ನಂಜರಾಯಪಟ್ಟಣ ಸಹಕಾರ ಸಂಘದ ಸಿಬ್ಬಂದಿ, ಪದಾಧಿಕಾರಿಗಳಿಗೆ ವಿಮೆ ಕಾರ್ಡ್ ವಿತರಣೆ

| Published : Feb 27 2025, 12:32 AM IST

ನಂಜರಾಯಪಟ್ಟಣ ಸಹಕಾರ ಸಂಘದ ಸಿಬ್ಬಂದಿ, ಪದಾಧಿಕಾರಿಗಳಿಗೆ ವಿಮೆ ಕಾರ್ಡ್ ವಿತರಣೆ
Share this Article
  • FB
  • TW
  • Linkdin
  • Email

ಸಾರಾಂಶ

ನಂಜರಾಯಪಟ್ಟಣ ಕೃಷಿ ಪತ್ತಿನ ಸಹಕಾರ ಸಂಘದ ನಿರ್ದೇಶಕರು ಹಾಗೂ ಸಿಬ್ಬಂದಿಗೆ ಆರೋಗ್ಯ ಕಾರ್ಡ್‌ ವಿತರಿಸುವ ಕಾರ್ಯಕ್ರಮ ಸಂಘದ ಸಭಾಂಗಣದಲ್ಲಿ ನಡೆಯಿತು.

ಮಡಿಕೇರಿ: ನಂಜರಾಯಪಟ್ಟಣ ಕೃಷಿ ಪತ್ತಿನ ಸಹಕಾರ ಸಂಘದ ನಿರ್ದೇಶಕರು ಹಾಗು ಸಿಬ್ಬಂದಿಗೆ ಆರೋಗ್ಯ ವಿಮೆ ಕಾರ್ಡ್ ವಿತರಿಸುವ ಕಾರ್ಯಕ್ರಮ ಸಂಘದ ಸಭಾಂಗಣದಲ್ಲಿ ನಡೆಯಿತು.

ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದ ಸಂಘದ ಅಧ್ಯಕ್ಷ ಬಿ ಸಿ ಮುರಳಿ ಮಾದಯ್ಯ, ಎಲ್ಲರಿಗೂ ಆರೋಗ್ಯ ಬಹಳ ಮುಖ್ಯವಾದದ್ದು, ಸಂಘದ ವತಿಯಿಂದ ಸಂಘದ ಸಿಬ್ಬಂದಿ ಹಾಗೂ ನಿರ್ದೇಶಕರಿಗೆ 2 ಲಕ್ಷ ಮೊತ್ತದ ಆರೋಗ್ಯ ವಿಮೆ ಮಾಡಿಸಲಾಗಿದ್ದು, ಸಂಘದ ಸಿಬ್ಬಂದಿ ಹಾಗು ನಿರ್ದೇಶಕರಿಗೆ ಆರೋಗ್ಯ ಸಮಸ್ಯೆ ಉಂಟಾದಲ್ಲಿ 2 ಲಕ್ಷ ತನಕ ಖಾಸಗಿ ಆಸ್ಪತ್ರೆಯಲ್ಲಿ ಉಚಿತವಾಗಿ ಚಿಕಿತ್ಸೆ ಪಡೆದುಕೊಳ್ಳಬಹುದಾಗಿದೆ. ಆದುದರಿಂದ ಎಲ್ಲರೂ ಇದರ ಸದುಪಯೋಗ ಪಡೆದುಕೊಳ್ಳಬೇಕು ಎಂದು ಮನವಿ ಮಾಡಿದರು.

ಕಾರ್ಯಕ್ರಮದಲ್ಲಿ ಸಂಘದ ಉಪಾಧ್ಯಕ್ಷೆ ಅನಿತಾ ಎಸ್ ಬಿ, ನಿರ್ದೇಶಕರಾದ ಡಿ ಎಲ್ ಮಹೇಶ್ಚಂದ್ರ, ಕಾಶಿ ಬಿ ಎನ್, ಧನಪಲ್ ಬಿ ಎಸ್, ದಾದಪ್ಪ ಕೆ ಡಿ, ಕಾರ್ಯಪ್ಪ ಎಸ್ ಎಸ್, ಪಂಚಾಕ್ಷರಿ ಹಾಗು ಉದಯಕುಮಾರ ಉಪಸ್ಥಿತರಿದ್ದರು.

ಸಂಘದ ಪ್ರಭಾರ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಲತೀಶ್ ರೈ ಬಿ ವಿ ಕಾರ್ಯಕ್ರಮ ನಿರೂಪಿಸಿ ವಂದಿಸಿದರು.