ಗುಡಿಸಲು ಸುಟ್ಟ ಸಂತ್ರಸ್ತರಿಗೆ ಸೀರೆ ವಿತರಣೆ

| Published : Apr 29 2024, 01:33 AM IST

ಸಾರಾಂಶ

ತಾಲೂಕಿನ ಚಿಂಪುಗಾನಹಳ್ಳಿ ಗ್ರಾಮದಲ್ಲಿ ಆಕಸ್ಮಿಕ ಬೆಂಕಿಯಿಂದ ಸುಟ್ಟ ಗುಡಿಸಲು ಕುಟುಂಬಗಳಿಗೆ ಗೊರವನಹಳ್ಳಿ ಶ್ರೀ ಮಹಾಲಕ್ಷ್ಮೀ ದೇವಾಲಯ ಟ್ರಸ್ಟ್‌ನ ಆಡಳಿತ ಮಂಡಳಿಯಿಂದ ದವಸ, ಧ್ಯಾನ, ಪುರುಷರಿಗೆ ಬಟ್ಟೆ, ಮಹಿಳೆಯರಿಗೆ ತಲಾ 10 ಸೀರೆ ವಿತರಿಸಲಾಯಿತು.

ಕೊರಟಗೆರೆ: ತಾಲೂಕಿನ ಚಿಂಪುಗಾನಹಳ್ಳಿ ಗ್ರಾಮದಲ್ಲಿ ಆಕಸ್ಮಿಕ ಬೆಂಕಿಯಿಂದ ಸುಟ್ಟ ಗುಡಿಸಲು ಕುಟುಂಬಗಳಿಗೆ ಗೊರವನಹಳ್ಳಿ ಶ್ರೀ ಮಹಾಲಕ್ಷ್ಮೀ ದೇವಾಲಯ ಟ್ರಸ್ಟ್‌ನ ಆಡಳಿತ ಮಂಡಳಿಯಿಂದ ದವಸ, ಧ್ಯಾನ, ಪುರುಷರಿಗೆ ಬಟ್ಟೆ, ಮಹಿಳೆಯರಿಗೆ ತಲಾ 10 ಸೀರೆ ವಿತರಿಸಲಾಯಿತು.ಮಹಾಲಕ್ಷ್ಮೀ ದೇವಾಲಯ ಟ್ರಸ್ಟ್ ಅಧ್ಯಕ್ಷ ವಾಸುದೇವ್ ಮಾತನಾಡಿ, ಈಗಾಗಲೇ ಗೃಹ ಸಚಿವರು ನೊಂದಕುಟುಂಬಗಳಿಗೆ ಶೀಘ್ರವಾಗಿ ಮನೆ ಕಟ್ಟಿಕೊಡುವ ಭರವಸೆ ನೀಡಿದ್ದಾರೆ.ನೊಂದವರ ಪರವಾಗಿ ಶ್ರೀ ಮಠವು ಸದಾ ಇರುತ್ತದೆ ಎಂದರು.

ಗೊರವನಹಳ್ಳಿ ಶ್ರೀ ಮಹಾಲಕ್ಷ್ಮೀ ದೇವಾಲಯ ಟ್ರಸ್ಟ್‌ನ ಅಧ್ಯಕ್ಷ ವಾಸುದೇವ ನೇತೃತ್ವದಲ್ಲಿ ಟ್ರಸ್ಟ್‌ನ ಕಾರ್ಯನಿರ್ವಹಣಾಧಿಕಾರಿ ಕೇಶವಮೂರ್ತಿ ಮತ್ತು ಸಿಬ್ಬಂದಿ ಜಿಪುಂಗಾನಹಳ್ಳಿ ಬೆಂಕಿ ಅನಾಹುತ ಸ್ಥಳಕ್ಕೆ ಭೇಟಿ ನೀಡಿ ಸಂತ್ರಸ್ತರಿಗೆ ಸಾಂತ್ವನ ಹೇಳಿದರು.