ಕೆಂಪನಂಜಮಣಿ, ಮುಮ್ಮಡಿ ಕೃಷ್ಣರಾಜ ಒಡೆಯರ್ ಸ್ಮರಣೆ

| Published : Jul 16 2024, 12:31 AM IST

ಸಾರಾಂಶ

ತನ್ನ ಮೈಮೇಲಿದ್ದ ಒಡವೆ ಮಾರಿ ಅಣೆಕಟ್ಟು ಪೂರ್ಣಗೊಳ್ಳಲು ಸಹಾಯ ಮಾಡಿದ ನಮ್ಮ ಹೆಮ್ಮೆಯ ಮಹಾರಾಣಿ ಕೆಂಪನಂಜಮ್ಮಣಿ ಅವರ ಪುಣ್ಯಸ್ಮರಣೆ ಮಾಡುವುದು ನಮ್ಮೆಲ್ಲರ ಆದ್ಯ ಕರ್ತವ್ಯ

ಕನ್ನಡಪ್ರಭ ವಾರ್ತೆ ಮೈಸೂರು

ಎಸ್. ಪ್ರಕಾಶ್ ಪ್ರಿಯಾದರ್ಶನ್ ಸ್ನೇಹ ಬಳಗದಿಂದ ನಗರದ ಕನಕಗಿರಿ ಸುಯೋಜ ಫಾರಂ ರಸ್ತೆಯಲ್ಲಿರುವ ಭಾರತೀ ವೃದ್ಧಾಶ್ರಮದ ಹಿರಿಯ ನಾಗರಿಕರಿಗೆ ಹಣ್ಣುಗಳನ್ನು ವಿತರಿಸುವ ಮೂಲಕ ಮಹಾರಾಣಿ ಕೆಂಪನಂಜಮಣಿ ಪುಣ್ಯಸ್ಮರಣೆ ಹಾಗೂ ಮಹಾರಾಜ ಮುಮ್ಮಡಿ ಕೃಷ್ಣರಾಜ ಒಡೆಯರ್ ಅವರ ಜನ್ಮದಿನದ ಸ್ಮರಣೆ ಮಾಡಲಾಯಿತು.

ನಗರ ಜೆಡಿಎಸ್ ಕಾರ್ಯಾಧ್ಯಕ್ಷ ಪ್ರಕಾಶ್ ಪ್ರಿಯಾದರ್ಶನ್ ಮಾತನಾಡಿ, ಮೈಸೂರಿನ ಜನತೆಗಾಗಿ ರೈತರಿಗಾಗಿ ಕೆ.ಆರ್‌.ಎಸ್‌. ಅಣೆಕಟ್ಟು ಕಟ್ಟುವ ಸಂದರ್ಭದಲ್ಲಿ ಹಣಕಾಸಿನ ಕೊರತೆಯಾದ ಸಂದರ್ಭದಲ್ಲಿ ತನ್ನ ಮೈಮೇಲಿದ್ದ ಒಡವೆ ಮಾರಿ ಅಣೆಕಟ್ಟು ಪೂರ್ಣಗೊಳ್ಳಲು ಸಹಾಯ ಮಾಡಿದ ನಮ್ಮ ಹೆಮ್ಮೆಯ ಮಹಾರಾಣಿ ಕೆಂಪನಂಜಮ್ಮಣಿ ಅವರ ಪುಣ್ಯಸ್ಮರಣೆ ಮಾಡುವುದು ನಮ್ಮೆಲ್ಲರ ಆದ್ಯ ಕರ್ತವ್ಯ ಹಾಗೂ ಮಹಾರಾಜ ಮುಮ್ಮಡಿ ಕೃಷ್ಣರಾಜ ಒಡೆಯರ್ ಅವರ ಜನ್ಮದಿನದ ಸ್ಮರಣೆಯನ್ನು ಮಾಡೋಣ ಇವರ ಕೊಡುಗೆ ಅಪಾರ ಸಾಹಿತ್ಯ ಕಲೆ, ಸಂಗೀತ, ವಾಸ್ತುಶಿಲ್ಪಕ್ಕೆ ಅಪಾರ ಕೊಡುಗೆ ನೀಡಿದ ಮೈಸೂರು ಒಡೆಯರ್ ಅವರನ್ನು ನೆನಪಿಸಿಕೊಳ್ಳುವುದು ನಮ್ಮೆಲ್ಲರ ಪುಣ್ಯ ಈಗಿನ ಯುವ ಪೀಳಿಗೆಗೆ ಇತಿಹಾಸವನ್ನು ತಿಳಿಸೋಣ ಎಂದು ಹೇಳಿದರು.

ಭಾರತಿ ವೃದ್ಧಾಶ್ರಮದ ಮುಖ್ಯಸ್ಥ ನಾಗೇಶ್, ಕರ್ನಾಟಕ ಮಹಿಳಾ ರತ್ನ ಪ್ರಶಸ್ತಿ ಪುರಸ್ಕೃತರು ಸಮಾಜ ಸೇವಕಿ ವಿದ್ಯಾ, ಅರಿವು ಸಂಸ್ಥೆಯ ಅಧ್ಯಕ್ಷ ಶ್ರೀಕಾಂತ್ ಕಶ್ಯಪ್, ಪತ್ರಿಕಾ ವಿತರಕರ ಕ್ಷೇಮಾಭಿವೃದ್ಧಿ ಸಂಘದ ಅಧ್ಯಕ್ಷ ಹೋಮದೇವ, ಭುವನೇಶ್ವರಿ ಸೇವಾ ಟ್ರಸ್ಟ್ ಅಧ್ಯಕ್ಷ ನಾಗಶ್ರೀ ಸುಚಿಂದ್ರ, ಸುಚಿಂದ್ರ, ಸುಬ್ರಮಣಿ, ಪುರುಷೋತ್ತಮ್, ಛಾಯಾ, ಯಶವಂತ್ ಕುಮಾರ್, ಮಹದೇವ್, ಮಹೇಶ್, ಚಂದ್ರಶೇಖರ್, ಎಸ್‌.ಪಿ. ಅಕ್ಷಯ ಪ್ರಿಯಾದರ್ಶನ್, ಸ್ವಾಮಿ, ಹರ್ಷಿತ್ ಇದ್ದರು.