ಅಕ್ಷರಗಳೆಂದರೆ ಗೊತ್ತಿಲ್ಲದ ಕಾಲದಲ್ಲಿ ಶಾಲೆಗಳನ್ನು ತೆರೆದು ಭಾರತದಲ್ಲಿ ಅಕ್ಷರ ಕ್ರಾಂತಿ ಆರಂಭಿಸಿದ ಪ್ರಥಮ ಮಹಿಳೆ, ಭಾರತದ ಮೊಟ್ಟ ಮೊದಲ ಮಹಿಳಾ ಶಿಕ್ಷಕಿ, ಸಾಮಾಜಿಕ ಹಾಗೂ ಮಹಿಳಾ ಹಕ್ಕುಗಳ ಹೋರಾಟಗಾರ್ತಿ, ಧಣಿವರಿಯದ ಸತ್ಯಶೋಧಕಿ, ಆಧುನಿಕ ಶಿಕ್ಷಣದ ತಾಯಿ ಸಾವಿತ್ರಿಬಾಯಿ ಫುಲೆ.
ಮಂಡ್ಯ:
ತಾಲೂಕಿನ ಮರಕಾಡುದೊಡ್ಡಿ ಸರ್ಕಾರಿ ಶಾಲೆ ಮತ್ತು ಕೊತ್ತತ್ತಿ ಗ್ರಾಮದಲ್ಲಿ ಇಂಗಳೆ ಫೌಂಡೇಷನ್ ವತಿಯಿಂದ ಪ್ರತ್ಯೇಕವಾಗಿ ವಿದ್ಯಾದಾತೆ ಸಾವಿತ್ರಬಾ ಫುಲೆ ಅವರ 195 ನೇ ಜಯಂತಿ ಪ್ರಯುಕ್ತ ಶಾಲಾ ವಿದ್ಯಾರ್ಥಿಗಳಿಗೆ ನೋಟ್‌ಬುಕ್ ವಿತರಿಸಲಾಯಿತು.ಫೌಂಡೇಷನ್ ಸಂಚಾಲಕ ಗುರುಶಂಕರ್, ಶಿಕ್ಷಣವೆಂದರೆ ತಿಳಿಯದ, ಅಕ್ಷರಗಳೆಂದರೆ ಗೊತ್ತಿಲ್ಲದ ಕಾಲದಲ್ಲಿ ಶಾಲೆಗಳನ್ನು ತೆರೆದು ಭಾರತದಲ್ಲಿ ಅಕ್ಷರ ಕ್ರಾಂತಿ ಆರಂಭಿಸಿದ ಪ್ರಥಮ ಮಹಿಳೆ, ಭಾರತದ ಮೊಟ್ಟ ಮೊದಲ ಮಹಿಳಾ ಶಿಕ್ಷಕಿ, ಸಾಮಾಜಿಕ ಹಾಗೂ ಮಹಿಳಾ ಹಕ್ಕುಗಳ ಹೋರಾಟಗಾರ್ತಿ, ಧಣಿವರಿಯದ ಸತ್ಯಶೋಧಕಿ, ಆಧುನಿಕ ಶಿಕ್ಷಣದ ತಾಯಿ ಸಾವಿತ್ರಿಬಾಯಿ ಫುಲೆ ಎಂದರು.
