ಉಚಿತ ಪಾಸ್‌ ವಿತರಣೆ ಪತ್ರಕರ್ತರಿಗೆ ಸಹಕಾರಿ: ಚಿದಾನಂದ

| Published : Oct 15 2025, 02:06 AM IST

ಸಾರಾಂಶ

ಪತ್ರಕರ್ತರಿಗೆ ಖಾಸಗಿ ಬಸ್ ಮಾಲೀಕರು ದಾವಣಗೆರೆ ಜಿಲ್ಲೆಯಾದ್ಯಾಂತ ಉಚಿತವಾಗಿ ತಮ್ಮ ಬಸ್ಸುಗಳ ಮೂಲಕ ಸಂಚರಿಸಲು ಬಸ್ ಪಾಸ್ ನೀಡಲಿದ್ದು ಇದರ ಸದುಪಯೋಗವನ್ನು ಪಡೆದುಕೊಂಡು ಸುದ್ದಿ ಸಮಚಾರಗಳಿಗೆ ತೆರಳಲು ಸಹಕಾರಿಯಾಗಲಿದೆ ಎಂದು ತಾಲೂಕು ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷ ಜಿ.ಎಸ್.ಚಿದಾನಂದ ಹೇಳಿದರು.

ಕನ್ನಡಪ್ರಭವಾರ್ತೆ ಜಗಳೂರು

ಪತ್ರಕರ್ತರಿಗೆ ಖಾಸಗಿ ಬಸ್ ಮಾಲೀಕರು ದಾವಣಗೆರೆ ಜಿಲ್ಲೆಯಾದ್ಯಾಂತ ಉಚಿತವಾಗಿ ತಮ್ಮ ಬಸ್ಸುಗಳ ಮೂಲಕ ಸಂಚರಿಸಲು ಬಸ್ ಪಾಸ್ ನೀಡಲಿದ್ದು ಇದರ ಸದುಪಯೋಗವನ್ನು ಪಡೆದುಕೊಂಡು ಸುದ್ದಿ ಸಮಚಾರಗಳಿಗೆ ತೆರಳಲು ಸಹಕಾರಿಯಾಗಲಿದೆ ಎಂದು ತಾಲೂಕು ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷ ಜಿ.ಎಸ್.ಚಿದಾನಂದ ಹೇಳಿದರು.

ಪಟ್ಟಣದ ಪತ್ರಕರ್ತರ ಭವನದಲ್ಲಿ ಸೋಮವಾರ ನಡೆದ ಕರ್ನಾಟಕ ಕಾಯರ್ನಿರತ ಪತ್ರಕರ್ತರ ರಾಜ್ಯ, ಜಿಲ್ಲಾ ಸಮಿತಿಗಳಿಗೆ ನಡೆಯಲಿರುವ ಚುನಾವಣೆ ಹಿನ್ನೆಲೆ ಪೂರ್ವ ಸಿದ್ಧತಾ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದರು.

ಪತ್ರಕರ್ತರಿಗೆ ಸರ್ಕಾರದಿಂದ ನೀಡುವ ಉಚಿತ ಬಸ್ ಪಾಸ್ ಮುಂದಿನ ದಿನಗಳಲ್ಲಿ ಎಲ್ಲಾ ಪತ್ರಕರ್ತರಿಗೆ ಸಿಗಲಿದೆ. ದಾವಣಗೆರೆ ಖಾಸಗಿ ಬಸ್ ಮಾಲೀಕರ ಸಂಘದ ಅಧ್ಯಕ್ಷರು ಸೇರಿದಂತೆ ಪದಾಧಿಕಾರಿಗಳು, ಬಸ್ ಮಾಲೀಕರ ಹತ್ತಿರ ಜಗಳೂರು ತಾಲೂಕಿನ ಪತ್ರಕರ್ತರಿಗೆ ದಾವಣಗೆರೆ, ಚಿತ್ರದುರ್ಗ ಜಿಲ್ಲೆಯನ್ನೊಳ ಗೊಂಡಂತೆ ಅವಳಿ ಜಿಲ್ಲೆಯಾದ್ಯಾಂತ ಉಚಿತವಾಗಿ ಸಂಚರಿಸಲು ಮನವಿ ಮಾಡಿದ ಹಿನ್ನಲೆಯಲ್ಲಿ ನಮ್ಮ ಮನವಿಗೆ ಸ್ಪಂದಿಸಿದ್ದು, ಅ.18 ರಂದು ಪಾಸ್ ವಿತರಣೆಗೆ ಜಗಳೂರು ಪತ್ರಕರ್ತರ ಸಂಘದ ಕಚೇರಿಗೆ ಬಂದು ವಿತರಿಸಲು ಬರಲಿದ್ದು, ಅವರಿಗೆ ನಮ್ಮ ಪತ್ರಕರ್ತರ ಸಂಘದ ವತಿಯಿಂದ ಕೃತಜ್ಞತೆ ಸಲ್ಲಿಸಿದ್ದಾರೆ ಎಂದರು.

