ಖಾಸಗಿ ಶಾಲೆಗಳ ಪೈಪೋಟಿ ನಡುವೆ ಮಕ್ಕಳ ಕೊರತೆಯಿಂದ ಸರ್ಕಾರಿ ಶಾಲೆಗಳು ಮುಚ್ಚುತ್ತಿರುವ ಸಂದರ್ಭದಲ್ಲಿ ಹೋಬಳಿಯ ಅಂಗಡಿಹಳ್ಳಿ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಎಲ್‌ಕೆಜಿಯಿಂದ ೭ನೇ ತರಗತಿವರೆಗೂ ಇರುವ ಸುಮಾರು ೧೯೪ ವಿದ್ಯಾರ್ಥಿಗಳಿದ್ದು ಅದರಲ್ಲಿ ಎಲ್‌ಕೆಜಿ ಮತ್ತು ಯುಕೆಜಿಗೆ ಸುಮಾರು ೩೦ ವಿದ್ಯಾರ್ಥಿಗಳು ದಾಖಲಾಗಿದ್ದಾರೆ. ಮುಂದಿನ ದಿನಗಳಲ್ಲಿ ಈ ಶಾಲೆಗೆ ಒಂದು ಚಾರ್ಜಬಲ್ ಸ್ಪೀಕರ್‌ ಹಾಗೂ ಒಂದು ಸ್ಮಾರ್ಟ್ ಟಿವಿಯನ್ನು ಕೊಡುಗೆಯಾಗಿ ನೀಡುವುದಾಗಿ ಶಿವಕುಮಾರ ತಿಳಿಸಿದ್ದಾರೆ.

ಕನ್ನಡಪ್ರಭ ವಾರ್ತೆ ಹಳೇಬೀಡುಖಾಸಗಿ ಶಾಲೆಗಳ ಪೈಪೋಟಿ ನಡುವೆ ಮಕ್ಕಳ ಕೊರತೆಯಿಂದ ಸರ್ಕಾರಿ ಶಾಲೆಗಳು ಮುಚ್ಚುತ್ತಿರುವ ಸಂದರ್ಭದಲ್ಲಿ ಹೋಬಳಿಯ ಅಂಗಡಿಹಳ್ಳಿ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಎಲ್‌ಕೆಜಿಯಿಂದ ೭ನೇ ತರಗತಿವರೆಗೂ ಇರುವ ಸುಮಾರು ೧೯೪ ವಿದ್ಯಾರ್ಥಿಗಳಿದ್ದು ಅದರಲ್ಲಿ ಎಲ್‌ಕೆಜಿ ಮತ್ತು ಯುಕೆಜಿಗೆ ಸುಮಾರು ೩೦ ವಿದ್ಯಾರ್ಥಿಗಳು ದಾಖಲಾಗಿದ್ದಾರೆ.ಒಂದರಿಂದ ಏಳನೇ ತರಗತಿಗೆ ಸುಮಾರು ೧೬೪ ವಿದ್ಯಾರ್ಥಿಗಳು ಇದ್ದು ಈ ಶಾಲೆಯಲ್ಲಿ ಹೆಚ್ಚು ಬುಡಕಟ್ಟು ಜನಾಂಗದ ಹಕ್ಕಿಪಿಕ್ಕಿ ಮಕ್ಕಳೇ ಇರುವುದು. ಇವರ ವಿದ್ಯಾಭ್ಯಾಸಕ್ಕೆ ಅನುಕೂಲವಾಗಲೆಂದು ಇದೇ ಗ್ರಾಮದ ಗ್ರಾಮ ಪಂಚಾಯಿತಿ ಮಾಜಿ ಅಧ್ಯಕ್ಷರಾದ ಚಂದ್ರಮ್ಮ ಮತ್ತು ಶಿವಕುಮಾರ್‌ ದಂಪತಿ ಶಾಲಾ ಮಕ್ಕಳಿಗೆ ಸುಮಾರು ಐವತ್ತು ಸಾವಿರ ಬೆಲೆಬಾಳುವ ನೋಟ್‌ಪುಸ್ತಕಗಳನ್ನು ಕೊಡುಗೆಯಾಗಿ ನೀಡಿದ್ದಾರೆ.