ಎಜುಕಾರುಣ್ಯ ಎಜುಕೇಷನಲ್ ಮತ್ತು ಚಾರಿಟೇಬಲ್ ಟ್ರಸ್ಟ್ ವತಿಯಿಂದ ನೀಡಲಾಗುವ ಕೀರ್ತಿಶೇಷ ವಿಶ್ವನಾಥ ಆಳ್ವ ಶ್ರೀ ದುರ್ಗಾಪ್ರಸಾದ್ ಶಾಂತಿನಗರ ಸ್ಮರಣಾರ್ಥ ದತ್ತಿನಿಧಿ ಪುರಸ್ಕಾರ ಸಮಾರಂಭ ಮಂಗಳವಾರ ಶಾಂತಿನಗರ ಸಾರ್ವಜನಿಕ ಶ್ರೀ ಗಣೇಶೋತ್ಸವ ಸಮಿತಿಯ 34ನೇ ವರ್ಷದಲ್ಲಿ ಕಾರ್ಯಕ್ರಮದಲ್ಲಿ ನಡೆಯಿತು.

ಮಂಗಳೂರು : ಎಜುಕಾರುಣ್ಯ ಎಜುಕೇಷನಲ್ ಮತ್ತು ಚಾರಿಟೇಬಲ್ ಟ್ರಸ್ಟ್ ವತಿಯಿಂದ ನೀಡಲಾಗುವ ಕೀರ್ತಿಶೇಷ ವಿಶ್ವನಾಥ ಆಳ್ವ ಶ್ರೀ ದುರ್ಗಾಪ್ರಸಾದ್ ಶಾಂತಿನಗರ ಸ್ಮರಣಾರ್ಥ ದತ್ತಿನಿಧಿ ಪುರಸ್ಕಾರ ಸಮಾರಂಭ ಮಂಗಳವಾರ ಶಾಂತಿನಗರ ಸಾರ್ವಜನಿಕ ಶ್ರೀ ಗಣೇಶೋತ್ಸವ ಸಮಿತಿಯ 34ನೇ ವರ್ಷದಲ್ಲಿ ಕಾರ್ಯಕ್ರಮದಲ್ಲಿ ನಡೆಯಿತು.ದ್ವಿತೀಯ ಪಿಯುಸಿ ವಿಜ್ಞಾನ ವಿಭಾಗದಲ್ಲಿ ಶೇ.94.50 ಅಂಕ ಗಳಿಸಿ ಪ್ರಸ್ತುತ ಸಂತ ಆಗ್ನೆಸ್ ಕಾಲೇಜಿನಲ್ಲಿ ಬಿ.ಎಸ್ಸಿ ಕಲಿಯುತ್ತಿರುವ ಭೂಮಿಕಾ ಅವರಿಗೆ ದತ್ತಿನಿಧಿ ನೀಡಿ ಸನ್ಮಾನಿಸಿ ಗೌರವಿಸಲಾಯಿತು. ಎಜುಕಾರುಣ್ಯ ಟ್ರಸ್ಟ್‌ನ ವಿದ್ಯಾರ್ಥಿನಿ ಮೋಕ್ಷಾ ಪೂಜಾರಿ ಅವರಿಗೆ ನಿರ್ಮಾಣವಾಗುತ್ತಿರುವ ನೂತನ ಮನೆಗೆ ಸಹಾಯಧನ ನೀಡಲಾಯಿತು. ಇಬ್ಬರು ವಿದ್ಯಾರ್ಥಿಗಳಿಗೆ ಒಟ್ಟು 50,000 ರು.ಕೊಡುಗೆ ನೀಡಲಾಯಿತು. ಗಣೇಶೋತ್ಸವ ಪ್ರಯುಕ್ತ ಹಮ್ಮಿಕೊಂಡ ಭಕ್ತಿಗೀತೆ ಮತ್ತು ಚಿತ್ರಕಲಾ ಸ್ಪರ್ಧೆಯಲ್ಲಿ ವಿಜೇತರಾದವರಿಗೆ ಬಹುಮಾನ ವಿತರಿಸಲಾಯಿತು. ಸ್ಪರ್ಧೆಯ ತೀರ್ಪುಗಾರರನ್ನು ಗೌರವಿಸಲಾಯಿತು. ಕೀರ್ತಿಶೇಷ ವಿಶ್ವನಾಥ ಆಳ್ವ ದತ್ತಿನಿಧಿಯ ಪ್ರಾಯೋಜಕರಾದ ಸುಧೀರ್ ಆಳ್ವ, ಅಮಿತಾ ಎಸ್.ಆಳ್ವ, ಎಜುಕಾರುಣ್ಯ ಟ್ರಸ್ಟ್ ಪ್ರಧಾನ ಕಾರ್ಯದರ್ಶಿ ರಮೇಶ್ ಶೆಟ್ಟಿ ವಿವೇಕನಗರ, ಶಾಂತಿನಗರ ಸಾರ್ವಜನಿಕ ಶ್ರೀ ಗಣೇಶೋತ್ಸವ ಸಮಿತಿಯ ಅಧ್ಯಕ್ಷ ನವೀನ್ ಮಲ್ಲರಬೆಟ್ಟು, ಪ್ರಧಾನ ಕಾರ್ಯದರ್ಶಿ ಶುಭಾ ಶೆಟ್ಟಿ, ಕೋಶಾಧಿಕಾರಿ ಮನೋಜ್ ಗಾಂಧಿನಗರ, ಗೌರವಾಧ್ಯಕ್ಷ ಲೋಕನಾಥ ಆಳ್ವ, ಕಾರ್ಯಾಧ್ಯಕ್ಷ ವಿನಯ ಕುಮಾರ್, ಗೌರವ ಸಲಹೆಗಾರ ಜಗದೀಶ್ ಮುರ ಇದ್ದರು.

ಎಜುಕಾರುಣ್ಯ ಚಾರಿಟೇಬಲ್ ಟ್ರಸ್ಟ್ ಅಧ್ಯಕ್ಷ ಮೋಹನದಾಸ್ ಮರಕಡ ನಿರೂಪಿಸಿ, ವಂದಿಸಿದರು.ಗಣೇಶೋತ್ಸವ ಅಂಗವಾಗಿ ಭಜನೆ, ಶಾಸ್ತ್ರೀಯ ನೃತ್ಯ, ನಾಟಕ ಹಾಗೂ ಯಕ್ಷ ದ್ರಶ್ಯ ರೂಪಕ ಪ್ರಸ್ತುತಗೊಂಡಿತು.