ಸರ್ಕಾರಿ ಶಾಲೆ ಮಕ್ಕಳಿಗೆ ನೋಟ್ ಬುಕ್ , ಜಾಮಿಟ್ರಿ ಬಾಕ್ಸ್, ಡಿಕ್ಷನರಿ ವಿತರಣೆ

| Published : Jul 09 2025, 12:18 AM IST

ಸರ್ಕಾರಿ ಶಾಲೆ ಮಕ್ಕಳಿಗೆ ನೋಟ್ ಬುಕ್ , ಜಾಮಿಟ್ರಿ ಬಾಕ್ಸ್, ಡಿಕ್ಷನರಿ ವಿತರಣೆ
Share this Article
  • FB
  • TW
  • Linkdin
  • Email

ಸಾರಾಂಶ

ಹಲಗೂರಿನಲ್ಲಿ ಹುಟ್ಟಿ ಬೆಂಗಳೂರಿನ ಜಿಕೆವಿಕೆಯಲ್ಲಿ ಕೆಲಸ ನಿರ್ವಹಿಸಿ ನಿವೃತ್ತಿಗೊಂಡ ಮಂಚೇಗೌಡರು ಸ್ಥಾಪಿಸಿದ ಹಲಗೂರು ನಾಗರಿಕರ ಹಿತರಕ್ಷಣ ಟ್ರಸ್ಟ್‌ನಿಂದ ಹೋಬಳಿ ಎಲ್ಲಾ ಶಾಲಾ ಮಕ್ಕಳಿಗೆ ಅಗತ್ಯವುಳ್ಳ ನೋಟ್ ಬುಕ್, ಜಾಮಿಟ್ರಿ ಬಾಕ್ಸ್, ಡಿಕ್ಷನರಿ, ಗಡಿಯಾರ, ಬಿಸಿಯೂಟಕ್ಕೆ ಲೋಟ, ತಟ್ಟೆಗಳನ್ನು 29 ವರ್ಷಗಳಿಂದ ನೀಡಲಾಗುತ್ತಿದೆ.

ಕನ್ನಡಪ್ರಭ ವಾರ್ತೆ ಹಲಗೂರು

ನಾಗರಿಕ ಹಿತ ರಕ್ಷಣಾ ಟ್ರಸ್ಟ್‌ನಿಂದ ಮಾರಗೌಡನಹಳ್ಳಿ ಪ್ರೌಢಶಾಲೆಯಲ್ಲಿ ಶಾಲಾ ಮಕ್ಕಳಿಗೆ ನೋಟ್ ಬುಕ್, ಜಾಮಿಟ್ರಿ ಬಾಕ್ಸ್, ಡಿಕ್ಷನರಿ ವಿತರಿಸಲಾಯಿತು.

ಅಧ್ಯಕ್ಷ ಮೋಹನ್ ದಾಸ್ ಮಾತನಾಡಿ, ಹಲಗೂರಿನಲ್ಲಿ ಹುಟ್ಟಿ ಬೆಂಗಳೂರಿನ ಜಿಕೆವಿಕೆಯಲ್ಲಿ ಕೆಲಸ ನಿರ್ವಹಿಸಿ ನಿವೃತ್ತಿಗೊಂಡ ಮಂಚೇಗೌಡರು ಸ್ಥಾಪಿಸಿದ ಹಲಗೂರು ನಾಗರಿಕರ ಹಿತರಕ್ಷಣ ಟ್ರಸ್ಟ್‌ನಿಂದ ಹೋಬಳಿ ಎಲ್ಲಾ ಶಾಲಾ ಮಕ್ಕಳಿಗೆ ಅಗತ್ಯವುಳ್ಳ ನೋಟ್ ಬುಕ್, ಜಾಮಿಟ್ರಿ ಬಾಕ್ಸ್, ಡಿಕ್ಷನರಿ, ಗಡಿಯಾರ, ಬಿಸಿಯೂಟಕ್ಕೆ ಲೋಟ, ತಟ್ಟೆಗಳನ್ನು 29 ವರ್ಷಗಳಿಂದ ನೀಡಲಾಗುತ್ತಿದೆ ಎಂದರು.

ಇದೇ ವೇಳೆ ಶಾಲಾ ಮಕ್ಕಳಿಗೆ ಪರಿಕರ ವಿತರಿಸಿ ಅತಿಥಿಗಳನ್ನು ಸನ್ಮಾನಿಸಲಾಯಿತು. ಕಾರ್ಯಕ್ರಮದಲ್ಲಿ ಎಸ್ ಡಿಎಂಸಿ ಅಧ್ಯಕ್ಷ ನಂದೀಶ, ಮಂಚೇಗೌಡರ ಪುತ್ರ ಅಶೋಕ್, ಮುರಳಿಧರ್, ಪ್ರಸಾದ್, ನಾಗರಾಜ್, ಎ.ಎಸ್. ದೇವರಾಜ್, ರವಿ, ಪುಟ್ಟರಾಜು ಇದ್ದರು.

