ಕಿವುಡ, ಮೂಕ ಮಕ್ಕಳಿಗೆ ಕಲಿಕಾ ಸಲಕರಣೆ ವಿತರಣೆ

| Published : Jan 23 2024, 01:49 AM IST

ಕಿವುಡ, ಮೂಕ ಮಕ್ಕಳಿಗೆ ಕಲಿಕಾ ಸಲಕರಣೆ ವಿತರಣೆ
Share this Article
  • FB
  • TW
  • Linkdin
  • Email

ಸಾರಾಂಶ

ನರೇಗಲ್ಲ ಕೆಇಬಿ ಹಾಗೂ ಆತ್ಮೀಯ ಗೆಳೆಯರ ಬಳಗದ ವತಿಯಿಂದ ಸ್ಥಳೀಯ ಅನ್ನದಾನೇಶ್ವರ ಕಿವುಡ ಮತ್ತು ಮೂಕ ಮಕ್ಕಳ ವಸತಿ ಶಾಲೆಯಲ್ಲಿ ಶ್ರೀರಾಮನ ಭಾವಚಿತ್ರಕ್ಕೆ ಪೂಜೆ ಸಲ್ಲಿಸುವ ಮೂಲಕ ಶಾಲಾ ವಿದ್ಯಾರ್ಥಿಗಳಿಗೆ ೧೫ ಸಾವಿರ ರು. ಮೌಲ್ಯದ ಕಲಿಕಾ ಸಾಮಗ್ರಿ ವಿತರಣೆ ಮಾಡಲಾಯಿತು.

ನರೇಗಲ್ಲ: ಸ್ಥಳೀಯ ಕೆಇಬಿ ಹಾಗೂ ಆತ್ಮೀಯ ಗೆಳೆಯರ ಬಳಗದ ವತಿಯಿಂದ ಸ್ಥಳೀಯ ಅನ್ನದಾನೇಶ್ವರ ಕಿವುಡ ಮತ್ತು ಮೂಕ ಮಕ್ಕಳ ವಸತಿ ಶಾಲೆಯಲ್ಲಿ ಶ್ರೀರಾಮನ ಭಾವಚಿತ್ರಕ್ಕೆ ಪೂಜೆ ಸಲ್ಲಿಸುವ ಮೂಲಕ ಶಾಲಾ ವಿದ್ಯಾರ್ಥಿಗಳಿಗೆ ೧೫ ಸಾವಿರ ರು. ಮೌಲ್ಯದ ಕಲಿಕಾ ಸಾಮಗ್ರಿ ವಿತರಣೆ ಮಾಡಲಾಯಿತು. ಈ ಸಂದರ್ಭದಲ್ಲಿ ಹೆಸ್ಕಾ ಶಾಖಾಧಿಕಾರಿ ಐ.ಎ.ಚೌಬಾರಿ ಮಾತನಾಡಿ, ಇದೊಂದು ಐತಿಹಾಸಿಕ ಕ್ಷಣ, ಇಡೀ ವಿಶ್ವವೇ ಕಣ್ದೆರೆದು ದೇಶವನ್ನು ನೋಡುವಂತ ಸುಸಂದರ್ಭ, ಇಂತಹ ಸಂದರ್ಭದಲ್ಲಿ ದೇಶವೇ ಶ್ರೀರಾಮನ ಜಪ ಮಾಡಿದರೆ ನಾವುಗಳೂ ಕೂಡಾ ರಾಮನ ಪೂಜೆಯೊಂದಿಗೆ ಇಂತಹ ಮಕ್ಕಳೊಂದಿಗೆ ಈ ಸಂಭ್ರಮವನ್ನು ಆಚರಿಸುತ್ತಿರುವುದು ನಮ್ಮೆಲ್ಲರ ಸೌಭಾಗ್ಯ ಎಂದರು.