ಕರ್ನಾಟಕ ಕಾಯರ್ನಿರತ ಪತ್ರಕರ್ತರ ರಾಜ್ಯ, ಜಿಲ್ಲಾ ಸಮಿತಿಗಳಿಗೆ ನ.9 ಕ್ಕೆ ಚುನಾವಣೆ ನಡೆಯಲಿದ್ದು, ಎಲ್ಲರ ಸೂಚನೆ ಮೇರೆಗೆ ತಾಲೂಕುನಿಂದ ಮೂರು ಮಂದಿ ಜಿಲ್ಲಾ ಮತ್ತು ರಾಷ್ಟ್ರೀಯ ಮಂಡಳಿಗೆ ಆಯ್ಕೆ ಮಾಡಿ ಕಳುಹಿಸಿಕೊಡಲಾಗುವುದು ಎಲ್ಲರೂ ಕೈಜೋಡಿಸಬೇಕೆಂದು ಮನವಿ ಮಾಡಿದರು.

ಸಭೆಯಲ್ಲಿ ಎಲ್ಲಾ ಪತ್ರಕರ್ತರ ಸಲಹೆಗಳನ್ನು ಸಭೆಯಲ್ಲಿ ಕೂಲಂಕಷವಾಗಿ ಚರ್ಚಿಸಿ ಸಭೆಯನ್ನು ಯಶಸ್ವಿಯಾಗಿ ನಡೆಸಲಾಯಿತು.

ಜಿಲ್ಲಾ ಕಾರ್ಯಕಾರಿ ಸಮಿತಿಯ ಸದಸ್ಯ ಸುಭಾನ್ಸಾಬ್, ಪ್ರದಾನ ಕಾರ್ಯದರ್ಶಿ ಲೋಕೇಶ್ ಎಂ.ಐ.ಹೊಳೆ, ಖಜಾಂಚಿ ಕಟ್ಟಿಗೆಹಳ್ಳಿ ಜಗದೀಶ್, ಹಿರಿಯ ಪತ್ರಕರ್ತರಾದ ಎಂ.ಸಿ. ಬಸವರಾಜ್, ಸೋಮನಗೌಡ, ಹೆಚ್.ಆರ್.ಬಸವರಾಜ್, ಶಿವಲಿಂಗಪ್ಪ, ಉಪಾಧ್ಯಕ್ಷ ಸಯಿದ್ ವಾಸೀಂ, ಕಾರ್ಯದರ್ಶಿ ಜೆ.ಓ.ರವಿಕುಮಾರ್, ಸಮಿತಿ ಸದಸ್ಯರುಗಳಾದ ಧನ್ಯಕುಮಾರ್, ಜೆ.ಓ.ಮಂಜಣ್ಣ, ಹೆಚ್.ಬಾಬು ಮರೇನಹಳ್ಳಿ, ಎಂ.ರಾಜಪ್ಪ, ಪತ್ರಕರ್ತರಾದ ಮಾದಿಹಳ್ಳಿ ಮಂಜಪ್ಪ, ಮಂಜಯ್ಯ, ಮಹಾಂತೇಶ್ ಬ್ರಮ್ಮ್, ಸಿದ್ಮ್ಮನಹಳ್ಳಿ ಬಸವರಾಜು, ರಕೀಭ್, ವೇದಮೂರ್ತಿ, ಸೊಕ್ಕೆ ಜಗದೀಶ್, ಮಾರಪ್ಪ, ಡಿ.ಎಂ.ಚೇತನ್ ಕುಮಾರ್, ಜೀವನ್ ಕುಮಾರ್, ಮಲೇಮಾಚಿಕೆರೆ ಸತೀಶ್, ಮಾರುತಿ ಇತರರು ಹಾಜರಿದ್ದರು.