ನಾಳೆ ಜಿ.ಮಾದೇಗೌಡ ಸಮಾಜಸೇವೆ, ಸಾವಯವ ಕೃಷಿ ಪ್ರಶಸ್ತಿ ಪ್ರದಾನ

ಮಂಡ್ಯ:

ಡಾ.ಜಿ.ಮಾದೇಗೌಡ ಪ್ರತಿಷ್ಠಾನ, ಭಾರತೀ ಎಜುಕೇಷನ್ ಟ್ರಸ್ಟ್, ಮಹಾತ್ಮಗಾಂಧಿ ಸ್ಮಾರಕ ಟ್ರಸ್ಟ್‌ನಿಂದ ಜು.೧೦ರಂದು ಸಂಜೆ ೩.೩೦ಕ್ಕೆ ನಗರದ ಗಾಂಧಿ ಭವನದಲ್ಲಿ ೨೫ನೇ ವರ್ಷದ ರಾಜ್ಯ ಮಟ್ಟದ ಡಾ. ಜಿ.ಮಾದೇಗೌಡ ಸಮಾಜಸೇವಾ ಮತ್ತು ಸಾವಯುವ ಕೃಷಿಕ ಪ್ರಶಸ್ತಿ ಪ್ರದಾನ ಸಮಾರಂಭ ನಡೆಯಲಿದೆ ಎಂದು ಕಾಲೇಜು ಪ್ರಾಂಶುಪಾಲ ಎಂ.ಎಸ್.ಮಹದೇವಸ್ವಾಮಿ ತಿಳಿಸಿದರು.

ಕಳೆದ ೨೪ ವರ್ಷಗಳಲ್ಲಿ ೪೮ ಸಮಾಜಸೇವೆ ಹಾಗೂ ಸಾವಯವ ಕೃಷಿಯಲ್ಲಿ ಸಾಧನೆಗೈದವರನ್ನು ಗುರುತಿಸಿ ಪ್ರಶಸ್ತಿ ನೀಡಿ ಗೌರವಿಸಲಾಗಿದೆ ಎಂದು ಮಂಗಳವಾರ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.

ಬೆಂಗಳೂರು ಗೊಟ್ಟೆಗೆರೆಯ ಶ್ರೀರಾಮಕೃಷ್ಣ ಸಮಗ್ರ ಶಿಕ್ಷಣ ಕೇಂದ್ರದ ಅಧ್ಯಕ್ಷೆ ಸರೋಜಮ್ಮ ಎಂ.ಚಂದ್ರಶೇಖರ್ ಅವರಿಗೆ ಸಮಾಜ ಸೇವಾ ಪ್ರಶಸ್ತಿ ಹಾಗೂ ಕುಣಿಗಲ್ ತಾಲೂಕಿನ ದೊಡ್ಡಹೊಸೂರು ಗ್ರಾಮದ ಗಾಂಧೀಜಿ ಸಹಜ ಬೇಸಾಯ ಆಶ್ರಮದ ಸಂಸ್ಥಾಪಕ ಹೆಚ್.ಮಂಜುನಾಥ್ ಅವರಿಗೆ ಸಾವಯವ ಕೃಷಿಕ ಪ್ರಶಸ್ತಿ ನೀಡಿ ಗೌರವಿಸಲಾಗುತ್ತಿದ್ದು, ಚಿಂತಕ ಪ್ರೊ.ನರಹಳ್ಳಿ ಬಾಲಸುಬ್ರಹ್ಮಣ್ಯ ಅವರು ಪ್ರಶಸ್ತಿ ಪ್ರದಾನ ಮಾಡುವರು ಎಂದರು.

ಶಾಸಕ ಪಿ.ರವಿಕುಮಾರ್ ಮುಖ್ಯ ಅತಿಥಿಯಾಗಿ ಭಾಗವಹಿಸುವರು. ವಿಧಾನ ಪರಿಷತ್ ಸದಸ್ಯ ಮಧು ಜಿ. ಮಾದೇಗೌಡ ಸಮಾರಂಭದಲ್ಲಿ ಭಾಗವಹಿಸುವರು ಎಂದು ತಿಳಿಸಿದರು. ಟ್ರಸ್ಟ್‌ನ ಬಿ.ಕೆ.ಕೃಷ್ಣ, ಎಚ್.ಎಂ.ನಾಗೇಶ್ ಅವರು ಗೋಷ್ಠಿಯಲ್ಲಿದ್ದರು.