300 ಫಲಾನುಭವಿಗಳಿಗೆ ಶಾಸಕ ಶರತ್ ಬಚ್ಚೇಗೌಡ ಇ-ಸ್ವತ್ತು ಖಾತೆಗಳ ವಿತರಣೆ

| Published : Jan 21 2025, 12:34 AM IST

300 ಫಲಾನುಭವಿಗಳಿಗೆ ಶಾಸಕ ಶರತ್ ಬಚ್ಚೇಗೌಡ ಇ-ಸ್ವತ್ತು ಖಾತೆಗಳ ವಿತರಣೆ
Share this Article
  • FB
  • TW
  • Linkdin
  • Email

ಸಾರಾಂಶ

ಮೊದಲ ಸಲ ಬಂದಾಗ ಕೊಟ್ಟ ಮಾತಿನಂತೆ ಅಪಾರ್ಟ್ಮೆಂಟಿನ ಯಾವೊಬ್ಬ ನಿವಾಸಿಯು ಈ ಸ್ವತ್ತು ಪಡೆಯಲು ಪಂಚಾಯಿತಿಗೆ ತೆರಳದೆ ತಮ್ಮ ಮನೆಯ ಬಾಗಿಲಲ್ಲಿಯೇ ಪಡೆಯಬಹುದು. ಅದಕ್ಕೆ ಅವಶ್ಯವಿರುವ ದಾಖಲಾತಿಗಳನ್ನು ಪಂಚಾಯಿತಿ ಸಿಬ್ಬಂದಿಯು ತಮ್ಮಲ್ಲಿಗೆ ಬಂದು ದಾಖಲಾತಿಗಳನ್ನು ಸ್ವೀಕರಿಸಿ ಈ ದಿನ 300 ಕುಟುಂಬಗಳಿಗೆ ಈ ಸ್ವತ್ತು ಖಾತೆಗಳನ್ನು ವಿತರಿಸಿದ್ದೇವೆ.

ಕನ್ನಡಪ್ರಭ ವಾರ್ತೆ ಹೊಸಕೋಟೆ

ತಾಲೂಕಿನ ಜಡಿಗೇನಹಳ್ಳಿ ಹೋಬಳಿಯ ವಾಗಟ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಸಂಜೀವಿನಿ ಸೃಷ್ಠಿ ಅಪಾರ್ಟ್ಮೆಂಟ್ ನಿವಾಸಿಗಳಿಗೆ ಮನೆ ಬಾಗಿಲಿಗೆ ಇ- ಸ್ವತ್ತು ಕಾರ್ಯಕ್ರಮದಲ್ಲಿ ಕೊಟ್ಟ ಮಾತಿನಂತೆ 300 ಕುಟುಂಬಗಳಿಗೆ ಫಲಾನುಭವಿಗಳಿಗೆ ಇ ಸ್ವತ್ತು ಖಾತೆಗಳನ್ನು ಶಾಸಕ ಶರತ್ ಬಚ್ಚೇಗೌಡ ವಿತರಿಸಿದರು.

ಈ ಸಂದರ್ಭದಲ್ಲಿ ಮಾತನಾಡಿದ ಶಾಸಕ ಶರತ್ ಬಚ್ಚೇಗೌಡ, ಮೊದಲ ಸಲ ಬಂದಾಗ ಕೊಟ್ಟ ಮಾತಿನಂತೆ ಅಪಾರ್ಟ್ಮೆಂಟಿನ ಯಾವೊಬ್ಬ ನಿವಾಸಿಯು ಈ ಸ್ವತ್ತು ಪಡೆಯಲು ಪಂಚಾಯಿತಿಗೆ ತೆರಳದೆ ತಮ್ಮ ಮನೆಯ ಬಾಗಿಲಲ್ಲಿಯೇ ಪಡೆಯಬಹುದು. ಅದಕ್ಕೆ ಅವಶ್ಯವಿರುವ ದಾಖಲಾತಿಗಳನ್ನು ಪಂಚಾಯಿತಿ ಸಿಬ್ಬಂದಿಯು ತಮ್ಮಲ್ಲಿಗೆ ಬಂದು ದಾಖಲಾತಿಗಳನ್ನು ಸ್ವೀಕರಿಸಿ ಈ ದಿನ 300 ಕುಟುಂಬಗಳಿಗೆ ಈ ಸ್ವತ್ತು ಖಾತೆಗಳನ್ನು ವಿತರಿಸಿದ್ದೇವೆ, ತಾಲೂಕು ಪಂಚಾಯಿತಿ ಕಾರ್ಯನಿರ್ವಣಾಧಿಕಾರಿ ಡಾ.ಸಿ.ಎನ್. ನಾರಾಯಣಸ್ವಾಮಿ ಹಾಗೂ ಗ್ರಾಮ ಪಂಚಾಯಿತಿಯ ಪಿಡಿಒ ಅವರನ್ನು ಶ್ಲಾಘಿಸಿದರು.

ನಿವಾಸಿಗಳ ಬೇಡಿಕೆಗಳನ್ನು ಸುಧೀರ್ಘವಾಗಿ ಚರ್ಚಿಸಿ ಅಧಿಕಾರಿಗಳಿಗೆ ಪರಿಹರಿಸಲು ಸ್ಥಳದಲ್ಲಿಯೇ ಸೂಚಿಸಿದರು. ಸರ್ಕಾರದ ವತಿಯಿಂದ ಈ ಭಾಗಕ್ಕೆ ಕಾವೇರಿ ನೀರಿನ ಸರಬರಾಜು ಪೇಸ್ 6 ನಲ್ಲಿ ಮಾಡಲಾಗುವುದು ಮತ್ತು ಹತ್ತಿರದಲ್ಲಿಯೇ ಬುಲೆಟ್ ಟ್ರೈನಿನ ನಿಲ್ದಾಣವು ಈ ಭಾಗದಲ್ಲಿಯೇ ಬರುತ್ತದೆ ಎಂದರು.

ಈ ಕಾರ್ಯಕ್ರಮದಲ್ಲಿ ತಾಲೂಕು ಪಂಚಾಯಿತಿ ಕಾರ್ಯನಿರ್ವಾಹಕ ಅಧಿಕಾರಿ ಡಾ.ಸಿ.ಎನ್. ನಾರಾಯಣಸ್ವಾಮಿ, ವಾಗಟ ಗ್ರಾಮ ಪಂಚಾಯಿತಿ ಉಪಾಧ್ಯಕ್ಷೆ ಶ್ರೀಮತಿ ರಾಣಿ, ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ಮುನಿವೆಂಕಟಸ್ವಾಮಿ, ಮುಖಂಡರಾದ ಕೆ.ಎಸ್. ಸುರೇಶ್, ಬೋದನ ಹೊಸಹಳ್ಳಿ ಪ್ರಕಾಶ್, ಸಮೇತನಳ್ಳಿ ಸೊಣ್ಣಪ್ಪ ಹಾಗೂ ಮುಖಂಡರು ಭಾಗವಹಿಸಿದ್ದರು.