118 ಗ್ರಾಪಂ ಸಿಬ್ಬಂದಿಗೆ ಆದೇಶ ಪತ್ರ ವಿತರಣೆ

| Published : Nov 29 2024, 01:02 AM IST

ಸಾರಾಂಶ

ಯಲಹಂಕ ತಾಲೂಕು ಪಂಚಾಯಿತಿ ಸಭಾಂಗಣದಲ್ಲಿ ಏರ್ಪಡಿಸಿದ್ದ ಸಂವಿಧಾನ ದಿನಾಚರಣೆ ಕಾರ್ಯಕ್ರಮವನ್ನು ಬೆಂಗಳುರು ನಗರ ಜಿಲ್ಲಾ ಪಂಚಾಯಿತಿ ಸಿಇಒ ಎಸ್.ಲತಾಕುಮಾರಿ ಉದ್ಘಾಟಿಸಿದರು. ಈ ವೇಳೆ ಯಲಹಂಕ ತಾಪಂ ವ್ಯಾಪ್ತಿಯ 18 ಗ್ರಾಪಂಗಳ ಸುಮಾರು 118 ಗ್ರಾಪಂ ಸಿಬ್ಬಂದಿಗೆ ಜಿಪಂ ವತಿಯಿಂದ ಪೂರ್ವಾನುಮೋದನೆ ನೀಡಿರುವ ಆದೇಶ ಪ್ರತಿಗಳನ್ನು ಸಿಇಒ ಲತಾಕುಮಾರಿ ವಿತರಿಸಿದರು.

ಕನ್ನಡಪ್ರಭ ವಾರ್ತೆ ಯಲಹಂಕ ಯಲಹಂಕ ತಾಲೂಕು ಪಂಚಾಯಿತಿ ಸಭಾಂಗಣದಲ್ಲಿ ಏರ್ಪಡಿಸಿದ್ದ ಸಂವಿಧಾನ ದಿನಾಚರಣೆ ಕಾರ್ಯಕ್ರಮವನ್ನು ಬೆಂಗಳುರು ನಗರ ಜಿಲ್ಲಾ ಪಂಚಾಯಿತಿ ಸಿಇಒ ಎಸ್.ಲತಾಕುಮಾರಿ ಉದ್ಘಾಟಿಸಿದರು. ಈ ವೇಳೆ ಯಲಹಂಕ ತಾಪಂ ವ್ಯಾಪ್ತಿಯ 18 ಗ್ರಾಪಂಗಳ ಸುಮಾರು 118 ಗ್ರಾಪಂ ಸಿಬ್ಬಂದಿಗೆ ಜಿಪಂ ವತಿಯಿಂದ ಪೂರ್ವಾನುಮೋದನೆ ನೀಡಿರುವ ಆದೇಶ ಪ್ರತಿಗಳನ್ನು ಸಿಇಒ ಲತಾಕುಮಾರಿ ವಿತರಿಸಿದರು.

ಯಲಹಂಕ ತಾಪಂ ವ್ಯಾಪ್ತಿಯ 18 ಗ್ರಾಪಂಗಳ 118 ಗ್ರಾಪಂ‌ ಸಿಬ್ಬಂದಿ ದಶಕಗಳಿಂದ ತಾತ್ಕಾಲಿಕ ಉದ್ಯೋಗಿಗಳಾಗಿ ಗ್ರಾಪಂಗಳಲ್ಲಿ ಸೇವೆ ಸಲ್ಲಿಸುತ್ತಿದ್ದರು. ಇದುವರೆಗೂ ಅಧಿಕಾರದಲ್ಲಿದ್ದ ಹಲವು ಸಿಇಒ ಸದರಿ ಸಿಬ್ಬಂದಿಗೆ ಪೂರ್ವಾನುಮೋದನೆ ಆದೇಶ ಪ್ರತಿಗಳನ್ನು ನೀಡಲು ಪ್ರಯತ್ನಿಸಿದ್ದರಾದರೂ ಅವರಿಂದ ಈ ಕಾರ್ಯ ಕೈಗೂಡಿರಲಿಲ್ಲ, ಆದರೆ ಲತಾಕುಮಾರಿ ಅವರು ಬೆಂಗಳೂರು ನಗರ ಜಿಪಂ ಸಿಇಒ ಆಗಿ ಅಧಿಕಾರ ವಹಿಸಿಕೊಂಡ ಮೇಲೆ 118 ಗ್ರಾಪಂ ಸಿಬ್ಬಂದಿಗೆ ಜಿಪಂ ವತಿಯಿಂದ ಪೂರ್ವಾನುಮೋದನೆ ಆದೇಶ ಪ್ರತಿಗಳನ್ನು ನೀಡುವಲ್ಲಿ ಯಶಸ್ವಿಯಾಗಿದ್ದಾರೆ. ಅವರ ಕಾರ್ಯಕ್ಕೆ ಗ್ರಾಪಂ ಸಿಬ್ಬಂದಿ ಹೃತ್ಪೂರ್ವಕ ಧನ್ಯವಾದ ಸಲ್ಲಿಸಿದ್ದಾರೆ.ಈ ವೇಳೆ ಉಪ ಕಾರ್ಯದರ್ಶಿ ಅನಿತಾ, ಮುಖ್ಯ ಲೆಕ್ಕಾಧಿಕಾರಿ ಲಲಿತ, ಯೋಜನಾ ನಿರ್ದೇಶಕ ಮೋಹನ್, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಉಪ ನಿರ್ದೇಶಕ ಡಾ.ಸಿದ್ದರಾಮಣ್ಣ, ಯಲಹಂಕ ತಾಪಂ ಇಒ ಅಪೂರ್ವ ಎ. ಕುಲಕರ್ಣಿ ಸೇರಿ ಬೆಂಗಳೂರು ನಗರ ಜಿಪಂ ಮತ್ತು ಯಲಹಂಕ ತಾಪಂ ಅಧಿಕಾರಿಗಳಿದ್ದರು.