ಸಾರಾಂಶ
ತರೀಕೆರೆ, ತಾಲೂಕಿನಾದ್ಯಂತ 122 ಮಂದಿಗೆ ಮಾಸಾಶನ ವಿತರಣೆ ಮಾಡಲಾಗುತ್ತಿದೆ ಎಂದು ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ತಾಲೂಕು ಯೋಜನಾಧಿಕಾರಿ ಕುಸುಮಾಧರ್ ಹೇಳಿದ್ದಾರೆ.
ವಾತ್ಸಲ್ಯ ಕಿಟ್ ವಿತರಣಾ ಕಾರ್ಯಕ್ರಮ
ಕನ್ನಡಪ್ರಭ ವಾರ್ತೆ, ತರೀಕೆರೆತಾಲೂಕಿನಾದ್ಯಂತ 122 ಮಂದಿಗೆ ಮಾಸಾಶನ ವಿತರಣೆ ಮಾಡಲಾಗುತ್ತಿದೆ ಎಂದು ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ತಾಲೂಕು ಯೋಜನಾಧಿಕಾರಿ ಕುಸುಮಾಧರ್ ಹೇಳಿದ್ದಾರೆ.
ನಂದಿಬಟ್ಟಲು ಗ್ಲಾಮದಲ್ಲಿ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯಿಂದ ಮಹಿಳಾ ಜ್ಞಾನವಿಕಾಸ ವಾತ್ಸಲ್ಯ ಕಾರ್ಯಕ್ರಮದಲ್ಲಿ ಕಿಟ್ ವಿತರಣೆ ವೇಳೆ ಮಾತನಾಡಿದರು. ವೀರೇಂದ್ರ ಹೆಗ್ಗಡೆ ಹಾಗೂ ಹೇಮಾವತಿ ಅಮ್ಮ ಸಮಾಜದಲ್ಲಿರುವ ಕಟ್ಟ ಕಡೆಯ ವ್ಯಕ್ತಿಯನ್ನು ಕೂಡ ಸಮಾಜದ ಮುಖ್ಯ ವಾಹಿನಿಗೆ ಕರೆತರುವಂತಹ ಕೆಲಸ ಮಾಡುತ್ತಿದ್ದಾರೆ. ಈ ವಾತ್ಸಲ್ಯ ಕಾರ್ಯಕ್ರಮದಡಿ ಬಟ್ಟೆಕಿಟ್, ಪಾತ್ರೆ ಕಿಟ್, ವಾತ್ಸಲ್ಯ ಮಿಕ್ಸ್ ವಿತರಣೆ ಮಾಡಲಾಗುತ್ತಿದೆ. ಇದರಿಂದ ಸದಸ್ಯರು ಅವರ ಆರೋಗ್ಯ ಸಮಸ್ಯೆಗಳಿಗೆ ಮತ್ತು ಊಟದ ವ್ಯವಸ್ಥೆ ಯನ್ನು ಕೂಡ ಮಾಡಿಕೊಂಡಿದ್ದಾರೆ. ಇದರಡಿ ಮನೆ ಇಲ್ಲದ ಅಸಹಾಯಕರಿಗೆ ಮನೆ ನಿರ್ಮಿಸಿ ಕೊಡುವಂತಹ ಕೆಲಸವನ್ನು ಸಹ ಮಾಡುತ್ತಿದ್ದಾರೆ. ಇದುವರೆಗೂ ತಾಲೂಕಿನಲ್ಲಿ ಒಟ್ಟು ನಾಲ್ಕು ಮನೆಗಳ ರಚನೆ ಮಾಡಲಾಗಿದೆ ಎಂದು ಹೇಳಿದರು. ಕ್ಷೇತ್ರದಿಂದ 11 ಜನ ಫಲಾನುಭವಿಗಳಿಗೆ ಪಂಚೆ, ಶರ್ಟ್, ಸೀರೆ, ಚಾಪೆ ದಿಂಬು ಸೋಪು ಬಟ್ಟೆ ಮುಂತಾದ ವಸ್ತುಗಳನ್ನು ವಿತರಿಸಲಾಯಿತು. ನಂದಿಬಟ್ಟಲು, ವರ್ತೆಗುಂಡಿ ಪುರಸಭೆ, ದುಗ್ಲಾಪುರ , ರಂಗಪುರ ಗ್ರಾಮ ಪಂಚಾಯಿತಿ ಸದಸ್ಯರು ಹಾಗೂ ಒಕ್ಕೂಟ ಪದಾಧಿಕಾರಿಗಳು ಹಾಗೂ ಸಂಘದ ಸದಸ್ಯರು ವಲಯದ ಮೇಲ್ವಿಚಾರಕರಾದ ವಸಂತ್, ರಮೇಶ್, ಸಿದ್ದಯ್ಯ, ನಂದಿನಿ, ಸೇವಾ ಪ್ರತಿನಿಧಿಗಳಾದ ಉಷಾ , ದೇವಿ, ರೋಹಿಣಿ ಮತ್ತಿತರರು ಭಾಗವಹಿಸಿದ್ದರು.31ಕೆಟಿಆರ್.ಕೆ.6ಃ
ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಬಿ.ಸಿ.ಟ್ರಸ್ಟ್ ನಿಂದ ನಂದಿಬಟ್ಟಲು ಗ್ರಾಮದಲ್ಲಿ ವಾತ್ಸಲ್ಯ ಕಿಟ್ ವಿತರಣಾ ಕಾರ್ಯಕ್ರಮ ನಡೆಯಿತು. ಯೋಜನಾಧಿಕಾರಿ ಕುಸುಮಾಧರ್ ಮತ್ತಿತರರು ಇದ್ದರು.