ಸಾರಾಂಶ
ಇಲ್ಲಿನ ಲಯನ್ಸ್ ಸಂಸ್ಥೆಯ ಮಾಜಿ ಅಧ್ಯಕ್ಷ ಕೆ. ಎಸ್. ರಮೇಶ್‌ಬಾಬುರವರು ತಮ್ಮ ಮಾತೃಶ್ರೀ ಜ್ಞಾಪಕಾರ್ಥವಾಗಿ ಪ್ರೌಢಶಾಲಾ ವಿದ್ಯಾರ್ಥಿಗಳಿಗೆ ನೋಟ್‌ಬುಕ್ ವಿತರಣೆ ಸಮಾರಂಭ ಆಯೋಜಿಸಲಾಗಿತ್ತು.
ದೇವನಹಳ್ಳಿ: ಇಲ್ಲಿನ ಲಯನ್ಸ್ ಸಂಸ್ಥೆಯ ಮಾಜಿ ಅಧ್ಯಕ್ಷ ಕೆ. ಎಸ್. ರಮೇಶ್‌ಬಾಬುರವರು ತಮ್ಮ ಮಾತೃಶ್ರೀ ಜ್ಞಾಪಕಾರ್ಥವಾಗಿ ಪ್ರೌಢಶಾಲಾ ವಿದ್ಯಾರ್ಥಿಗಳಿಗೆ ನೋಟ್‌ಬುಕ್ ವಿತರಣೆ ಸಮಾರಂಭ ಆಯೋಜಿಸಲಾಗಿತ್ತು.
ಸಂಸ್ಥೆಯ ಅಧ್ಯಕ್ಷ ಜಿ.ಕೆ. ನಾರಾಯಣಸ್ವಾಮಿ ಪುಸ್ತಕಗಳನ್ನು ವಿತರಣೆ ಮಾಡಿ ತಂದೆ ತಾಯಿಗಳ ಸೇವೆಯನ್ನು ನಮ್ಮ ಸಂಸ್ಥೆ ಮೂಲಕ ಮಾಡುತ್ತಿರುವ ರಮೇಶ್ ಬಾಬುರವರ ಸೇವೆಯನ್ನು ಅಭಿನಂದಿಸಿ ಇತರ ಸದಸ್ಯರು ಸಹ ಸೇವಾ ಕಾರ್ಯದಲ್ಲಿ ತೊಡಗಿಕೊಳ್ಳಲಿ ಎಂದರು. ಸಮಾರಂಭದಲ್ಲಿ ಕಾಲೇಜಿನ ಉಪ ಪ್ರಾಂಶುಪಾಲ ನೀಲಕಂಠ ಗಾಂವ್‌ಕರ್. ಕಾರ್ಯದರ್ಶಿ ಶ್ರೀರಾಮಯ್ಯ ಮಾಸ್ಟರ್, ಜಂಟಿ ಕಾರ್ಯದರ್ಶಿ ಎನ್. ಜಯಪ್ರಕಾಶ್, ಲಕ್ಷ್ಮೀನಾರಾಯಣ್ ಉಪಸ್ಥಿತರಿದ್ದರು