ವಿದ್ಯಾರ್ಥಿಗಳು ಶಿಕ್ಷಣದೊಂದಿಗೆ ಉತ್ತಮ ಸಂಸ್ಕಾರವನ್ನು ರೂಢಿಸಿಕೊಂಡರೆ ಮಾತ್ರ ಸ್ವಾಸ್ಥ್ಯ ಸಮಾಜ ಕಟ್ಟಲು ಸಾಧ್ಯ, ವಿದ್ಯಾದಾನಕ್ಕಾಗಿ ತನ್ನ ಸರ್ವಸ್ವವನ್ನೂ ಸಮಾಜಕ್ಕೆ ಕೊಡುಗೆಯಾಗಿ ನೀಡಿದ ಕಿದಿಯೂರು ವೆಂಕಟರಾವ್ ಅವರ ಆದರ್ಶ ಎಲ್ಲರಿಗೂ ಮಾದರಿ. ಪ್ರತೀವರ್ಷ ಸುಮಾರು 5 ಲಕ್ಷ ರು.ಗಳನ್ನು ತಮ್ಮ ಟ್ರಸ್ಟ್ ಮೂಲಕ ಶಿಕ್ಷಣ ಹಾಗೂ ಆರೋಗ್ಯಕ್ಕಾಗಿ ನೀಡುವ ಸಹಾಯಧನವು ಹಲವಾರು ವಿದ್ಯಾರ್ಥಿಗಳ ಶಿಕ್ಷಣ ಹಾಗೂ ಬಡಕುಟುಂಬಗಳ ಆರೋಗ್ಯ ರಕ್ಷಣೆಗೆ ಸಾಧ್ಯವಾಗಿದೆ. ಈ ಟ್ರಸ್ಟಿನ ಚಟುವಟಿಕೆಗಳು ಶ್ಲಾಘನೀಯ ಎಂದು ಕರ್ನಾಟಕ ಬ್ಯಾಂಕ್ ನಿವೃತ್ತ ಎಂಜಿಎಂ ವೆಂಕಟರಾಜ ನಗರಿ ಮಂಗಳೂರು ಹೇಳಿದರು.
ಉಡುಪಿ : ವಿದ್ಯಾರ್ಥಿಗಳು ಶಿಕ್ಷಣದೊಂದಿಗೆ ಉತ್ತಮ ಸಂಸ್ಕಾರವನ್ನು ರೂಢಿಸಿಕೊಂಡರೆ ಮಾತ್ರ ಸ್ವಾಸ್ಥ್ಯ ಸಮಾಜ ಕಟ್ಟಲು ಸಾಧ್ಯ, ವಿದ್ಯಾದಾನಕ್ಕಾಗಿ ತನ್ನ ಸರ್ವಸ್ವವನ್ನೂ ಸಮಾಜಕ್ಕೆ ಕೊಡುಗೆಯಾಗಿ ನೀಡಿದ ಕಿದಿಯೂರು ವೆಂಕಟರಾವ್ ಅವರ ಆದರ್ಶ ಎಲ್ಲರಿಗೂ ಮಾದರಿ. ಪ್ರತೀವರ್ಷ ಸುಮಾರು 5 ಲಕ್ಷ ರು.ಗಳನ್ನು ತಮ್ಮ ಟ್ರಸ್ಟ್ ಮೂಲಕ ಶಿಕ್ಷಣ ಹಾಗೂ ಆರೋಗ್ಯಕ್ಕಾಗಿ ನೀಡುವ ಸಹಾಯಧನವು ಹಲವಾರು ವಿದ್ಯಾರ್ಥಿಗಳ ಶಿಕ್ಷಣ ಹಾಗೂ ಬಡಕುಟುಂಬಗಳ ಆರೋಗ್ಯ ರಕ್ಷಣೆಗೆ ಸಾಧ್ಯವಾಗಿದೆ. ಈ ಟ್ರಸ್ಟಿನ ಚಟುವಟಿಕೆಗಳು ಶ್ಲಾಘನೀಯ ಎಂದು ಕರ್ನಾಟಕ ಬ್ಯಾಂಕ್ ನಿವೃತ್ತ ಎಂಜಿಎಂ ವೆಂಕಟರಾಜ ನಗರಿ ಮಂಗಳೂರು ಹೇಳಿದರು.
