ಪತ್ರಿಕಾ ವಿತರಕರಿಗೆ ಜರ್ಕಿನ್‌ ವಿತರಣೆ

| Published : Jan 03 2025, 12:30 AM IST

ಸಾರಾಂಶ

ಪತ್ರಿಕಾ ವಿತರಣೆ ಮಾಡುತ್ತಾ ಶಿಕ್ಷಣವನ್ನೂ ಪಡೆದ ಎಷ್ಟೋ ಮಂದಿ ಕೆಎಎಸ್, ಐಎಎಸ್‌ನಂತಹ ಉನ್ನತ ಹುದ್ದೆಯಲ್ಲಿ ಇದ್ದಾರೆ. ಅಂತಹ ವ್ಯಕ್ತಿಯಾಗಿ ರೂಪುಗೊಳ್ಳಬೇಕು. ಕನ್ನಡದಲ್ಲಿ ಪತ್ರಿಕೋದ್ಯಮ ಬೆಳೆದಂತೆ ಉದ್ಯೋಗ ಅವಕಾಶ ಸೃಷ್ಟಿಯಾಗುತ್ತದೆ ಅದರಲ್ಲೂ ಪತ್ರಿಕೆ ವಿತರಣೆ ಕೆಲಸದಿಂದ ಅನೇಕ ಬಡಕುಟುಂಬ ಮಕ್ಕಳಿಗೆ ಉದ್ಯೋಗ ಅವಕಾಶ ದೊರೆಯುತ್ತಿದೆ.

ಕನ್ನಡಪ್ರಭ ವಾರ್ತೆ ಗೌರಿಬಿದನೂರು

ಮುಂಜಾನೆ ಬಿಸಿ-ಬಿಸಿ ಚಹಾ ಸೇವಿಸುವ ಮುನ್ನವೇ ಬಹುತೇಕ ಓದುಗರಿಗೆ ದಿನಪತ್ರಿಕೆ ತಲುಪಿಸುವುದು ಸುಲಭದ ಕೆಲಸವಲ್ಲದಿದ್ದರೂ,ಪತ್ರಿಕೆ ಮುಟ್ಟಿಸುವ ಕಾಯಕವನ್ನು ಚಾಚೂ ತಪ್ಪದೆ ನಡೆಸುತ್ತಿರುವ ವರ್ಗವೆಂದರೆ ಅದು ಪತ್ರಿಕಾ ವಿತರಕರ ವರ್ಗ ಎಂದು ತಹಸೀಲ್ದಾರ್‌ ಮಹೇಶ್.ಎಸ್.ಪತ್ರಿ ಪ್ರಶಂಸಿಸಿದರು.ನಗರದ ತಾ.ಪಂ ಆವರಣದಲ್ಲಿ ಗುರುವಾರ ನಗರಸಭೆ ಮತ್ತು ತಾಲೂಕು ಆಡಳಿದ ಸಹಯೋಗದೊಂದಿಗೆ ಸುಮಾರು 30ಕ್ಕೂಹೆಚ್ಚು ದಿನಪತ್ರಿಕೆ ವಿತರಕರಿಗೆ ಗುಣಮಟ್ಟದ ಜರ್ಕಿನ್‌ಗಳನ್ನು ವಿತರಣೆ ಮಾಡಿ ಮಾತನಾಡಿದರು.ಈ ವೇಳೆ ಮಾತನಾಡಿದ ತಹಸೀಲ್ದಾರ್, ದಿವಂಗತ ಮಾಜಿ ರಾಷ್ಟ್ರಪತಿ ಅಬ್ದುಲ್ ಕಲಂ ವಿದ್ಯಾಭ್ಯಾಸದ ವೇಳೆ ಮನೆಮನೆಗೂ ನಿತ್ಯ ಪತ್ರಿಕೆಗಳನ್ನು ವಿತರಿಸುವ ಕೆಲಸ ಮಾಡುತ್ತಿದ್ದರು. ಯಾವಾಗಲೂ ಛಲ ಮತ್ತು ವಿಶ್ವಾಸದಿಂದ, ಶ್ರದ್ದಾಭಕ್ತಿಯಿಂದ ಕೆಲಸ ಮಾಡಿದರೆ ಉನ್ನತ ಸ್ಥಾನಕ್ಕೆ ಏರಲು ಯಾವುದು ಅಡ್ಡಿ ಬರುವುದಿಲ್ಲ. ‘ದುಡಿಮೆ ಜತೆ ಕಲಿಕೆ’ ಎಂಬಂತೆ ತಾವುಗಳು ಕೆಲಸ ಮಾಡುತ್ತಿದ್ದೀರಿ ಎಂದರು.

