ಸಾರಾಂಶ
ಕರ್ನಾಟಕ ರಕ್ಷಣಾ ವೇದಿಕೆಯ ರಾಜ್ಯಾಧ್ಯಕ್ಷ ಟಿ.ಎ.ನಾರಾಯಣಗೌಡರವರ ಹುಟ್ಟುಹಬ್ಬದ ಪ್ರಯುಕ್ತ ಅರಸೀಕೆರೆ ತಾಲೂಕಿನ ಮುದುಡಿ ಗ್ರಾಮದ ಎಂ.ಜಿ.ತಾಂಡ್ಯದ ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆಯ ವಿದ್ಯಾರ್ಥಿಗಳಿಗೆ ಕರವೇ ವತಿಯಿಂದ ವಿದ್ಯಾರ್ಥಿಗಳಿಗೆ ನೋಟ್‌ಬುಕ್ ವಿತರಿಸಲಾಯಿತು.
ನಾರಾಯಣಗೌಡ ಜನ್ಮ ದಿನ । ಕರವೇ ವತಿಯಿಂದ ವಿದ್ಯಾರ್ಥಿಗಳಿಗೆ ಲೇಖನ ಸಾಮಗ್ರಿ
ಕನ್ನಡಪ್ರಭ ವಾರ್ತೆ ಅರಸೀಕೆರೆಕರ್ನಾಟಕ ರಕ್ಷಣಾ ವೇದಿಕೆಯ ರಾಜ್ಯಾಧ್ಯಕ್ಷ ಟಿ.ಎ.ನಾರಾಯಣಗೌಡರವರ ಹುಟ್ಟುಹಬ್ಬದ ಪ್ರಯುಕ್ತ ತಾಲೂಕಿನ ಮುದುಡಿ ಗ್ರಾಮದ ಎಂ.ಜಿ.ತಾಂಡ್ಯದ ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆಯ ವಿದ್ಯಾರ್ಥಿಗಳಿಗೆ ಕರವೇ ವತಿಯಿಂದ ವಿದ್ಯಾರ್ಥಿಗಳಿಗೆ ನೋಟ್‌ಬುಕ್ ಮತ್ತು ಪೆನ್ನು, ಪೆನ್ಸಿಲ್‌ಗಳನ್ನು ವಿತರಿಸಲಾಯಿತು.
ಈ ಸಂದರ್ಭದಲ್ಲಿ ಕರವೇ ನಗರಾಧ್ಯಕ್ಷ ಕಿರಣ್ ಕುಮಾರ್ ಮಾತನಾಡಿ, ‘ನಾಡು ನುಡಿ, ನೆಲ ಜಲಕ್ಕಾಗಿ ಹೋರಾಟ ನಡೆಸಿದ ನಾರಾಯಣ ಗೌಡರ ಹುಟ್ಟುಹಬ್ಬದಲ್ಲಿ ಸರ್ಕಾರಿ ಶಾಲೆಯಲ್ಲಿ ವಿಶೇಷವಾಗಿ ಮಕ್ಕಳಿಗೆ ನೋಟ್‌ಬುಕ್ ಮತ್ತು ಪೆನ್ನು, ಪೆನ್ಸಿಲ್‌ಗಳನ್ನು ವಿತರಿಸುವ ಮೂಲಕ ಆಚರಿಸುತ್ತಿದ್ದೇವೆ. ಇಂದು ಕನ್ನಡ ಶಾಲೆಗಳನ್ನು ಉಳಿಸುವ ನಿಟ್ಟಿನಲ್ಲಿ ವೇದಿಕೆ ಕೆಲವು ಕಾರ್ಯಕ್ರಮಗಳನ್ನು ಈ ರೀತಿ ಹಮ್ಮಿಕೊಂಡು ಆಚರಿಸುತ್ತಿದ್ದೇವೆ’ ಎಂದು ಹೇಳಿದರು.ತಾಲೂಕಿನ ಹಳ್ಳಿಯೊಂದರಲ್ಲಿ ಜನಿಸಿ ರಾಜ್ಯದ ರಕ್ಷಣೆಗಾಗಿ ಲಕ್ಷಾಂತರ ಕಾರ್ಯಕರ್ತರ ಪಡೆಯನ್ನು ಕಟ್ಟಿ ಕನ್ನಡದ ಉಳಿಗಾಗಿ ಹೋರಾಟ ನಡೆಸುತ್ತಿದ್ದಾರೆ. ರಾಜ್ಯದ ನೆಲ, ಜಲ, ಭಾಷೆ ಗಡಿ ವಿಚಾರವಾಗಿ ತೊಂದರೆಯಾದ ತಕ್ಷಣ ಹೋರಾಟಕ್ಕೆ ಕರೆ ಕೊಡುವ ಮೂಲಕ ರಾಜ್ಯ ಸರ್ಕಾರ, ಕೇಂದ್ರ ಸರ್ಕಾರಕ್ಕೆ ಎಚ್ಚರಿಕೆಯನ್ನು ನೀಡುವ ಸಂಘ ಕರವೇ. ಇಂತಹ ಸಂಘವನ್ನು ಬೃಹತ್ತಾಗಿ ಕಟ್ಟಿ ಬೆಳೆಸಿರುವ ಶಕ್ತಿ ನಾರಾಯಣಗೌಡರದ್ದಾಗಿದೆ ಎಂದರು.
ಈ ಸಂದರ್ಭದಲ್ಲಿ ಪತ್ರಕರ್ತರ ಸಂಘದ ಅಧ್ಯಕ್ಷ ಎಲ್.ಮಂಜುನಾಥ್, ತಾಲೂಕು ಅಧ್ಯಕ್ಷ ಹೇಮಂತ್‌ಕುಮಾರ್, ಜಿಲ್ಲಾ ಉಪಾಧ್ಯಕ್ಷ ತುಳಸಿದಾಸ್, ಸಂತೋಷ್, ಮುದುಡಿ ಗಂಗಾಧರ್, ಗ್ರಾಪಂ ಅಧ್ಯಕ್ಷ ರತನ್‌ಕುಮಾರ್, ಎಪಿಎಂಸಿ ಮಾಜಿ ಅಧ್ಯಕ್ಷ ಶಿವಣ್ಣ, ನಂದಕುಮಾರ್, ಮಹಿಳಾಧ್ಯಕ್ಷೆ ಕಮಲಮ್ಮ, ಕಾರ್ಮಿಕ ಘಟಕದ ಮಂಜು, ರಾಘು, ಗಂಡಸಿ ಸಂಜೀವ, ಮಿಲ್ ಮಂಜು, ಅರ್ಜುನ್ ಗೌಡ, ಧನು, ನಂದನ್, ಉಮೇಶ್ ಇದ್ದರು.