ಹಲಗೂರು:
ಅನಿಕೇತನ ಲಯನ್ಸ್ ಕ್ಲಬ್ ವತಿಯಿಂದ ಶಾಲಾ ಬ್ಯಾಗ್ ಮತ್ತು ಲಿಂಗಪಟ್ಟಣ ಸುಂದ್ರಪ್ಪ ಅವರು ದಾನಗಳಿಂದ ಪಡೆದಿದ್ದ ನೋಟ್ ಪುಸ್ತಕ ಲೇಖನಿ ಸಾಮಗ್ರಿ, ಬಟ್ಟೆಗಳನ್ನು ವಿವಿಧ ಗ್ರಾಮಗಳ ಸರ್ಕಾರಿ ಶಾಲೆಗಳಲ್ಲಿ ವ್ಯಾಸಂಗ ಮಾಡುತ್ತಿರುವ ಅನಾಥ ಮಕ್ಕಳಿಗೆ ವಿತರಿಸಿದರು.ಮಳವಳ್ಳಿ ತಾಲೂಕಿನ ಬೆನಮನಹಳ್ಳಿ, ನಾರಾಯಣಪುರ, ಕಿರುಗಾವಲು, ಹೊಸಹಳ್ಳಿ, ಕುಂದೂರು, ಹುಸ್ಕೂರು, ತೊರೆ ಕಾಡನಹಳ್ಳಿ ಗ್ರಾಮಗಳಲ್ಲಿರುವ ಸರ್ಕಾರಿ ಶಾಲೆಗಳಲ್ಲಿ ವ್ಯಾಸಂಗ ಮಾಡುತ್ತಿರುವ 7 ಅನಾಥ ಮಕ್ಕಳಿಗೆ ಹಾಗೂ ಹುಸ್ಕೂರು ಗ್ರಾಮದ ತೀವ್ರ ಬಡ ಮಹಿಳೆಯೊಬ್ಬರಿಗೆ ಅಕ್ಕಿ ಮೂಟೆ ವಿತರಿಸಲಾಯಿತು.
ಅಂಬೇಡ್ಕರ್ ಭವನದಲ್ಲಿ ನಡೆದ ಕಾರ್ಯಕ್ರಮದಲ್ಲಿ ನಿವೃತ್ತಿ ಶಿಕ್ಷಕ ಸುಂದರಪ್ಪ ಮಾತನಾಡಿ, ಅನಾಥ ಮಕ್ಕಳು ದೇವರ ಮಕ್ಕಳು. ನಿಮಗೆ ಯಾವುದೇ ತೊಂದರೆಯಾದರೂ, ಅಗತ್ಯವಾಗಿ ಏನೇ ಬಿಕಿದ್ದರೂ ನಮ್ಮನ್ನು ಸಂಪರ್ಕಿಸುವಂತೆ ಕೋರಿದರು.ದಾನಿಗಳು ಇರುವವರೆಗೂ ನೀವು ಯಾವುದಕ್ಕೂ ದೃತಿಗೆಡದೆ ಎಸ್ಸೆಸ್ಸೆಲ್ಸಿ, ಪಿಯುಸಿ, ಪದವಿ ಮಾಡಿ ತಮ್ಮ ಭವಿಷ್ಯವನ್ನು ಉತ್ತಮವಾಗಿ ರೂಪಿಸಿಕೊಳ್ಳುವಂತೆ ಕರೆ ನೀಡಿದರು.
ಅನಿಕೇತನ ಲಯನ್ಸ್ ಕ್ಲಬ್ಲ್ ಅಧ್ಯಕ್ಷ ಮೂರ್ತಿ ಮಾತನಾಡಿ, ಸುಂದರಪ್ಪ ಹಾಗೂ ಸಹಪಾಠಿ ಬೋರೇಗೌಡರು ನಾವು ಮಾಡಿದ ಸಂಪಾದನೆಯಲ್ಲಿ ಒಂದು ಭಾಗವನ್ನು ಇಂತಹ ಉತ್ತಮ ಕಾರ್ಯಕ್ರಮಗಳಿಗೆ ಸಹಾಯ ಮಾಡುತ್ತೇವೆ. ಇವುಗಳನ್ನು ಸದ್ಬಳಕೆ ಮಾಡಿಕೊಂಡು ಉತ್ತಮ ಪ್ರಜೆ ಆಗಬೇಕು ಎಂದು ಸಲಹೆ ನೀಡಿದರು.
ಎಸ್.ಪ್ರಭು ಕ್ಲಿನಿಕ್ ವೈದಾಧಿಕಾರಿ ಉಮೇಶ್ ಮಠಪತಿ ಮಾತನಾಡಿ, ಮಕ್ಕಳಿಗೆ ಲೇಖನಿ ಸಾಮಗ್ರಿಗಳಾಗಲಿ ವಸ್ತ್ರಗಳಾಗಲಿ ಅಥವಾ ಇನ್ನಿತರೆ ಪದಾರ್ಥಗಳನ್ನು ಅವಶ್ಯಕತೆ ಇದ್ದರೆ ನಾವು ಕುಡಿಸಿಕೊಡುವುದಾಗಿ ತಿಳಿಸಿದರು.
ಈ ವೇಳೆ ಮಾತುಶ್ರೀ ಕ್ಲಿನಿಕ್ ವೈದ್ಯಾಧಿಕಾರಿ ಸಿ.ಪ್ರವೀಣ್, ಆನಂದ, ಲಿಂಗರಾಜು, ಮಲ್ಲೇಶ, ರಾಮಚಂದ್ರ, ರವಿ, ಬೋರೇಗೌಡ,ಅಭಿ , ಜಿ.ಎಸ್.ಕೃಷ್ಣ ,ಮಹೇಶ ಸೇರಿದಂತೆ ಇತರರು ಇದ್ದರು.