ಪತ್ರಿಕಾ ವಿತರಣೆ ಮಾಡುತ್ತಾ ಶಿಕ್ಷಣವನ್ನೂ ಪಡೆದ ಎಷ್ಟೋ ಮಂದಿ ಕೆಎಎಸ್, ಐಎಎಸ್‌ನಂತಹ ಉನ್ನತ ಹುದ್ದೆಯಲ್ಲಿ ಇದ್ದಾರೆ. ನೀವು ಸಹ ಇಂತಹ ವ್ಯಕ್ತಿಯಾಗಿ ರೂಪುಗೊಳ್ಳಬೇಕು. ಕನ್ನಡದಲ್ಲಿ ಪತ್ರಿಕೋದ್ಯಮ ಬೆಳೆದಂತೆ ಉದ್ಯೋಗ ಅವಕಾಶ ಸೃಷ್ಟಿಯಾಗುತ್ತದೆ ಅದರಲ್ಲೂ ಪತ್ರಿಕೆ ವಿತರಣೆ ಕೆಲಸದಿಂದ ಅನೇಕ ಬಡಕುಟುಂಬ ಮಕ್ಕಳಿಗೆ ಉದ್ಯೋಗ ಅವಕಾಶ ದೊರೆಯುತ್ತಿದೆ ಎಂದು ತಿಳಿಸಿದರು. ಪತ್ರಿಕಾ ವಿತರಕರಾದ ಕೆ.ಪಿ.ಸಮೀರಚಾರಿ ಮಾತನಾಡಿ, ಪತ್ರಿಕಾವಿತರಕರ ಸಮಸ್ಯೆಗಳ ಬಗ್ಗೆ ತಹಸೀಲ್ದಾ‌ರ್ ಗಮನಕ್ಕೆ ತಂದಾಗ ಶೀಘ್ರದಲ್ಲೇ ಸ್ಪಂದಿಸುವುದಾಗಿ ಭರವಸೆ ನೀಡಿದ್ದರು. ಅದರಂತೆ ಮಳೆ ಮತ್ತು ಚಳಿಯ ರಕ್ಷಣೆಗಾಗಿ ರೈನ್ ಕೋಟ್ ಗಳನ್ನು ವಿತರಿಸಿದ್ದಾರೆ. ಸಮಾಜದಲ್ಲಿ ಪತ್ರಿಕಾ ವಿತರಕರಿಗೂ ಸೂಕ್ತ ಸ್ಥಾನಮಾನ ದೊರೆಯಬೇಕು ಎಂಬುದೇ ನಮ್ಮೆಲ್ಲರ ಆಶಯವಾಗಿದೆ ಎಂದು ಹೇಳಿದರು.ಈ ವೇಳೆ ಪತ್ರಿಕಾ ವಿತರಕರಾದ ಎಸ್.ವಿ.ಅರುಣ್ ಕುಮಾರ್, ಕೆ.ಎನ್.ನರಸಿಂಹಮೂರ್ತಿ, ಸಮೀರ ಚಾರಿ ಕೆ.ಪಿ, ರವಿಕುಮಾರ್, ಜಿ.ಎನ್. ಎಸ್.ವಿ.ಶ್ರೀನಿವಾಸ್,ಅಶ್ವತ್ಥನಾರಾಯಣ, ಮುಕುಂದ, ಶ್ರೀನಿವಾಸ್, ಧನಂಜಯ, ಪ್ರದೀಪ್, ಪುನೀತ್ ಸೇರಿದಂತೆ ಇತರರು ಭಾಗವಹಿಸಿದ್ದರು.