ಸಾರಾಂಶ
ಯಳಂದೂರು ಪಟ್ಟಣದ ಸರ್ಕಾರಿ ಆಸ್ಪತ್ರೆಯಲ್ಲಿ ಗುರುವಾರ ಬುದ್ಧ ಸಪ್ತಾಹದ ಅಂಗವಾಗಿ ಮಹಾವನ ಎಜುಕೇಷನ್, ಚಾರಿಟಬಲ್ ಟ್ರಸ್ಟ್ ವತಿಯಿಂದ ಒಳರೋಗಿಗಳಿಗೆ ಹಣ್ಣು ಹಂಪಲುಗಳನ್ನು ವಿತರಣೆ ಮಾಡಲಾಯಿತು.
ಯಳಂದೂರು: ಮೇ ೧೨ರ ಸೋಮವಾರ ಬುದ್ಧ ಪೂರ್ಣಿಮೆ ಇರುವುದರಿಂದ ಬೋಧಿ ಸಪ್ತಾಹ ಆಚರಣೆ ಮಾಡಲಾಗುತ್ತಿದೆ. ತನ್ನಿಮಿತ್ತ ಗುರುವಾರ ಪಟ್ಟಣದ ಸರ್ಕಾರಿ ಆಸ್ಪತ್ರೆಯ ಒಳರೋಗಿಗಳಿಗೆ ಮಹಾವನ ಎಜುಕೇಷನ್ ಮತ್ತು ಚಾರಿಟಬಲ್ ಸೊಸೈಟಿ ವತಿಯಿಂದ ಹಣ್ಣುಗಳನ್ನು ವಿತರಣೆ ಮಾಡಲಾಯಿತು.
ಈ ಸಂದರ್ಭದಲ್ಲಿ ಟ್ರಸ್ಟ್‌ನ ಬಂತೆಬುದ್ಧರತ್ನ ಮಾತನಾಡಿ, ಬುದ್ಧ ಪೂರ್ಣಿಮೆ ಮೇ ೧೨ ರಂದು ಇರಲಿದೆ. ಇದರ ಅಂಗವಾಗಿ ಹೊನ್ನೂರು-ಕೆಸ್ತೂರು ಗ್ರಾಮದ ಮಹಾವನ ಬುದ್ಧವಿಹಾರ ಹಾಗೂ ಸೊಸೈಟಿ ವತಿಯಿಂದ ಒಂದು ವಾರ ವಿವಿಧ ಕಾರ್ಯಕ್ರಮಗಳನ್ನು ಆಯೋಜನೆ ಮಾಡಲಾಗಿದೆ. ಮೊದಲ ದಿನ ಪಬ್ಬಜ್ಜ, (ತಾತ್ಕಾಲಿಕಭಿಕ್ಷು ತರಬೇತಿ ಶಿಬಿರ), ಎರಡನೇ ದಿನಸಂತೆಮರಹಳ್ಳಿ ಜ್ಞಾನ ಸಿಂಧು ಆಶ್ರಮದಲ್ಲಿ ಆಹಾರ ದಾನ, ಮೂರನೇ ದಿನ, ತಾಲೂಕು ಆಸ್ಪತ್ರೆಯ ರೋಗಿಗಳಿಗೆ ಹಣ್ಣುಹಂಪಲುಗಳನ್ನು ವಿತರಣೆ ಮಾಡಲಾಗುತ್ತಿದೆ. ನಾಲ್ಕನೆ ದಿನ ಧಮ್ಮ ದೀಪ, ಐದನೇ ದಿನ ಬೌದ್ಧ ಕುಟುಂಬದವರಿಗೆ ಬೌದ್ಧ ಸಂಸ್ಕಾರದ ಬಗ್ಗೆ ಒಂದು ದಿನದ ಶಿಬಿರ, ಆರನೇ ದಿನ ಮಹಾಪರಿತ್ರಾಣ ಪಠಣ ಹಾಗೂ ಧಮ್ಮದೀಪವನ್ನು ಮದ್ದೂರು ಹಾಗೂ ಯಳಂದೂರು ಪಟ್ಟಣದಲ್ಲಿ ಮೆರವಣಿಗೆ ಮಾಡಲಿದ್ದು ಮೇ. ೧೨ ರ ಬುದ್ಧ ಜಯಂತಿ ಮಹೋತ್ಸವ ನಡೆಯಲಿದೆ ಎಂದು ಮಾಹಿತಿ ನೀಡಿದರು. ದಾನಿಗಳಾದ ಮಹೇಂದ್ರ, ಜಯಶೀಲ ಬಿಳಿಗಿರಿರಂಗನಾಥಸ್ವಾಮಿ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಜೆ. ಶ್ರೀನಿವಾಸ್ ವಕೀಲ ಅಂಬಳೆ ಮಹದೇವಸ್ವಾಮಿ, ಹೊನ್ನೂರು ರಾಜೇಂದ್ರ, ಲೋಕೇಶ್, ಕೆಸ್ತೂರು ಶಾಂತರಾಜು, ಪ್ರಮೋದ್, ಮಂಟೇಲಿಂಗಯ್ಯ, ಯಜಮಾನರಾದ ದೊರೆಸ್ವಾಮಿ, ಕುಮಾರ್ ಗ್ರಾಪಂ ಸದಸ್ಯ ರೂಪೇಶ್ ಡಾ. ಶ್ರೀಧರ್, ಡಾ.ಕೃಷ್ಣಪ್ರಸಾದ್, ಡಾ.ಶಶಿರೇಖಾ ಸೇರಿದಂತೆ ಅನೇಕರು ಇದ್ದರು.