ಮುಂದಿನ ದಿನಗಳಲ್ಲಿ ಈ ಶಾಲೆಗೆ ಒಂದು ಚಾರ್ಜಬಲ್ ಸ್ಪೀಕರ್‌ ಹಾಗೂ ಒಂದು ಸ್ಮಾರ್ಟ್ ಟಿವಿಯನ್ನು ಕೊಡುಗೆಯಾಗಿ ನೀಡುವುದಾಗಿ ಶಿವಕುಮಾರ ತಿಳಿಸಿದ್ದಾರೆ. ಈ ಕಾರ್ಯಕ್ರಮದಲ್ಲಿ ಹಾಜರಿದ್ದ ಶಾಲಾ ಎಸ್‌ಡಿಎಂಸಿ ಉಪಾಧ್ಯಕ್ಷರಾದ ಮಂಜುಳಾ ಮಾತನಾಡಿ, ನಮ್ಮ ಶಾಲೆಯಲ್ಲಿ ಒಟ್ಟು ೧೯೪ ವಿದ್ಯಾರ್ಥಿಗಳಿದ್ದು, ಅದರಲ್ಲಿ ಕೇವಲ ಆರು ಕೊಠಡಿಗಳು ಮಾತ್ರ ಇದ್ದು, ಶಾಲೆ ನಡೆಸಲು ಸಮಸ್ಯೆಯಾಗಿದೆ. ಆದ್ದರಿಂದ ಈ ಶಾಲೆಗೆ ಇನ್ನೂ ನಾಲ್ಕು ಕೊಠಡಿಗಳ ಅವಶ್ಯಕತೆ ಇದ್ದು ಅದನ್ನು ಸರ್ಕಾರ ಒದಗಿಸಿಕೊಡಬೇಕೆಂದು ತಿಳಿಸಿ ಹಾಗೇ ೧೯೪ ವಿದ್ಯಾರ್ಥಿಗಳಿಗೆ ಕೇವಲ ಆರು ಜನ ಶಿಕ್ಷಕರಿದ್ದು, ತಕ್ಷಣವೇ ಇನ್ನೂ ಎರಡು ಶಿಕ್ಷಕರನ್ನು ಕೊಡಬೇಕೆಂದು ತಿಳಿಸಿದರು.ಈ ಕಾರ್ಯಕ್ರಮದಲ್ಲಿ ತಾಲೂಕು ಪಂಚಾಯಿತಿ ಮಾಜಿ ಉಪಾಧ್ಯಕ್ಷರಾದ ಸಂಗೀತ ಲೋಕ ಕುಮಾರ್ ಹಾಗೂ ಎಸ್‌ಡಿಎಂಸಿ ಸದಸ್ಯರಾದ ಕುಮಾರ್‌, ಪಲ್ಲವಿ, ವೆಂಕಟೇಶ್, ಮುಖ್ಯ ಶಿಕ್ಷಕರಾದ ವಿಠ್ಠಲ್ ಮೂರ್ತಿ, ಸಹ ಶಿಕ್ಷಕರು ಮುಂತಾದವರು ಕಾರ್ಯಕ್ರಮದಲ್ಲಿ ಹಾಜರಿದ್ದರು. ಶಾಲೆಗೆ ದಾನ ನೀಡಿದ ಚಂದ್ರಮ್ಮ ಶಿವಕುಮಾರ್ ದಂಪತಿಗೆ ಹಾಗೂ ಎಸ್‌ಡಿಎಂಸಿ ಸದಸ್ಯರೊಂದಿಗೆ ಕೂಡಿ ಅಭಿನಂದಿಸಲಾಯಿತು.