ಸಾರಾಂಶ
ಸುಮಾರು ಮೂರು ಸಾವಿರಕ್ಕೂ ಮಿಕ್ಕಿ ಔಷಧೀಯ ಗಿಡಗಳನ್ನು ಸುಮಾರು ಮುನ್ನೂರಕ್ಕೂ ಹೆಚ್ಚು ಆಯುರ್ವೇದ ಮತ್ತು ಪರಿಸರ ಪ್ರೇಮಿಗಳಿಗೆ ವಿತರಿಸಲಾಯಿತು.
ಕನ್ನಡಪ್ರಭ ವಾರ್ತೆ ಉಡುಪಿ
ಗುರುಪೂರ್ಣಿಮೆ ಹಾಗೂ ವನಮಹೋತ್ಸವ ಸಪ್ತಾಹದ ಅಂಗವಾಗಿ ಮಣಿಪಾಲದ ಇಂಡಸ್ಟ್ರೀಯಲ್ ಏರಿಯಾದಲ್ಲಿರುವ ಮುನಿಯಾಲು ಆಯುರ್ವೇದ ಸಂಸ್ಥೆಯ ಆವರಣದಲ್ಲಿ ಕಾಲೇಜಿನ ದ್ರವ್ಯಗುಣ ವಿಭಾಗ ಮತ್ತು ರಾಷ್ಟ್ರೀಯ ಸೇವಾ ಯೋಜನೆ ಜಂಟಿಯಾಗಿ ಉಡುಪಿ ಪರಿಸರದ ಸಸ್ಯಪ್ರೇಮಿಗಳಿಗೆ ವಿವಿಧ ಜಾತಿಯ ಔಷಧೀಯ ಗುಣಗಳುಳ್ಳ ಬಿಲ್ವ, ನೆಲ್ಲಿ, ಬೇಂಗ, ಹಿಪ್ಪಲಿ, ಅಮೃತ ಬಳ್ಳಿ, ಪಶ, ಲಕ್ಮೀತರು ಮುಂತಾದ ಸಸ್ಯಗಳನ್ನು ಉಚಿತವಾಗಿ ವಿತರಿಸುವ ಕಾರ್ಯಕ್ರಮ ಆಯೋಜಿಸಿತು.ಸುಮಾರು ಮೂರು ಸಾವಿರಕ್ಕೂ ಮಿಕ್ಕಿ ಔಷಧೀಯ ಗಿಡಗಳನ್ನು ಸುಮಾರು ಮುನ್ನೂರಕ್ಕೂ ಹೆಚ್ಚು ಆಯುರ್ವೇದ ಮತ್ತು ಪರಿಸರ ಪ್ರೇಮಿಗಳಿಗೆ ವಿತರಿಸಲಾಯಿತು. ಕಾರ್ಯಕ್ರಮದ ಉದ್ಘಾಟನೆಯನ್ನು ಸಂಸ್ಥೆಯ ಆಡಳಿತಾಧಿಕಾರಿ ಯೋಗೀಶ್ ಶೆಟ್ಟಿ ಹಾಗೂ ಕಚೇರಿ ಮುಖ್ಯಸ್ಥ ಸುಪ್ರಸಾದ್ ಶೆಟ್ಟಿ ನೆರವೇರಿಸಿದರು.
ದ್ರವ್ಯಗುಣ ವಿಭಾಗದ ಡಾ.ಚಂದ್ರಕಾಂತ್ ಭಟ್, ಡಾ. ಆರ್ಚನಾ ಕಲ್ಲೂರಾಯ ಹಾಗೂ ರಾಷ್ಟ್ರೀಯ ಸ್ವಯಂ ಸೇವಾಯೋಜನೆಯ ಸಹಅಧಿಕಾರಿ ಡಾ. ನಮಿತಾ ಅವರು ಕಾರ್ಯಕ್ರಮದ ಸಂಯೋಜನೆಗೆ ಸಹಕರಿಸಿದರು.