ಗ್ರಾಮ ಆಡಳಿತಾಧಿಕಾರಿಗಳಿಗೆ ಲ್ಯಾಪ್‌ಟಾಪ್ ವಿತರಣೆ

| Published : Jun 13 2025, 03:56 AM IST

ಸಾರಾಂಶ

ಕಂದಾಯ ಇಲಾಖೆ ಡಿಜಿಟಲೀಕರಣಗೊಳ್ಳುತ್ತಿರುವುದರಿಂದ ಮುಂದಿನ ದಿನಗಳಲ್ಲಿ ರೈತರು ವಿನಾಕಾರಣ ಕಂದಾಯ ಇಲಾಖೆ ಅಲೆಯುವುದು ತಪ್ಪಲಿದೆ ಎಂದು ಶಾಸಕ ಸಿಮೆಂಟ್ ಮಂಜು ಹೇಳಿದರು. ಕಂದಾಯ ಇಲಾಖೆಯ ಗ್ರಾಮ ಆಡಳಿತಾಧಿಕಾರಿಗಳಿಗೆ ಲ್ಯಾಪ್‌ಟಾಪ್ ವಿತರಿಸಿ ಮಾತನಾಡಿ, ಈಗಾಗಲೇ ದಾಖಲೆಗಳ ಡಿಜಿಟಲೀಕರಣ ವೇಗವಾಗಿ ನಡೆಯುತ್ತಿದ್ದು ಇನ್ನು ಕೆಲವೇ ದಿನಗಳಲ್ಲಿ ಈ ಪ್ರಕ್ರಿಯೆ ಪೂರ್ಣಗೊಳ್ಳುವುದರಿಂದ ಯಾವುದೇ ದಾಖಲೆಗಳನ್ನು ತಕ್ಷಣವೇ ಪಡೆಯಬಹುದಾಗಿದೆ. ಗ್ರಾಮ ಆಡಳಿತಾಧಿಕಾರಿಗಳಿಗೆ ಲ್ಯಾಪ್‌ಟಾಪ್ ಉಪಯೋಗಿಸುವುದರಿಂದ ದಾಖಲೆಗಳಿಗಾಗಿ ಅಲೆಯುವುದು ತಪ್ಪಲಿದೆ. ಅಲ್ಲದೆ ದಾಖಲೆಗಳ ನಾಶ, ತಿದ್ದುವಂತಹ ಯಾವುದೇ ಪ್ರಕ್ರಿಯೆಗೂ ಡಿಜಿಟಲೀಕರಣ ಅವಕಾಶ ನೀಡುವುದಿಲ್ಲ ಎಂದರು.

ಸಕಲೇಶಪುರ: ಕಂದಾಯ ಇಲಾಖೆ ಡಿಜಿಟಲೀಕರಣಗೊಳ್ಳುತ್ತಿರುವುದರಿಂದ ಮುಂದಿನ ದಿನಗಳಲ್ಲಿ ರೈತರು ವಿನಾಕಾರಣ ಕಂದಾಯ ಇಲಾಖೆ ಅಲೆಯುವುದು ತಪ್ಪಲಿದೆ ಎಂದು ಶಾಸಕ ಸಿಮೆಂಟ್ ಮಂಜು ಹೇಳಿದರು.

ಪಟ್ಟಣದ ಮಿನಿವಿಧಾನಸೌಧದಲ್ಲಿ ಹಮ್ಮಿಕೊಳ್ಳಲಾಗಿದ್ದ ಕಂದಾಯ ಇಲಾಖೆಯ ಗ್ರಾಮ ಆಡಳಿತಾಧಿಕಾರಿಗಳಿಗೆ ಲ್ಯಾಪ್‌ಟಾಪ್ ವಿತರಿಸಿ ಮಾತನಾಡಿ, ಈಗಾಗಲೇ ದಾಖಲೆಗಳ ಡಿಜಿಟಲೀಕರಣ ವೇಗವಾಗಿ ನಡೆಯುತ್ತಿದ್ದು ಇನ್ನು ಕೆಲವೇ ದಿನಗಳಲ್ಲಿ ಈ ಪ್ರಕ್ರಿಯೆ ಪೂರ್ಣಗೊಳ್ಳುವುದರಿಂದ ಯಾವುದೇ ದಾಖಲೆಗಳನ್ನು ತಕ್ಷಣವೇ ಪಡೆಯಬಹುದಾಗಿದೆ. ಗ್ರಾಮ ಆಡಳಿತಾಧಿಕಾರಿಗಳಿಗೆ ಲ್ಯಾಪ್‌ಟಾಪ್ ಉಪಯೋಗಿಸುವುದರಿಂದ ದಾಖಲೆಗಳಿಗಾಗಿ ಅಲೆಯುವುದು ತಪ್ಪಲಿದೆ. ಅಲ್ಲದೆ ದಾಖಲೆಗಳ ನಾಶ, ತಿದ್ದುವಂತಹ ಯಾವುದೇ ಪ್ರಕ್ರಿಯೆಗೂ ಡಿಜಿಟಲೀಕರಣ ಅವಕಾಶ ನೀಡುವುದಿಲ್ಲ ಎಂದರು.

ಮುಂದಿನ ದಿನಗಳಲ್ಲಿ ಕಾಗದ ರಹಿತ ಕಂದಾಯ ಇಲಾಖೆ ಆಡಳಿತ ಮೂಡಿ ಬರುವ ದಿನಗಳು ದೂರವಿಲ್ಲ. ಈ ತಂತ್ರಜ್ಞಾನಕ್ಕೆ ಜನರು ಹೊಂದಿಕೊಳ್ಳುವ ಅಗತ್ಯವಿದೆ ಎಂದರು. ಈ ವೇಳೆ ಉಪವಿಭಾಗಾಧಿಕಾರಿ ಡಾ. ಶೃತಿ, ತಹಸೀಲ್ದಾರ್‌ ಅರವೀಂದ್, ಸಹಾಯಕ ತಹಸೀಲ್ದಾರ್‌ ಮೋಹನ್‌ ಕುಮಾರ್ ಸೇರಿದಂತೆ ಹಲವರು ಉಪಸ್ಥಿತರಿದ್ದರು.