ಶಾಲಾ ಮುಖ್ಯಶಿಕ್ಷಿಕ ಆಶಾರಾಣಿ ಮಾತನಾಡಿದರು. ಕಾರ್ಯಕ್ರಮದಲ್ಲಿ ಸಮಾಜ ಸೇವಕರಾದ ಎಂ.ಕುಮಾರ, ಎಚ್. ಕೋಡಿಹಳ್ಳಿ ಅಂಬಿಕಾ, ಅನಿತಾ, ಬಸವರಾಜು, ವಸಂತ ಮೂರ್ತಿ, ಪ್ರಭುದಾಸ್, ಮಲ್ಲೇಶ್, ಕಾಳಪ್ಪ, ಕೆ.ಬಿ.ಮಹೇಂದ್ರ, ಶಿಕ್ಷಕರಾದ ಎಸ್.ಇಂದಿರಾ, ಜಿ.ಕೆ.ಲೋಕೇಶ್, ಎಸ್.ಸೌಭಾಗ್ಯ, ಟಿ.ಮಾದೇವಯ್ಯ, ರಾಮಸ್ವಾಮಿ, ಮಹಿಳಾ ಪ್ರತಿನಿಧಿ ನೇತ್ರಾವತಿ ಹಾಗೂ ಕೊತ್ತತ್ತಿ ಮತ್ತು ಮಾರಕಾಡು ದೊಡ್ಡಿ ಗ್ರಾಮಸ್ಥರಿದ್ದರು.ನಾಳೆ ಪ್ರವಾಸಿ ಮಂದಿರದಲ್ಲಿ ಪೂರ್ವಭಾವಿ ಸಭೆ
ಕೆ.ಆರ್.ಪೇಟೆ: ಬೆಂಗಳೂರಿನ ಕೆಂಗೇರಿಯ ವಿಶ್ವ ಒಕ್ಕಲಿಗರ ಮಹಾ ಸಂಸ್ಥಾನ ಮಠದ ಪೀಠಾಧ್ಯಕ್ಷ ಶ್ರೀಕುಮಾರ ಚಂದ್ರಶೇಖರನಾಥ ಸ್ವಾಮೀಜಿ ಭೈರವೈಕ್ಯಪಾಗ ಬಿನ್ನೆವೆ.ವ್ವಿ ಸ್ಮರಣೆ, ನೆನಪಿನ ಕಾರ್ಯಕ್ರಮದ ಮೂಲಕ ನುಡಿನಮನ ಹಾಗೂ ಶ್ರೀಮಠದ 2ನೇ ಪೀಠಾಧ್ಯಕ್ಷರಾದ ಡಾ. ಶ್ರೀನಿಶ್ಚಲಾನಂದನಾಥ ಸ್ವಾಮೀಜಿ ಅವರಿಗೆ ಗುರುವಂದನೆ ಕಾರ್ಯಕ್ರಮ ಆಯೋಜಿಸುವ ಸಂಬಂಧ ಜ.6ರಂದು ಪಟ್ಟಣದ ಪ್ರವಾಸಿ ಮಂದಿರದಲ್ಲಿ ಪೂರ್ವಭಾವಿ ಸಭೆ ಕರೆಯಲಾಗಿದೆ.ಶ್ರೀ ಭಕ್ತರು, ಅಭಿಮಾನಿಗಳು ಆಗಮಿಸಿ ಭೈರವೈಕ್ಯ ಪೀಠಾಧ್ಯಕ್ಷ ಕುಮಾರ ಚಂದ್ರಶೇಖರನಾಥಸ್ವಾಮಿ ಮೂಲತಃ ನಮ್ಮ ತಾಲೂಕಿನ ಸುಪುತ್ರರು. 2ನೇ ಪೀಠಾಧ್ಯಕ್ಷ ಡಾ.ನಿಶ್ಚಲಾನಂದನಾಥ ಸ್ವಾಮೀಜಿ ರವರು ಸಹ ಪೂರ್ವಾಶ್ರಮದಲ್ಲಿ ನಮ್ಮ ತಾಲೂಕಿನ ತಹಸೀಲ್ದಾರ್, ಪಾಂಡವಪುರ ಉಪ ವಿಭಾಗಾಧಿಕಾರಿ, ಅಪರ ಜಿಲ್ಲಾಧಿಕಾರಿಗಳಾಗಿ ತಾಲೂಕಿನ ಅಭಿವೃದ್ಧಿಗೆ ನಿಸ್ವಾರ್ಥ ಸೇವೆ ಸಲ್ಲಿಸಿ ಅಪಾರ ಅಭಿಮಾನಿ ಬಳಗವನ್ನು ಹೊಂದಿದ್ದಾರೆ. ಪ್ರತಿಯೊಬ್ಬರೂ ಸಭೆಯಲ್ಲಿ ಭಾಗವಹಿಸುವಂತೆ ತಾಲೂಕು ಒಕ್ಕಲಿಗರ ಕ್ಷೇಮಾಭಿವೃದ್ಧಿ ಸಂಘದ ಅಧ್ಯಕ್ಷ ವಿ.ಎಂ.ಕುಮಾರಗೌಡ ಹಾಗೂ ವಿಶ್ವ ಒಕ್ಕಲಿಗರ ಮಠದ ಅಭಿಮಾನಿಗಳು ಕೋರಿದ್ದಾರೆ.