ಸಾರಾಂಶ
ಗುಂಡ್ಲುಪೇಟೆ ಕ್ಷೇತ್ರದ ಶಾಸಕ ಎಚ್.ಎಂ.ಗಣೇಶ್ ಪ್ರಸಾದ್ ಅವರ ತಂದೆ ದಿ.ಎಚ್.ಎಸ್. ಮಹದೇವಪ್ರಸಾದ್‌ರ ಹುಟ್ಟುಹಬ್ಬದ ಅಂಗವಾಗಿ ಕಬ್ಬಹಳ್ಳಿ ಹಾಗೂ ಗುಂಡ್ಲುಪೇಟೆ ಪಟ್ಟಣದಲ್ಲಿ ಮಹದೇವಪ್ರಸಾದ್ ಅಭಿಮಾನಿಗಳು ಉಪಹಾರ ಹಾಗೂ ಹಣ್ಣು ಹಂಪಲ ವಿತರಿಸಿದರು.
ಗುಂಡ್ಲುಪೇಟೆ: ಕ್ಷೇತ್ರದ ಶಾಸಕ ಎಚ್.ಎಂ.ಗಣೇಶ್ ಪ್ರಸಾದ್ ಅವರ ತಂದೆ ದಿ.ಎಚ್.ಎಸ್. ಮಹದೇವಪ್ರಸಾದ್‌ರ ಹುಟ್ಟುಹಬ್ಬದ ಅಂಗವಾಗಿ ಕಬ್ಬಹಳ್ಳಿ ಹಾಗೂ ಪಟ್ಟಣದಲ್ಲಿ ಮಹದೇವಪ್ರಸಾದ್ ಅಭಿಮಾನಿಗಳು ಉಪಹಾರ ಹಾಗೂ ಹಣ್ಣು ಹಂಪಲ ವಿತರಿಸಿದರು.
ತಾಲೂಕಿನ ಕಬ್ಬಹಳ್ಳಿ ಗ್ರಾಮದ ಸಮುದಾಯ ಆರೋಗ್ಯ ಕೇಂದ್ರದಲ್ಲಿ ಗ್ರಾಮದ ಮಹದೇವಪ್ರಸಾದ್ ಅಭಿಮಾನಿಗಳು ತಂದಿದ್ದ ಹಣ್ಣ ಹಂಪಲನ್ನು ಶಾಸಕ ಎಚ್.ಎಂ. ಗಣೇಶ್ ಪ್ರಸಾದ್‌ರ ಮೂಲಕ ಆಸ್ಪತ್ರೆಯಲ್ಲಿ ದಾಖಲಾಗಿದ್ದ ರೋಗಿಗಳಿಗೆ ವಿತರಿಸಿದರು. ಶಾಸಕರೊಂದಿಗೆ ಜಿಪಂ ಮಾಜಿ ಉಪಾಧ್ಯಕ್ಷ ಕೆ.ಎಸ್.ಮಹೇಶ್, ಜಿಲ್ಲಾ ಗ್ಯಾರಂಟಿ ಯೋಜನೆಗಳ ಅನುಷ್ಠಾನ ಸಮಿತಿ ಉಪಾಧ್ಯಕ್ಷ ಕಬ್ಬಹಳ್ಳಿ ದೀಪು, ದಲಿತ ಮುಖಂಡ ಕಬ್ಬಹಳ್ಳಿ ನಂಜುಂಡಸ್ವಾಮಿ, ಆಸ್ಪತ್ರೆಯ ವೈದ್ಯರಾದ ಡಾ. ವೆಂಕಟಸ್ವಾಮಿ,ಡಾ. ವೇಣುಗೋಪಾಲ ಬಿ.ಎಲ್, ಗಿರಿದಾಸ್ ಜಿ,ರವಿ ಎಚ್.ಸಿ ಇದ್ದರು.ಅನ್ನ ಸಂತರ್ಪಣೆ: ಪಟ್ಟಣದ ಎಂಸಿ ಡಿಸಿಸಿ ಬ್ಯಾಂಕ್ ಮುಂದೆ ಮಹದೇವಪ್ರಸಾದ್ ಅಭಿಮಾನಿಗಳು ದಿ.ಎಚ್.ಎಸ್.ಮಹದೇವಪ್ರಸಾದ್ ರ ಹುಟ್ಟುಹುಬ್ಬದ ಅಂಗವಾಗಿ ಅನ್ನ ಸಂತರ್ಪಣೆ ಏರ್ಪಡಿಸಿದ್ದರು. ಮಹದೇವಪ್ರಸಾದ್‌ರ ಭಾವಚಿತ್ರಕ್ಕೆ ಪುಷ್ಪಾರ್ಚನೆ ಸಲ್ಲಿಸಿದ ಬಳಿಕ ನೆರದಿದ್ದ ಸಾರ್ವಜನಿಕರಿಗೆ ಶಾಸಕ ಎಚ್.ಎಂ.ಗಣೇಶ್ ಪ್ರಸಾದ್ ಉಪಹಾರ ಬಡಿಸಿದರು. ಪಟ್ಟಣದ ಪೃಥ್ವಿ ಬುದ್ಧಿಮಾಂದ್ಯ ಮಕ್ಕಳಿಗೂ ಎಚ್.ಎಸ್. ಮಹದೇವಪ್ರಸಾದ್ ಅಭಿಮಾನಿಗಳು ಉಪಹಾರ ವ್ಯವಸ್ಥೆ ಮಾಡಿದ್ದರು. ಈ ಸಮಯದಲ್ಲಿ ಎಚ್.ಎಸ್. ಮಹದೇವಪ್ರಸಾದ್ ಹಾಗೂ ಶಾಸಕ ಎಚ್.ಎಂ.ಗಣೇಶ್ ಪ್ರಸಾದ್ ಅಭಿಮಾನಿಗಳು ಹಾಗೂ ಕಾಂಗ್ರೆಸ್ ಕಾರ್ಯಕರ್ತರು ಹಾಜರಿದ್ದರು.