಿಂದ ರಂಜಾನ್ ಹಬ್ಬ ಆಚರಿಸುವ ಮುಸ್ಲಿಂ ಭಾಂಧವರಿಗೆ ಹಬ್ಬವು ಹರುಷತರಲಿ, ದೇಹ ಮತ್ತು ಆತ್ಮವನ್ನು ಪವಿತ್ರಗೊಳಿಸಿಕೊಂಡು ತಾವು ಸಂಪಾದನೆ ಮಾಡಿದ್ದರಲ್ಲಿ ಕೆಲವಷ್ಟು ದಾನ ಮಾಡಿ ಮಾನವೀಯತೆ ಮೆರೆಯುವ ಮೂಲಕ ಬಹುತೇಕ ಮುಸ್ಲಿಂ ಸಮಾಜದ ಬಂಧುಗಳು ಹಬ್ಬ ಆಚರಣೆ ಮಾಡುತ್ತಾರೆ, ಇಂತಹ ಸೇವಾ ಮುಖಿ ಚಟುವಟಿಕೆಗಳನ್ನು ಸಮಾಜದ ಬಂಧುಗಳು ವಿಸ್ತರಿಸಿಕೊಳ್ಳಬೇಕು ಎಂದರು. ನಾನು ಚುನಾವಣೆಗೂ ಮುನ್ನ ನುಡಿದಂತೆ ನಡೆದಿದ್ದು, ಸರ್ಕಾರದಿಂದ ಬಿಡುಗಡೆಯಾದ 25 ಕೋಟಿ ಅನುದಾನದಲ್ಲಿ ಎಲ್ಲಾ ಧರ್ಮದ, ಎಲ್ಲಾ ವರ್ಗದ ಸಮುದಾಯ ಭವನಗಳನ್ನು ಪೂರ್ಣಗೊಳಿಸಲು ಶ್ರಮಿಸಿರುವೆ, ಅದರಂತೆ ಇಲ್ಲಿನ ಶಾದಿಮಹಲ್ ಪೂರ್ಣಗೊಳಿಸಲು ಕ್ರಮವಹಿಸಲಾಗಿದೆ. ಜೊತೆಗೆ ಮುಸ್ಲಿಂ ಸಮುದಾಯದ ಮಕ್ಕಳ ವಿದ್ಯಾಭ್ಯಾಸಕ್ಕಾಗಿ ವಸತಿ ಶಾಲೆಯನ್ನು ತೆರೆಯಲು ಕ್ರಮ

ವಹಿಸಲಾಗಿದೆ. ನನ್ನ ಮಗ ಶ್ರೀವರ್ಧನ್ ಜೊತೆಗೂಡಿ ನನ್ನ ಬೆಂಬಲಿಗ ಅನ್ಸರ್ ಬೇಗ್ ಮುಸ್ಲಿಂ ಜನಾಂಗದ ಸುಮಾರು 400 ಮಂದಿಗೂ ಅಧಿಕ ಬಡವರನ್ನು ಗುರುತಿಸಿ ಆಹಾರ ಕಿಟ್ ನೀಡುತ್ತಿರುವುದು ಸಂತಸದ ವಿಚಾರ ಎಂದರು

ಈ ವೇಳೆ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ತೋಟೇಶ್, ನಗರಸಭೆ ಅಧ್ಯಕ್ಷ ರೇಖಾ ರಮೇಶ್, ನಾಮ ನಿರ್ದೇಶನ ಸದಸ್ಯ ಅನ್ಸರ್ ಬೇಗ್, ಸ್ವಾಮಿ ನಂಜಪ್ಪ, ನಗರಸಭೆ ಸದಸ್ಯ ನಾಶೀರ್ ಷರೀಫ್, ಮಂಜುನಾಥ್, ಗ್ಯಾರಂಟಿ ಯೋಜನೆಗಳ ಅನುಷ್ಠಾನ ಸಮಿತಿ ಸದಸ್ಯ ಸಿಗಬತ್ಉಲ್ಲಾ, ಅಲ್ಪಸಂಖ್ಯಾತರ ವಿಭಾಗದ ಜಿಲ್ಲಾ ಉಪಾಧ್ಯಕ್ಷ ಇನಾಯತ್, ಪ್ರಧಾನ ಕಾರ್ಯದರ್ಶಿ ಆಸೀಫ್ ಉಲ್ಲಾ , ಹಜರತ್ ತವಾಬ್, ಯಳಂದೂರು ಮುಸ್ಲಿಂ ಸಮಾಜ ಅಬ್ರಾಹಾಮ್, ಯಳಂದೂರು ಪಟ್ಟಣ ಪಂಚಾಯಿತಿ ನಾಮನಿರ್ದೇಶನ ಸದಸ್ಯ ಮುನಾವರ್ ಬೇಗ್, ಚೇತನ್ ದೊರೆ ಇನ್ನಿತರಿದ್ದರು.