ಶ್ರೀರಾಮನ ಜಪ ಇಂದು ಎಲ್ಲೆಡೆ ಕೇಳಿಬರುತ್ತಿದ್ದು, ಇದರಲ್ಲಿ ನಮ್ಮ ಹೆಸ್ಕಾಂ ಇಲಾಖಾ ಸಿಬ್ಬಂದಿಗಳು ಸ್ವಯಂ ಪ್ರೇರಿತರಾಗಿ ಇಲ್ಲಿನ ಮಕ್ಕಳೊಂದಿಗೆ ಶ್ರೀರಾಮನ ಸಂಬ್ರಮ ಹಂಚಿಕೊಳ್ಳುತ್ತಿರುವುದು ನಮಗೆಲ್ಲಾ ನಿಜಕ್ಕೂ ಹರ್ಷತಂದಿದೆ ಎಂದು ತಿಳಿಸಿದರು.

ಈ ವೇಳೆ ಮುಖ್ಯೋಪಾಧ್ಯಾಯ ಎಸ್. ಬಸಪ್ಪ ಮಾತನಾಡಿದರು.ಶಾಲಾ ಮಕ್ಕಳಿಗೆ ಕಂಪಾಸ್ ಬಾಕ್ಸ ನೋಟಬುಕ್ ಹಾಗೂ ಪೆನ್ನುಗಳನ್ನು ಹಾಗೂ ಸಿಹಿ ತಿನಿಸುಗಳನ್ನು ವಿತರಿಸಲಾಯಿತು. ಹೆಸ್ಕಾ ಶಾಖಾಧಿಕಾರಿ ಐ.ಎ. ಚೌಬಾರಿ ಅವರನ್ನು ಸನ್ಮಾನಿಸಲಾಯಿತು.

ಹೆಸ್ಕಾಂ ಸಿಬ್ಬಂದಿಗಳಾದ ಎಂ.ಜೆ. ಹುಡೇದ, ಮರಿಯಪ್ಪ ಅಳವಂಡಿ, ಬಸವರಾಜ ಹುದ್ದಾರ, ಪ್ರಕಾಶ ಅಂಗಡಿ, ರಫಿಕ ನದಾಫ, ಪ್ರಕಾಶ ಮಣ್ಣೋಡ್ಡರ, ಶಿವಾನಂದ ಸೂಡಿ, ಸಾಗರ ನಿರಂಜನ, ಪ್ರಶಾಂತ ಬಸಾಪೂರ, ಮುಕುಂದ ಪೂರಿ, ಬಸವರಾಜ ಮಡಿವಾಳರ, ಪ್ರಶಾಂತ ತಿಪ್ಪಶಟ್ಟಿ, ಗಿರೀಶ ಪೂಜಾರ, ವಸಂತ ಪೂಜಾರ, ಪ್ರದೀಪ ರಾಠೋಡ, ಲಕ್ಷ್ಮಣ ಪೂಜಾರ, ಶಂಕ್ರಯ್ಯ ಮಾಲಗಿತ್ತಿಮಠ, ಹನಮಂತ ಈಳಿಗೇರ, ಮುತ್ತಪ್ಪ ಗೋಡಿ, ವಿನಾಯಕ ಹೂಗಾರ, ವಿನಾಯಕ ತಳವಾರ, ಹನಮಂತ ಕಂಬಳಿ, ಮಹೇಶ ಮುಳ್ಳೂರ, ಶಾಲಾ ಸಿಬ್ಬಂದಿಗಳಾದ ಎ.ಕೆ.ಕಡೆತೋಟದ, ಎಲ್.ಎಂ. ತಳಬಾಳ, ಎ.ಸಿ. ಮರಡಿಮಠ, ಗಾಣಿಗೇರ, ಎಸ್.ವಿ. ಪಾಟೀಲ, ಎಂ.ವಿ. ಹರ್ಲಾಪೂರ, ಎಸ್.ಕೆ. ಅರಮನಿ, ಅಜಯ ಚಿಕ್ಕಮಠ, ಮಹಮ್ಮದರಫೀಕ ರೇವಡಿಗಾರ ಹಾಗೂ ಸಿಬ್ಬಂದಿಗಳು ಉಪಸ್ಥಿತರಿದ್ದರು.