ಅವರು ಇಲ್ಲಿನ ಕಿದಿಯೂರು ವೆಂಕಟರಾವ್ ಸ್ಥಾಪಿಸಿದ ಕಿದಿಯೂರು ನಾಗಲಕ್ಷ್ಮೀ ಶ್ರೀನಿವಾಸ್ ಪಬ್ಲಿಕ್ ಚಾರಿಟೆಬಲ್ ಟ್ರಸ್ಟ್ ವತಿಯಿಂದ ಅವರ ಸಂಸ್ಮರಣೆ ದಿನದಂದು ಕೋರ್ಟ್ ಮುಂಭಾಗದಲ್ಲಿರುವ ಟ್ರಸ್ಟ್ ನ ಸಭಾಂಗಣದಲ್ಲಿ ಹಮ್ಮಿಕೊಂಡ ಸಹಾಯಧನ ವಿತರಣಾ ಕಾರ್ಯಕ್ರಮದ ಮುಖ್ಯ ಅತಿಥಿಯಾಗಿ ಮಾತನಾಡಿದರು. ಟ್ರಸ್ಟಿನ ಅಧ್ಯಕ್ಷರಾದ ಮಂಗಳೂರಿನ ಪ್ರಖ್ಯಾತ ನ್ಯಾಯವಾದಿಗಳಾದ ಪಿ .ರಂಜನ್ ರಾವ್ ಅವರು ಮಾತನಾಡುತ್ತಾ ಇಂದಿನ ಕಾಲಘಟ್ಟದಲ್ಲಿ ಸಂಬಂಧಗಳು ಮೌಲ್ಯಗಳನ್ನು ಕಳೆದುಕೊಳ್ಳುತ್ತಿವೆ. ಮಕ್ಕಳಿಗೆ ಹೆತ್ತವರ ಮೌಲ್ಯ ಅರಿವಾಗಬೇಕು. ವಿದ್ಯಾರ್ಥಿಗಳು ತಮ್ಮ ವಿದ್ಯಾರ್ಜನೆ ಮುಗಿದು ಉದ್ಯೋಗ ಪಡೆದ ನಂತರ ತಮ್ಮ ಪೋಷಕರ ಬದುಕನ್ನು ಹಸನು ಗೊಳಿಸಬೇಕು. ವೆಂಕಟರಾವ್ ಅವರು ಸ್ಥಾಪಿಸಿದ ಟ್ರಸ್ಟಿನ ಉದ್ದೇಶವನ್ನು ಈಡೇರಿಸುವುದೇ ನಮ್ಮ ಉದ್ದೇಶ ಎಂದರು.ಟ್ರಸ್ಟಿನ ಉಪಾಧ್ಯಕ್ಷ ಕೆ. ನಾಗೇಶ್ ಭಟ್. ಯು. ಕೆ. ರಾಘವೇಂದ್ರ ರಾವ್, ಕೆ. ರಘುಪತಿ ರಾವ್, ಜಯಶ್ರೀ ಆರ್. ಭಟ್, ಮಾಧವ ರಾವ್ ಕೆ., ಗುರುರಾಜ್ ರಾವ್ ಕೆ., ನಾಗರಾಜ ರಾವ್ ಉಪಸ್ಥಿತರಿದ್ದರು.ಕೋಶಾಧಿಕಾರಿಗಳಾದ ಕೆ. ಕೃಷ್ಣಮೂರ್ತಿ ರಾವ್ ಸ್ವಾಗತಿಸಿ, ಮುರಳಿ ಕಡೆಕಾರ್ ಪ್ರಸ್ತಾವನೆಗೆಗೈದರು, ಸುಬ್ರಮಣ್ಯ ಬಾಸ್ರಿ ವಂದಿಸಿದರು. ಜೊತೆ ಕಾರ್ಯದರ್ಶಿ ಭಾಸ್ಕರ ರಾವ್ ಕಿದಿಯೂರು ಕಾರ್ಯಕ್ರಮ ನಿರ್ವಹಿಸಿದರು. ˌ